ಮೈಸೂರು, ಆ.19- ಮೈಸೂರಿನ ರಾಯೇಲ್ ಕಾಂಕರ್ಡ್ ಇಂಟರ್ ನ್ಯಾಷ ನಲ್ ಸ್ಕೂಲ್ (ಆರ್‍ಸಿಐಎಸ್)ನಲ್ಲಿ ಇತ್ತೀ ಚೆಗೆ 74ನೇ ಸ್ವಾತಂತ್ರ್ಯೋತ್ಸವವನ್ನು ದೇಶ ಭಕ್ತಿ ಘೋಷಣೆಗಳೊಂದಿಗೆ ಸಡಗರ ದಿಂದ ಆಚರಿಸಲಾಯಿತು.
ಆರ್‍ಸಿಐಎಸ್ ಮೈಸೂರು ಅಧ್ಯಕ್ಷ ಶಿವ ಪ್ರಸಾದ್ ಮತ್ತು ಮ್ಯಾನೇಜಿಂಗ್ ಟ್ರಸ್ಟಿ ನಿಖಿಲ್ ಶಿವಪ್ರಸಾದ್ ಮುಖ್ಯ ಅತಿಥಿ ಯಾಗಿದ್ದು, ತ್ರಿವರ್ಣ ಧ್ವಜಾರೋಹಣ ನೆರವೇರಿಸಿದರು. ಬಳಿಕ ರಾಷ್ಟ್ರಗೀತೆ ಹಾಡ ಲಾಯಿತು. ಶಿಕ್ಷಕ ಸಮೂಹ `ಝಂಡಾ ಊಂಚಾ’, `ಹಮ್ ಸಬ್ ಭಾರತೀಯ ಹೈ’ ಮೊದಲಾದ ದೇಶಭಕ್ತಿ ಗೀತೆಗಳನ್ನು ಹಾಡಿದರು. ಬಳಿಕ ಪ್ರಾಂಶುಪಾಲರಾದ ಪಿ.ಅರೋಕಿಯಾ ರಾಜ್ ವಿದ್ಯಾರ್ಥಿ ಗಳನ್ನುದ್ದೇಶಿಸಿ ಮಾತನಾಡಿ, ದೇಶದ ಸ್ವಾತಂತ್ರ್ಯಕ್ಕಾಗಿ ಹುತಾತ್ಮರಾದವರನ್ನು ಸ್ಮರಿಸಿ ದರು. ಕೊರೊನಾ ವಿರುದ್ಧ ಹೋರಾಡು ತ್ತಿರುವ ಕೋವಿಡ್ ವಾರಿಯರ್ಸ್‍ಗಳಿಗೆ ಧನ್ಯವಾದ ಹೇಳಿದರು. ಪೋಷಕರು ಫೇಸ್ ಬುಕ್ ಲೈವ್‍ನಲ್ಲಿ ಕಾರ್ಯಕ್ರಮ ವೀಕ್ಷಿಸಿ ದರು. ಶೈಕ್ಷಣಿಕ ನಿರ್ದೇಶಕಿ ರೂಪಲತಾ ಉಪಸ್ಥಿತರಿದ್ದರು.