ದೆಹಲಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿಕೆ
ಪ್ರಧಾನಿ ಮೋದಿ ಅವರ ನಿರ್ಧಾರವನ್ನು ಸಿಎಂಗೆ ಮುಟ್ಟಿಸಿದ ಅಮಿತ್ ಶಾ: ಅಡ್ಡಗೋಡೆ ಮೇಲೆ ದೀಪ ಇಟ್ಟಂತಹ ಪರಿಸ್ಥಿತಿ
ಬೆಂಗಳೂರು, ಮೇ ೧೧ (ಕೆಎಂಶಿ)-ಕರ್ನಾಟಕ ರಾಜಕೀಯಕ್ಕೆ ಸಂಬAಧಿಸಿದAತೆ ಪ್ರಧಾನಿ ನರೇಂದ್ರ ಮೋದಿ ತೆಗೆದುಕೊಂಡಿರುವ ನಿರ್ಧಾರವನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮುಟ್ಟಿಸಿದ್ದಾರೆ. ಈ ಮಧ್ಯೆ ಸಂಪುಟ ವಿಸ್ತರಣೆ ಇಲ್ಲವೇ ಪುರ‍್ರಚನೆ ಸಂಬAಧ ಯಾವಾಗ ಏನು ಬೇಕಾದರೂ ಆಗಬಹುದು. ಮರ‍್ನಾಲ್ಕು ದಿನದಲ್ಲಿ ವರಿಷ್ಠರು ಈ ಬಗ್ಗೆ ಸಂದೇಶ ಕಳುಹಿಸುವ ಸಾಧ್ಯತೆ ಇದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಪ್ರಧಾನಿ ನಿರ್ಧಾರ ಏನೆಂಬುದು ಇನ್ನೂ ಬಹಿರಂಗವಾಗಿಲ್ಲ. ಆಡಳಿತ ಮತ್ತು ಪಕ್ಷದಲ್ಲಿನ ನಾಯಕತ್ವ ಗೊಂದಲ ಪರಿಹರಿಸಿ ಕೊಳ್ಳಲು ಕಳೆದ ಎರಡು ದಿನಗಳಿಂದ ದೆಹಲಿ ಯಲ್ಲಿ ಮೊಕ್ಕಾಂ ಹೂಡಿದ್ದ ಸಿಎಂ ಅವರು, ಇಂದು ಶಾ ಅವರನ್ನು ಭೇಟಿ ಮಾಡಿ ಸುಮಾರು ೩೦ ನಿಮಿಷ ಸಮಾಲೋಚನೆ ನಡೆಸಿದರು. ಗೃಹ ಸಚಿವರನ್ನು ಭೇಟಿ ಮಾಡುವುದಕ್ಕೂ ಮುನ್ನ ಬಿಜೆಪಿ ರಾಷ್ಟಿçÃಯ ಅಧ್ಯಕ್ಷ ಜೆಪಿ ನಡ್ಡಾ ಅವರನ್ನು ಸಂಪರ್ಕಿಸಿ ಅವರ ಭೇಟಿಗೆ ಅವಕಾಶ ಕೋರಿದ್ದರು. ತಾವು ಗುಜರಾತ್ ಪ್ರವಾಸ ಕೈಗೊಳ್ಳುತ್ತಿರುವುದರಿಂದ ತಮ್ಮ ಭೇಟಿಗೆ ಸಮಯ ಹೊಂದಿಕೆ ಆಗುತ್ತಿಲ್ಲ. ನೀವು ಗೃಹ ಸಚಿವರನ್ನು ಭೇಟಿ ಮಾಡಿ. ಪ್ರಧಾನಿ ಅವರ ನಿರ್ಧಾರವನ್ನು ನಿಮಗೆ ತಿಳಿಸುತ್ತಾರೆ ಎಂದು ತಿಳಿಸಿದ್ದರು. ನಡ್ಡಾ ಅವರ ಸಲಹೆಯಂತೆ ಮುಖ್ಯಮಂತ್ರಿಗಳು ಗೃಹ ಸಚಿವರನ್ನು ಭೇಟಿ ಮಾಡಿ ಮಾತುಕತೆ ನಡೆಸಿ ಆಗಿದೆ. ಆದರೆ, ಅದರ ಒಟ್ಟಾರೆ ಫಲಿತಾಂಶ ಏನೆಂಬುದು ಬಹಿರಂಗವಾಗಿಲ್ಲ.
ಭೇಟಿಯ ನಂತರ ಮಾಧ್ಯಮಗಳ ಜತೆ ಮಾತನಾಡಿದ ಮುಖ್ಯಮಂತ್ರಿಗಳು, ಕರ್ನಾಟಕ ರಾಜ್ಯದ ಸ್ಥಿತಿಗತಿಯ ಬಗ್ಗೆ ಎಲ್ಲವನ್ನೂ ವಿವರಿಸಿದ್ದೇನೆ. ಅವರು ತಮ್ಮ ನಿರ್ಧಾರವನ್ನು ಮೂರು ನಾಲ್ಕು ದಿನದಲ್ಲಿ ತಿಳಿಸುವುದಾಗಿ ಹೇಳಿದ್ದಾರೆ.
ರಾಜ್ಯ ರಾಜಕೀಯಕ್ಕೆ ಸಂಬAಧಿಸಿದAತೆ ಮುಂದಿನ ಒಂದು ವಾರ ಬಹಳ ಮಹತ್ವದ್ದಾಗಿದೆ. ಇಲ್ಲಿನ ರಾಜಕೀಯ ಸ್ಥಿತಿಗತಿಗಳ ಬಗ್ಗೆ ರಾಷ್ಟಿçÃಯ ಅಧ್ಯಕ್ಷರೊಟ್ಟಿಗೆ ಚರ್ಚಿಸಿ ತಮಗೆ ತಿಳಿಸುವುದಾಗಿ ಮುಖ್ಯಮಂತ್ರಿಗಳು ಹೇಳಿದ್ದಾರೆ.
