ನಾನು ಆಸ್ಪತ್ರೆಗೆ ಹೋದಾಗ ನೆರೆಹೊರೆಯವರು ಮನೆಗೆ ಹಾಲು, ತರಕಾರಿ ತಂದುಕೊಟ್ಟು ನೆರವಾದರು
ಮೈಸೂರು

ನಾನು ಆಸ್ಪತ್ರೆಗೆ ಹೋದಾಗ ನೆರೆಹೊರೆಯವರು ಮನೆಗೆ ಹಾಲು, ತರಕಾರಿ ತಂದುಕೊಟ್ಟು ನೆರವಾದರು

August 20, 2020

ಮೈಸೂರು, ಆ.19(ವೈಡಿಎಸ್)- `ನಾನು ಕೊರೊನಾ ದಿಂದ ಆಸ್ಪತ್ರೆಗೆ ಹೋದಾಗ ಕ್ವಾರಂಟೈನ್‍ನಲ್ಲಿದ್ದ ಕುಟುಂಬ ದವ್ರಿಗೆ ಸಂಬಂಧಿಕರು, ನೆರೆಹೊರೆಯವರು ದಿನಸಿ ಪದಾರ್ಥ ಗಳನ್ನು ತಂದುಕೊಟ್ಟು ಕಷ್ಟಕ್ಕೆ ಸ್ಪಂದಿಸಿದರು. ಆದರೆ, ಕೊರೊನಾ ಗೆದ್ದು ಮನೆಗೆ ಬಂದ 2 ದಿನಕ್ಕೇ ಪತ್ನಿ, ಮಗಳಿಗೆ ಪಾಸಿಟಿವ್ ಬಂದಿದ್ದು ನೋವುಂಟು ಮಾಡಿತು’…

ಇದು ಕೊರೊನಾದಿಂದ ಗುಣಮುಖರಾದ ಸಾತಗಳ್ಳಿ ನಿವಾಸಿ ಫಾರ್ಮಾಸಿಸ್ಟ್‍ವೊಬ್ಬರ (ರೋಗಿ ಸಂಖ್ಯೆ ಎಂವೈಎಸ್2083) ಬೇಸರದ ನುಡಿಗಳು.

ನಾನು ಮೆಡಿಕಲ್ ಸ್ಟೋರ್‍ವೊಂದರಲ್ಲಿ ಫಾರ್ಮಸಿಸ್ಟ್ ಆಗಿರುವೆ. ಜು.9ರಂದು ಸ್ವಲ್ಪ ಜ್ವರ ಬಂತು. ಮಾತ್ರೆ ತಗೊಂಡೆ. ಜ್ವರ ಹೋಯ್ತು. ಮರುದಿನ ಮತ್ತೆ ಜ್ವರ ಬಂತು. ಹೀಗೆ 10 ದಿನ ಮಾತ್ರೆ ತಗೊಂಡ್ರು ಜ್ವರ ಹೋಗ್ಲಿಲ್ಲ. ಜ್ವರದೊಂ ದಿಗೆ, ಕೆಮ್ಮು ಹೆಚ್ಚಾಯ್ತು. ಊಟ ಮಾಡೋಕೆ ಆಗ್ತಿರ್ಲಿಲ್ಲ. ಇದ್ರಿಂದ ಸುಸ್ತು ಹೆಚ್ಚಾಗಿ ತಿರುಗಾಡಲು ಆಗದಷ್ಟು ನಿತ್ರಾಣ ಗೊಂಡೆ. ಕೊರೊನಾ ಬಂದಿರ್ಬಹುದು ಎಂದು ಅನು ಮಾನ ಬಂದು ಜು.19ರಂದು ಕೆ.ಆರ್.ಆಸ್ಪತ್ರೆಗೆ ಹೋಗಿ ಪರೀಕ್ಷೆ ಮಾಡಿಸಿದೆ. ಪಾಸಿಟಿವ್ ಬಂತು.

