ಭಾರತೀಯ ಶಾಸ್ತಿçÃಯ ಸಂಗೀತ ವಿಶ್ವದ ಎಲ್ಲಾ ಸಂಗೀತಗಳ ತಾಯಿಬೇರು
ಮೈಸೂರು

ಭಾರತೀಯ ಶಾಸ್ತಿçÃಯ ಸಂಗೀತ ವಿಶ್ವದ ಎಲ್ಲಾ ಸಂಗೀತಗಳ ತಾಯಿಬೇರು

May 14, 2022

ಮೈಸೂರು, ಮೇ ೧೩(ಎಂಟಿವೈ)- ಭಾರತೀಯ ಶಾಸ್ತಿçÃಯ ಸಂಗೀತವೇ ವಿಶ್ವದ ಎಲ್ಲಾ ಸಂಗೀತದ ತಾಯಿ ಬೇರಾಗಿದೆ. ನಮ್ಮ ಶಾಸ್ತಿçÃಯ ಸಂಗೀತದಲ್ಲಿರುವ ಶಕ್ತಿ ವಿಶ್ವದ ಯಾವುದೇ ಸಂಗೀತದಲ್ಲೂ ಇಲ್ಲ ಎಂದು ಕೊಳಲು ವಾದಕ ವಿದ್ವಾನ್ ಪ್ರವೀಣ್ ಗೋಡ್ಖಿಂಡಿ ಅಭಿಪ್ರಾಯಪಟ್ಟಿದ್ದಾರೆ.

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾ ನಿಲಯದ ಘಟಿಕೋತ್ಸವ ಭವನದಲ್ಲಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಆಯೋಜಿಸಿದ್ದ `ರಾಷ್ಟç ಪುನರ್ ನಿರ್ಮಾಣ ಕ್ಕಾಗಿ ಸಂಸ್ಕೃತಿ ಚಳವಳಿ’ ಕಾರ್ಯಕ್ರಮ ವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಂಗೀತದ ಪರಂಪರೆಯಲ್ಲಿ ಭಾರತೀಯ ಸಂಗೀತ ಹೆಚ್ಚು ಶಕ್ತಿಯುತ ವಾಗಿದೆ. ಇದರಿಂದಲೇ ವಿಶ್ವದ ಎಲ್ಲಾ ಸಂಗೀತದ ತಾಯಿ ಬೇರು ಎಂದು ನಾವೆಲ್ಲ ಹೆಮ್ಮೆಯಿಂದ ಹೇಳಬೇಕು. ಎಲ್ಲಾ ಸಂಗೀತಕ್ಕೂ ನಮ್ಮ ಸಂಗೀತವೇ ತಾಯಿ ಇದ್ದಂತೆ. ಪಾಶ್ಚಿಮಾತ್ಯ ಸಂಗೀತದಲ್ಲಿ ಅಬ್ಬರವಿದೆ. ಹೀಗಾಗಿ ಯುವ ಸಮುದಾಯ ಪಾಶ್ಚಿಮಾತ್ಯ ಸಂಗೀತದ ಕಡೆ ಆಕರ್ಷಿತ ರಾಗುತ್ತಿದ್ದಾರೆ. ಅಬ್ಬರದ ಸಂಗೀತ ನಡುವೆಯೂ ಎಲ್ಲರ ಚಿತ್ತವನ್ನು ಸೆಳೆದು ಮೋಡಿ ಮಾಡುವ, ಜನರನ್ನು ಮೋಹಿಸುವ, ಮರಳು ಮಾಡುವ ಶಕ್ತಿ ಮತ್ತು ಸಾಮರ್ಥ್ಯ ಭಾರತೀಯ ಸಂಗೀತಕ್ಕೆ ಇದೆ ಎಂದರು.

ಯುವ ಸಮುದಾಯ ಪಾಶ್ಚಿಮಾತ್ಯ ಸಂಸ್ಕೃತಿಯ ಕಡೆಗೆ ಆಕರ್ಷಿತರಾಗದೆ ನಮ್ಮತನವನ್ನು ಉಳಿಸಿಕೊಳ್ಳಬೇಕು. ಸುಸಂಸ್ಕೃತ ಸಮಾಜ ನಿರ್ಮಾಣಕ್ಕೆ ಇದು ಅತ್ಯಂತ ಅವಶ್ಯಕ. ಸುಸಂಸ್ಕೃತ ಸಮಾಜ ನಿರ್ಮಾಣ ಮಾಡುವಲ್ಲಿ ನಮ್ಮ ಜವಾ ಬ್ದಾರಿಯನ್ನು ಅರ್ಥ ಮಾಡಿಕೊಳ್ಳಬೇಕು. ಒಂದೇ ಉಸಿರಿನಲ್ಲಿ ಸಂಗೀತ ನುಡಿಸುವ ಕಲೆ ನಮ್ಮದು ಎಂಬ ರೀತಿಯಲ್ಲಿ ಪಾಶ್ಚಿ ಮಾತ್ಯರು ಬಿಂಬಿಸಿಕೊಳ್ಳುತ್ತಿದ್ದಾರೆ. ಆದರೆ, ಅದರ ಮೂಲ ಭಾರತವೇ ಆಗಿದೆ. ಹಲವು ಶತಮಾನಗಳಿಂದಲೂ ಒಂದೇ ಉಸಿರಿನಲ್ಲಿ ಸಂಗೀತ ನುಡಿಸುವ ಕಲೆ ಯನ್ನು ಭಾರತೀಯರು ಸಿದ್ಧಿಸಿಕೊಂಡಿದ್ದಾರೆ. ೪೫ ನಿಮಿಷಗಳ ಕಾಲ ಒಂದೇ ಉಸಿರಿನಲ್ಲಿ ಶಂಖನಾದ ಮೊಳಗಿಸಿದ್ದನ್ನು ನಾನು ಕಂಡಿz್ದೆÃನೆ. ಕೊಳಲಿನಲ್ಲಿ ಒಂದೇ ಉಸಿರಿನಲ್ಲಿ ದೀರ್ಘ ಕಾಲ ನುಡಿಸುವ ಪ್ರಯೋಗವನ್ನು ನಾನು ಮಾಡಿz್ದÉÃನೆ. ನಾವು ಪಾಶ್ಚಿಮಾತ್ಯರನ್ನು ಅನುಕರಣೆ ಮಾಡುವುದನ್ನು ಬಿಟ್ಟು ನಮ್ಮತನವನ್ನು ಉಳಿಸಿಕೊಳ್ಳುವ ಕಡೆಗೆ ಹೆಚ್ಚಿನ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.

