ಸಮುದ್ರದಲ್ಲಿ ತೇಲಿ ಬಂದ ಚಿನ್ನದ ರಥ
ಮೈಸೂರು

ಸಮುದ್ರದಲ್ಲಿ ತೇಲಿ ಬಂದ ಚಿನ್ನದ ರಥ

May 12, 2022

ಅಮರಾವತಿ: ಅಸನಿ ಚಂಡಮಾರು ತದ ಪ್ರಭಾವಕ್ಕೆ ಸಿಲುಕಿರುವ ಆಂಧ್ರ ಪ್ರದೇಶದಲ್ಲಿ ಭಾರೀ ಬಿರುಗಾಳಿ ಸಹಿತ ಮಳೆಯಾಗುತ್ತಿದ್ದು, ಸಮುದ್ರದಲ್ಲಿ ಅಲೆಗಳ ಅಬ್ಬರ ಜೋರಾಗಿದೆ. ಇದೇ ಅಬ್ಬರದ ಅಲೆಗಳಲ್ಲಿ ಚಿನ್ನದ ರಥವೊಂದು ತೇಲಿ ಬಂದಿದೆ.

ಆಂಧ್ರಪ್ರದೇಶದ ಶ್ರೀಕಾಕುಳಂ, ಕಾಕಿನಾಡ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುತ್ತಿದೆ. ಸಮುದ್ರ ಪ್ರಕ್ಷುಬ್ಧ ವಾಗಿದ್ದು, ಇಂದು ಮುಂಜಾನೆ ವೇಳೆ ನಿಗೂಢ ಚಿನ್ನದ ರಥವೊಂದು ಶ್ರೀಕಾ ಕುಳಂನ ಸುನ್ನಪಲ್ಲಿ ಬಂದರಿನ ದಡಕ್ಕೆ ಬಂದು ತಲುಪಿದೆ. ಈ ಚಿನ್ನದ ರಥದ ರಕ್ಷಣಾ ಕಾರ್ಯಾಚರಣೆ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ರಥವನ್ನು ಮೀನುಗಾರರು, ಸ್ಥಳೀಯರು ದಡಕ್ಕೆ ಎಳೆದು ತಂದಿದ್ದಾರೆ.

Translate »