ಚೆನೈ,ಆ.19: ಖ್ಯಾತ ಹಿನ್ನೆಲೆ ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರು ಬೇಗ ಗುಣಮುಖರಾಗಲಿ ಎಂದು ತಮಿಳು ಚಿತ್ರರಂಗದ ಹೆಸರಾಂತ ನಟ-ನಟಿಯರು, ಸಂಗೀತ ನಿರ್ದೇ ಶಕರು ಹಾಗೂ ಚಿತ್ರ ರಂಗದ ಇತರರು ನಾಳೆ ಸಾಮೂಹಿಕವಾಗಿ ಪ್ರಾರ್ಥನೆ ಮಾಡಲಿದ್ದಾರೆ. ಸೂಪರ್ ಸ್ಟಾರ್ ರಜನಿಕಾಂತ್, ಕಮಲಹಾಸನ್, ಎ.ಆರ್. ರೆಹಮಾನ್, ಇಳಯರಾಜ, ಭಾರತಿರಾಜಾ ಸೇರಿದಂತೆ ಹಲವರು ಈ ಪ್ರಾರ್ಥನೆ ಮಾಡಲಿದ್ದಾರೆ.
ಆದರೆ ಕೊರೊನಾ ಸೋಂಕು ಇರು ವುದರಿಂದ ಸಾರ್ವಜನಿಕ ಸ್ಥಳದಲ್ಲಿ ಈ ಸಾಮೂಹಿಕ ಪ್ರಾರ್ಥನೆ ಮಾಡದೆ ತಮ್ಮ ಮನೆಗಳಲ್ಲಿಯೇ ಪ್ರಾರ್ಥನೆ ಸಲ್ಲಿ ಸಲಿದ್ದಾರೆ. ಈ ಸಾಮೂಹಿಕ ಪಾರ್ಥನೆ ಕಾರ್ಯಕ್ರಮದಲ್ಲಿ ಎಲ್ಲರೂ ಅವರ ಮನೆಗಳಲ್ಲಿಯೇ ಮಾಡಬೇಕು ಎಂದು ಸಾಮಾಜಿಕ ಜಾಲತಾಣದಲ್ಲಿ ಮನವಿ ಮಾಡಲಾಗಿದೆ. ಬಾಲಸುಬ್ರಮಣ್ಯ ಅವರಿಗೆ ವೆಂಟಿಲೇಟರ್ ಮತ್ತು ಇಸಿಎಂಒ ಸಾಧನ ಅಳವಡಿಸಿ ಐಸಿಯುನಲ್ಲಿಯೇ ಚಿಕಿತ್ಸೆ ಮುಂದುವರಿಸಲಾಗಿದೆ ಎಂದು ಚೆನ್ನೈನ ಎಂಜಿಎಂ ಹೆಲ್ತ್‍ಕೇರ್ ತಿಳಿಸಿದೆ. ಎಸ್‍ಪಿಬಿ ಅವರ ಆರೋಗ್ಯದ ಮೇಲೆ ವೈದ್ಯರ ತಂಡ ತೀವ್ರ ನಿಗಾ ಇಟ್ಟಿದೆ ಎಂದು ಹೆಲ್ತ್ ಬುಲೆಟಿನ್‍ನಲ್ಲಿ ತಿಳಿಸಲಾಗಿದೆ.