ಭಾರತೀಯ ಸಂಗೀತ ಕ್ಷೇತ್ರದಲ್ಲಿ ಹಿಂದೂಸ್ತಾನಿ ಮತ್ತು ಕರ್ನಾಟಕ ಸಂಗೀತ ಮೇಲೆ ಬಹಳಷ್ಟು ಅಧÀ್ಯಯನ, ಸಂಶೋಧÀನೆಗಳು ಆಗಿವೆ. ಯಾವುದನ್ನು ಸುಖಾಸುಮ್ಮನೇ ಅನುಸರಿಸಬೇಡಿ. ಯೋಚಿಸಿ ಅನುಸರಿಸಬೇಕು. ನಮ್ಮ ಭಾಷೆ, ಸಂಸ್ಕೃತಿ, ಕಲೆಯ ಮೇಲೆ ಅಭಿಮಾನ ಇರಬೇಕು. ಸುಸಂಸ್ಕೃತ ಸಮಾಜ ಕಟ್ಟುವಲ್ಲಿ ನಿಮ್ಮ ಜವಾಬ್ದಾರಿಯನ್ನು ನೀವು ಅರ್ಥ ಮಾಡಿ ಕೊಳ್ಳಬೇಕು. ನಮ್ಮ ಪೂರ್ವಜರು ಬಿಟ್ಟು ಕಲಿಸಿ ಹೋದ, ಬರೆದು ಹೋದ ಶಾಸ್ತçಗಳಲ್ಲಿ ನಮ್ಮ ಸಂಸ್ಕೃತಿ ಇದ್ದು, ಅದನ್ನು ಅರ್ಥ ಮಾಡಿಕೊಂಡು ಸುಸಂಸ್ಕೃತರಾಗಬೇಕು. ಇಡೀ ಜಗತ್ತು ಭಾರತದ ಕಡೆ ನೋಡುತ್ತಿದೆ. ಅದಕ್ಕೆ ತಕ್ಕಂತೆ ನಾವು ಇರಬೇಕು. ಹೊಸತನವನ್ನು ಅಳವಡಿಸಿ ಕೊಳ್ಳಬೇಕು ಎಂದು ಕಿವಿಮಾತು ಹೇಳಿದರು. ಬಳಿಕ ಐದು ನಿಮಿಷಗಳ ಕಾಲ ಕೊಳಲು ನುಡಿಸುವ ಮೂಲಕ ನೆರೆದಿದ್ದ ವಿದ್ಯಾರ್ಥಿಗಳಿಗೆ ಸಂಗೀತದ ಸವಿಯನ್ನು ಉಣಬಡಿಸಿದರು.

ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ: `ರಾಷ್ಟç ಪುನರ್ ನಿರ್ಮಾಣಕ್ಕಾಗಿ ಸಂಸ್ಕೃತಿ ಚಳವಳಿ’ ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧೆಡೆಯಿಂದ ೧,೫೦೦ ವಿದ್ಯಾರ್ಥಿಗಳು ಪಾಲ್ಗೊಂಡು ತಮ್ಮ ಕಲಾ ಶ್ರೀಮಂ ತಿಕೆಯನ್ನು ತೋರ್ಪಡಿಸಿದರು. ಏಕಾಂತ ನಾಟಕ, ಬೀದಿ ನಾಟಕ, ಜನಪದ ಸಮೂಹ ನೃತ್ಯ, ಜನಪದ ಸಮೂಹ ಗೀತೆ, ಶಾಸ್ತಿçÃಯ ಸಮೂಹ ನೃತ್ಯ, ದೇಶ ಭಕ್ತಿ ಸಮೂಹ ಗೀತೆ, ಚಿತ್ರಕಲೆ, ಮೂರ್ತಿ ರಚನೆ, ಸ್ವರಚಿತ ಕವನ ವಾಚನ, ಚರ್ಚಾ ಸ್ಪರ್ಧೆ, ಪ್ರಬಂಧ, ಭಾಷಣ ಹಾಗೂ ಛಾಯಾಗ್ರಹಣ ಸ್ಪರ್ಧೆ ಜರುಗಿತು.

Translate »