ಸಚಿವ ಸಂಪುಟ ವಿಸ್ತರಣೆ ಇಲ್ಲವೇ ಪುನರ್ ರಚನೆಯ ಬಗ್ಗೆಯೂ ಪ್ರತಿಕ್ರಿಯಿಸಿರುವ ಅವರು, ರಾಜ್ಯದ ಸ್ಥಿತಿ ಗತಿಗಳನ್ನು ಆಧರಿಸಿ ಮುಂದಿನ ಮೂರ್ನಾಲ್ಕು ದಿನಗಳಲ್ಲಿ ಏನು ಮಾಡಬೇಕು ಎಂದು ತೀರ್ಮಾನಿಸಲಿದ್ದಾರೆ ಎಂದಿದ್ದಾರೆ. ಸಂಪುಟ ವಿಸ್ತರಣೆ,ಪುನರ್ ರಚನೆ ಮತ್ತು ಸದ್ಯದಲ್ಲೇ ನಡೆಯಲಿರುವ ರಾಜ್ಯಸಭೆ, ವಿಧಾನಪರಿಷತ್ ಚುನಾವಣೆಗಳ ಬಗ್ಗೆಯೂ ಇಂದು ಚರ್ಚೆ ನಡೆಸಲಾಗಿದೆ ಎಂದರು ಸಿಎಂ.
ಈ ಬಗ್ಗೆ ಏನೇನು ಮಾಹಿತಿ ನೀಡಬೇಕೋ ನಾನು ನೀಡಿದ್ದೇನೆ. ಅವರು ಪಕ್ಷದ ರಾಷ್ಟಿçÃಯ ಅಧ್ಯಕ್ಷ ನಡ್ಡಾ ಅವರೊಂದಿಗೆ ಮಾತನಾಡಿ ತೀರ್ಮಾನ ತೆಗೆದುಕೊಳ್ಳುವು ದಾಗಿ ತಿಳಿಸಿದ್ದಾರೆ ಎಂದರು. ಮುಂದಿನ ಮೂರ್ನಾಲ್ಕು ದಿನಗಳಲ್ಲಿ ಸಂಪುಟ ವಿಸ್ತರಣೆಯಾ ಪುನರ್ ರಚನೆಯ ಬಗ್ಗೆ ನಿರೀಕ್ಷಿಸಬಹುದೇ ಎಂದು ವರದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಯಾವಾಗ ಏನು ಬೇಕಾದರೂ ಆಗಬಹುದು ಎಂದು ಹೇಳಿದರು.
ವರಿಷ್ಠರ ಚಿಂತನೆ
೫+೫ ಸೂತ್ರದಡಿ ಸಂಪುಟ ಪುರ‍್ರಚನೆಗೆ ವರಿಷ್ಠರು ಚಿಂತನೆ ನಡೆಸಿದ್ದಾರೆಂದು ಹೇಳಲಾಗುತ್ತಿದೆ. ಈಗಾಗಲೇ ೫ ಸಚಿವ ಸ್ಥಾನ ಖಾಲಿ ಇದ್ದು, ಇದರ ಜೊತೆಗೆ ಹಾಲಿ ಐವರು ಸಚಿವರಿಗೆ ಕೊಕ್ ನೀಡಿ ಹೊಸದಾಗಿ ೧೦ ಮಂದಿ ಸೇರ್ಪಡೆಗೊಳಿಸಲು ಉದ್ದೇಶಿಸಿದ್ದಾರೆ ಎಂದೂ ಬಲ್ಲ ಮೂಲಗಳು ತಿಳಿಸಿವೆ.
ಸಂಪುಟ ಸೇರುವ ಸಾಧ್ಯತೆ
ಹೊನ್ನಾಳಿಯ ಎಂ.ಪಿ.ರೇಣುಕಾಚಾರ್ಯ, ಚಿತ್ರದುರ್ಗದ ತಿಪ್ಪಾರೆಡ್ಡಿ, ಗೋಕಾಕ್‌ನ ರಮೇಶ್ ಜಾರಕಿಹೊಳಿ, ಕೃಷ್ಣರಾಜ ಕ್ಷೇತ್ರದ ಎಸ್.ಎ.ರಾಮದಾಸ್, ಮಡಿಕೇರಿಯ ಅಪ್ಪಚ್ಚು ರಂಜನ್, ಶಿವಮೊಗ್ಗದ ಬಿ.ವೈ.ವಿಜಯೇಂದ್ರ, ಕುಡಚಿಯ ಪಿ.ರಾಜೀವ್, ಹಿರಿಯೂರು ಪೂಣ ðಮಾ, ವಿಜಯಪುರ ಸಿಟಿ ಬಸನಗೌಡ ಪಾಟೀಲ್ ಯತ್ನಾಳ್, ಕಲಬುರಗಿ ದಕ್ಷಿಣದ ದತ್ತಾತ್ರೇಯ ರೇವೂರ.
ಸಂಪುಟದಿAದ ಕೊಕ್ ಸಾಧ್ಯತೆ
ಮುರುಗೇಶ್ ನಿರಾಣ , ಸಿ.ಸಿ.ಪಾಟೀಲ್, ಪ್ರಭು ಚವ್ಹಾಣ್, ನಾರಾಯಣಗೌಡ ಸೇರಿದಂತೆ ಹಲವರು.