ಅವಧೂತ ದತ್ತ ಪೀಠದ ಸಂಸ್ಥಾಪಕ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರ ೮೦ನೇ ಜನ್ಮದಿನಾಚರಣೆಗೆ ಮುನ್ನುಡಿ ಮೇಕೆದಾಟುವಿನಿಂದ ಮೈಸೂರುವರೆಗೆ ೬ ದಿನಗಳ ಕಾಲ ‘ವಿಶ್ವಶಾಂತಿ ಪಾದಯಾತ್ರೆ’
ಮೈಸೂರು

May 12, 2022

ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ವಿಜಯ ಹನುಮ ಗೋಪುರ
ಮೇ ೧೩ರಿಂದ ೧೮ರವರೆಗೆ ಮಹಾಯಾತ್ರೆ

ಮೇ ೨೨ರಿಂದ ೩೧ರವರೆಗೆ ವರ್ಧಂತ್ಯುತ್ಸವ

ದೊಡ್ಡ ಆಲಹಳ್ಳಿ, ಸಾತನೂರು,ಹಲಗೂರು, ಮಳವಳ್ಳಿ, ಬನ್ನೂರು ಹಾದು ಮೈಸೂರು ಆಶ್ರಮ

ಪಾದಯಾತ್ರೆಯಲ್ಲಿ ಸುಮಾರು ೨೦೦ ಮಂದಿ ಭಾಗಿ ಸಾಧ್ಯತೆ

ಮೈಸೂರು, ಮೇ ೧೧ (ಆರ್‌ಕೆಬಿ)- ಮೈಸೂರಿನ ಅವಧೂತ ದತ್ತಪೀಠದ ಸಂಸ್ಥಾಪಕ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರ ಹತ್ತು ದಿನಗಳ ೮೦ನೇ ಜನ್ಮದಿನಾಚರಣೆಯ ಪೂರ್ವಭಾವಿಯಾಗಿ ದತ್ತಪೀಠದ ಕಿರಿಯ ಶ್ರೀಗಳಾದ ದತ್ತ ವಿಜ ಯಾನಂದ ತೀರ್ಥ ಸ್ವಾಮೀಜಿ ಅವರು ಮೇ ೧೩ರಿಂದ ೧೮ರವರೆಗೆ ಆರು ದಿನಗಳ ‘ವಿಶ್ವಶಾಂತಿ ಪಾದಯಾತ್ರೆ’ ಕೈಗೊಳ್ಳಲಿದ್ದಾರೆ.

ಸ್ವತಃ ಈ ವಿಷಯವನ್ನು ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ ಬುಧ ವಾರ ಮೈಸೂರಿನ ನಂಜನಗೂಡು ರಸ್ತೆಯಲ್ಲಿ ರುವ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮ ದಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಅವಧೂತ ದತ್ತಪೀಠಾಧಿಪತಿ ಶ್ರೀ ಗಣ ಪತಿ ಸಚ್ಚಿದಾನಂದ ಸ್ವಾಮೀಜಿಯವರ ೮೦ನೇ ವರ್ಧಂತ್ಯುತ್ಸವ ಮೇ ೨೨ರಿಂದ ೩೧ ರವರೆಗೆ ನಡೆಯಲಿವೆ. ಇದರ ಅಂಗವಾಗಿ ಮೇ ೧೩ರಿಂದ ೧೮ರವರೆಗೆ ವಿಶ್ವಶಾಂತಿ ಪಾದಯಾತ್ರೆ ಕೈಗೊಳ್ಳಲಾಗುತ್ತಿದೆ. ಕಾವೇರಿ ನದಿ ಹರಿಯುವ ಮೇಕೆದಾಟುವಿನಿಂದ ಮೇ ೧೩ರಂದು ಪಾದಯಾತ್ರೆ ಆರಂಭವಾಗ ಲಿದ್ದು, ದೊಡ್ಡ ಆಲಹಳ್ಳಿ, ಸಾತನೂರು, ಹಲಗೂರು, ಮಳವಳ್ಳಿ ಹಾಗೂ ಬನ್ನೂರು ಮಾರ್ಗವಾಗಿ ಸುಮಾರು ೮೦ ಕಿಲೋ ಮೀಟರ್, ನಾಮ ಸಂಕೀರ್ತನೆಯೊAದಿಗೆ ೧೮ರಂದು ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮ ವನ್ನು ಪಾದಯಾತ್ರೆ ತಲುಪಲಿದೆ ಎಂದರು.

