ಪಿಎಸ್‌ಐ ನೇಮಕಾತಿ ಹಗರಣ ಹೊಳೆನರಸೀಪುರದಲ್ಲಿ ಬಂಧಿತ ಶಂಕಿತನ ಸಹೋದರ ಆತ್ಮಹತ್ಯೆ
ಮೈಸೂರು

ಪಿಎಸ್‌ಐ ನೇಮಕಾತಿ ಹಗರಣ ಹೊಳೆನರಸೀಪುರದಲ್ಲಿ ಬಂಧಿತ ಶಂಕಿತನ ಸಹೋದರ ಆತ್ಮಹತ್ಯೆ

May 12, 2022

ಹಾಸನ, ಮೇ ೧೧-ಪಿಎಸ್‌ಐ ನೇಮಕಾತಿ ಹಗರಣದಲ್ಲಿ ಭಾಗಿಯಾದ ಆರೋಪದ ಮೇಲೆ ಬಂಧನಕ್ಕೊಳಗಾದ ಅಭ್ಯರ್ಥಿಯ ಸಹೋದರ ನೇಣ ಗೆ ಶರಣಾಗಿರುವ ಘಟನೆ ಜಿಲ್ಲೆಯ ಹೊಳೆನರಸೀಪುರ ತಾಲೂಕು ಗುಂಜೇವು ಗ್ರಾಮದಲ್ಲಿ ಸಂಭವಿಸಿದೆ.

ಗ್ರಾಮದ ವಾಸಿ ಜಿ.ಆರ್.ವಾಸು, ಆತ್ಮಹತ್ಯೆ ಮಾಡಿಕೊಂಡವರಾಗಿದ್ದು, ಈ ಘಟನೆ ಸಾಕಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಜಿ.ಆರ್.ವಾಸು ಅವರ ಸಹೋ ದರ ಜಿ.ಆರ್.ಮನುಕುಮಾರ್ ಪಿಎಸ್‌ಐ ಪರೀಕ್ಷೆಯಲ್ಲಿ ೫೦ನೇ ರ‍್ಯಾಂಕ್ ಪಡೆದಿದ್ದ. ಪಿಎಸ್‌ಐ ಹಗರಣವನ್ನು ಭೇದಿಸಿದ ಪೊಲೀಸರಿಗೆ ಈತ ಪರೀಕ್ಷೆಯಲ್ಲಿ ಅಕ್ರಮ ನಡೆಸಿರುವುದು ಬಯಲಾಗಿತ್ತು. ಏ.೩೦ರಂದು ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸರು ತಮ್ಮ ವಶಕ್ಕೆ ಪಡೆದು, ವಿಚಾರಣೆ ನಡೆಸುತ್ತಿದ್ದಾರೆ. ಇತ್ತೀಚೆಗೆ ಪೊಲೀಸರು ಮನುಕುಮಾರ್‌ನನ್ನು ಊರಿಗೆ ಕರೆತಂದು ಸ್ಥಳ ಮಹಜರು ನಡೆಸಿ, ಬಂಧನ ಪ್ರಕ್ರಿಯೆ ನಡೆಸಿದ್ದರು. ತನ್ನ ತಮ್ಮ ಸಬ್ ಇನ್ಸ್ಪೆಕ್ಟರ್ ಆಗಬೇಕೆಂದು ವಾಸು, ಸುಮಾರು ೪೦ ಲಕ್ಷ ರೂ.ಗಳಷ್ಟು ಸಾಲ ಮಾಡಿ ಕೊಟ್ಟಿದ್ದನೆಂದು ಹೇಳಲಾಗುತ್ತಿದ್ದು, ಆದರೆ ಸಹೋದರ ಸಬ್ ಇನ್ಸ್ಪೆಕ್ಟರ್ ಆಗಿ ಊರಿಗೆ ಬರುವ ಬದಲು ಆರೋಪಿಯಾಗಿ ಬಂದಿದ್ದನ್ನು ನೋಡಿ, ವಾಸು ಮನ ನೊಂದು ನಿನ್ನೆ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಮೃತ ವಾಸುವಿನ ಪತ್ನಿ ಪಲ್ಲವಿ ಹೇಳಿಕೆ ಪ್ರಕಾರ, ನನ್ನ ಪತಿ ಆರೋಗ್ಯ ಇಲಾಖೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡು ತ್ತಿದ್ದರು. ಕೋವಿಡ್ ನಿಯಂತ್ರಣಕ್ಕೆ ಬಂದ ಹಿನ್ನೆಲೆಯಲ್ಲಿ ಕಳೆದ ಎರಡು ತಿಂಗಳ ಹಿಂದೆ ಸರ್ಕಾರ ಅವರನ್ನು ಕೆಲಸದಿಂದ ತೆಗೆದುಹಾಕಿತ್ತು. ಇದರಿಂದ ಅವರು ಮನೆ ಯಲ್ಲಿಯೇ ಇದ್ದರು. ಮನ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುತ್ತಿದ್ದಾರೆ.ಮೃತ ವಾಸು ಅವರ ತಾಯಿ ಶಿವಮ್ಮ, ಸಬ್‌ಇನ್ಸ್ಪೆಕ್ಟರ್ ಹಗರಣಕ್ಕೂ ನನ್ನ ಮಗನ ಸಾವಿಗೂ ಸಂಬAಧವಿಲ್ಲ. ಜೀವನ ನಿರ್ವಹಣೆಗೆ ಸಾಲ ಮಾಡಿದ್ದರಿಂದ ಆತ್ಮಹತ್ಯೆ ಮಾಡಿ ಕೊಂಡಿರಬಹುದು ಎಂದು ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾರೆ. ಮನುಕುಮಾರ್ ಪಿಎಸ್‌ಐ ಹಗರಣದಲ್ಲಿ ಓಎಂಆರ್ ಶೀಟ್ ತಿದ್ದಿರುವುದು ತನಿಖೆಯಿಂದ ದೃಢಪಟ್ಟಿರುವುದ ರಿಂದ ಅವರನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ. ಹೊಳೆನರಸೀಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವಾಸು ಆತ್ಮಹತ್ಯೆ ಪ್ರಕರಣ ದಾಖಲಾಗಿದೆ.