ಜು.21ರಂದು ಆಂಬುಲೆನ್ಸ್‍ನಲ್ಲಿ ಮೇಟಗಳ್ಳಿಯ ಕೋವಿಡ್ ಕೇಂದ್ರಕ್ಕೆ ಕರೆದೊಯ್ದರು. ಜ್ವರ, ಸುಸ್ತಿನಿಂದ ಮಾತಾಡೋಕೆ ಸಾಧ್ಯವಾಗದ ಸ್ಥಿತಿಯಲ್ಲಿದ್ದ ನನಗೆ ಡಾಕ್ಟರ್ ಇಂಜಕ್ಷನ್ ಮಾಡಿ, ಆಕ್ಸಿಜನ್ ನೀಡಿದರು. ಒಂದೇ ದಿನಕ್ಕೆ ಜ್ವರ, ಕೆಮ್ಮು ಹೋಯ್ತು. ಪ್ರತಿದಿನ ಡಾಕ್ಟರ್ ಬಂದ್ರು ಆರೋಗ್ಯ ವಿಚಾರಿ ಸುತ್ತಿದ್ದರು. ಊಟದ ವ್ಯವಸ್ಥೆಯೂ ಚೆನ್ನಾಗಿತ್ತು. ಕುಡಿಯಲು, ಸ್ನಾನಕ್ಕೆ ಬಿಸಿನೀರು ನೀಡುತ್ತಿದ್ದರು. 6 ದಿನ ಆಸ್ಪತ್ರೆಯಲ್ಲಿದ್ದೆ. ಜು.27ರಂದು ಡಿಸ್ಚಾರ್ಜ್ ಆಗಿ ಮನೆಗೆ ಬಂದಾಗ ನೆರೆಹೊರೆ ಯವರು ಮನೆ ಬಳಿ ಬಂದು ಆರೋಗ್ಯ ವಿಚಾರಿಸಿದರು.

ಪತ್ನಿ, ಮಗಳಿಗೂ ಕೊರೊನಾ: ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ಬಂದ 2 ದಿನಕ್ಕೇ ಪತ್ನಿ ಮತ್ತು ಮಗಳಿಗೂ ಪಾಸಿಟಿವ್ ಬಂತು. ಅವರನ್ನು ಉದಯಗಿಯ ಕೋವಿಡ್ ಕೇಂದ್ರಕ್ಕೆ ಕರೆದೊಯ್ದರು. 5 ದಿನ ಚಿಕಿತ್ಸೆ ಪಡೆದು ಗುಣಮುಖ ರಾಗಿ ಮನೆಗೆ ಬಂದರು. ಮೂವರೂ 14 ದಿನ ಕ್ವಾರಂಟೈನ್ ನಲ್ಲಿದ್ದೆವು. ನನಗೆ ಜು.12ಕ್ಕೆ ಮುಕ್ತಾಯವಾಗಿದ್ದು, 3 ದಿನ ಗಳಿಂದ ಮೆಡಿಕಲ್ ಸ್ಟೋರ್‍ಗೆ ಕೆಲಸಕ್ಕೆ ಹೋಗುತ್ತಿದ್ದೇನೆ.

ಸಂಬಂಧಿಕರ ಮನೆ ಭೇಟಿ: ಜ್ವರದಿಂದ ಬಳಲುತ್ತಿದ್ದ ಸಂಬಂಧಿಕರ ಮನೆಗೆ ಹೋಗಿ ನೋಡ್ಕೊಂಡು ಬಂದಿದ್ದೆ. ಅದಾದ ಕೆಲ ದಿನಗಳ ನಂತರ ಕೊರೊನಾದಿಂದ ಅವರು ಸಾವನ್ನಪ್ಪಿದರು ಎಂದು ಡಾಕ್ಟರ್ ತಿಳಿಸಿದರು. ಸಂಬಂಧಿ ಮನೆಗೆ ಹೋಗಿದ್ದಕ್ಕೆ ನನಗೂ ಕೊರೊನಾ ಬಂದಿರ ಬಹುದೇನೋ? ಎಂದು ಶಂಕೆ ವ್ಯಕ್ತಪಡಿಸಿದರು.

Translate »