ಯಾತ್ರೆಯ ನಡುವೆ ಬರುವ ನರಸಿಂಹ ಜಯಂತಿ ಸಂದರ್ಭದಲ್ಲಿ ಮಳವಳ್ಳಿ ಬಳಿಯ ಪ್ರಸಿದ್ಧ ಶ್ರೀ ನರಸಿಂಹಸ್ವಾಮಿ ದೇವಾಲಯಕ್ಕೂ ಭೇಟಿ ನೀಡಿ, ಅಲ್ಲಿ ನರಸಿಂಹಸ್ವಾಮಿ ದರ್ಶನ ಪಡೆಯಲಾಗುವುದು. ಪಾದಯಾತ್ರೆಯಲ್ಲಿ ೮೦ ಮಂದಿ ಪಾಲ್ಗೊಳ್ಳುವ ಸಂಕಲ್ಪ ಮಾಡ ಲಾಗಿತ್ತು. ಭಕ್ತರ ಬೇಡಿಕೆ ಹಿನ್ನೆಲೆ ಅದನ್ನು ೨೦೦ಕ್ಕೆ ಹೆಚ್ಚಿಸಲಾಯಿತು ಎಂದರು.ಮೇ ೧೮ರಂದು ಮೈಸೂರು ತಲು ಪಿದ ನಂತರ ಮೇಕೆದಾಟಿನಿಂದ ತರ ಲಾದ ಕಾವೇರಿ ನೀರನ್ನು ದತ್ತಪೀಠದಲ್ಲಿ ರುವ ಶ್ರೀ ದತ್ತಾತ್ರೇಯ ಸ್ವಾಮಿಗೆ ಅಭಿ ಷೇಕ ಹಾಗೂ ಗಣಪತಿ ಸಚ್ಚಿದಾನಂದ ಶ್ರೀಗಳ ಪಾದಪೂಜೆಯನ್ನು ನೆರವೇರಿಸಲಾಗುವುದು ಎಂದರು.

ಪಾದಯಾತ್ರೆ ಐದು ಪ್ರಮುಖ ಉದ್ದೇಶಗಳು: ಮಹಿಳೆಯರು ಮತ್ತು ಮಕ್ಕಳ ಆರೋಗ್ಯ ಮತ್ತು ಸುರಕ್ಷತೆ, ಗೋ ಸಂರಕ್ಷಣೆ, ಆರ್ಥಿಕವಾಗಿ ದುರ್ಬಲವಾಗಿರುವ ಶಾಲೆಗಳು ಮತ್ತು ವೇದ ಪಾಠಶಾಲೆಗಳಿಗೆ ನೆರವು, ಬಡ ರೈತರ ಕಾಳಜಿ ಮತ್ತು ‘ಪರ್ಯಾವರಣ’, ಅಂದರೆ ಸಸಿಗಳನ್ನು ನೆಡುವ ಮೂಲಕ ಪರಿಸರ ಮತ್ತು ಭೂಮಿ ತಾಯಿಯ ಸಂರಕ್ಷಣೆ ಉದ್ದೇಶ ಹೊಂದಲಾಗಿದೆ ಎಂದರು. ಇದೇ ವೇಳೆ ಪೌರಕಾರ್ಮಿಕರಿಗಾಗಿ ಆಶ್ರಮವು ಬನ್ನಿಮಂಟಪ ಮತ್ತು ವಸಂತ ನಗರದಲ್ಲಿ ನಿರ್ಮಿಸಿರುವ ದೊಡ್ಡಮ್ಮತಾಯಿ ದೇವಾಲಯಗಳು ಮತ್ತು ಆಶ್ರಮದ ಆವರಣದಲ್ಲಿ ನೂತನವಾಗಿ ನಿರ್ಮಿಸಲಾದ ‘ವಿಜಯ ಹನುಮ ಗೋಪುರ’ ಲೋಕಾರ್ಪಣೆಗೊಳ್ಳಲಿದೆ ಎಂದು ಕಿರಿಯ ಶ್ರೀಗಳು ತಿಳಿಸಿದರು.
ಮೈಸೂರು, ಮೇ ೧೧ (ಆರ್‌ಕೆಬಿ)- ಮೈಸೂರಿನ ಅವಧೂತ ದತ್ತಪೀಠದ ಸಂಸ್ಥಾಪಕ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರ ಹತ್ತು ದಿನಗಳ ೮೦ನೇ ಜನ್ಮದಿನಾಚರಣೆಯ ಪೂರ್ವಭಾವಿಯಾಗಿ ದತ್ತಪೀಠದ ಕಿರಿಯ ಶ್ರೀಗಳಾದ ದತ್ತ ವಿಜ ಯಾನಂದ ತೀರ್ಥ ಸ್ವಾಮೀಜಿ ಅವರು ಮೇ ೧೩ರಿಂದ ೧೮ರವರೆಗೆ ಆರು ದಿನಗಳ ‘ವಿಶ್ವಶಾಂತಿ ಪಾದಯಾತ್ರೆ’ ಕೈಗೊಳ್ಳಲಿದ್ದಾರೆ.ಸ್ವತಃ ಈ ವಿಷಯವನ್ನು ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ ಬುಧ ವಾರ ಮೈಸೂರಿನ ನಂಜನಗೂಡು ರಸ್ತೆಯಲ್ಲಿ ರುವ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮ ದಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

Translate »