ಬಂಧಿತ ೯ ಅಭ್ಯರ್ಥಿಗಳ ಜಾಮೀನು ಅರ್ಜಿ ವಜಾ
ಕಲ್ಬುರ್ಗಿ: ಪಿಎಸ್‌ಐ ನೇಮಕಾತಿ ಹಗರಣಕ್ಕೆ ಸಂಬAಧಿಸಿದAತೆ ಬಂಧಿತ ೯ ಅಭ್ಯರ್ಥಿಗಳ ಜಾಮೀನು ಅರ್ಜಿಯನ್ನು ಕಲ್ಬುರ್ಗಿ ನ್ಯಾಯಾಲಯ ವಜಾಗೊಳಿ ಸಿದ್ದು, ೯ ಅಭ್ಯರ್ಥಿಗಳಿಗೂ ಜೈಲೇ ಗತಿಯಾಗಿದೆ. ಆರೋಪಿಗಳಾದ ವಿಶಾಲ್, ಹಯ್ಯಾಳಿ ದೇಸಾಯಿ. ಶರಣ ಬಸಪ್ಪ, ರುದ್ರೇಗೌಡ, ಮಹಂತೇಶ್ ಪಾಟೀಲ್, ಮಲ್ಲಿಕಾರ್ಜುನ್ ಪಾಟೀಲ್, ಸುರೇಶ್ ಕಟೇಗಾಂ, ಚಾಲಕ ಸದ್ಧಾಂ, ಕಾಳಿದಾಸ್ ಜಾಮೀನು ಕೋರಿ ಅರ್ಜಿ ಸಲ್ಲಿ ಸಿದ್ದರು. ಆದರೆ ಜಾಮೀನು ನೀಡಿದರೆ ಸಾಕ್ಷಿ ನಾಶ ಪಡಿಸುವ ಸಾಧ್ಯತೆ ಇದೆ. ಹೀಗಾಗಿ ಜಾಮೀನು ನೀಡ ದಂತೆ ಸಿಐಡಿ ಮನವಿ ಮಾಡಿತ್ತು. ಇದೀಗ ಕೋರ್ಟ್ ಜಾಮೀನು ಅರ್ಜಿ ವಜಾಗೊಳಿಸಿದೆ. ಇನ್ನು ಆರೋಪಿ ದಿವ್ಯಾ ಹಾಗರಗಿ ಪತಿ ರಾಜೇಶ್ ಹಾಗರಗಿ, ಚೇತನ್ ನಂದಗಾAವ, ಅರುಣ್‌ಕುಮಾರ್, ಸುಮಾ, ಸಿದ್ದಮ್ಮ ಸಲ್ಲಿಸಿದ್ದ ಜಾಮೀನು ಅರ್ಜಿಯೂ ವಜಾಗೊಂಡಿದೆ.

Translate »