ಐಸಿಎಸ್ ಸಂಪರ್ಕ: ಎನ್‍ಐಎಯಿಂದ ಮಾಜಿ ಶಾಸಕ ಇದಿನಬ್ಬ ಮೊಮ್ಮಗನ ಪತ್ನಿ ಬಂಧನ
ಮೈಸೂರು

ಐಸಿಎಸ್ ಸಂಪರ್ಕ: ಎನ್‍ಐಎಯಿಂದ ಮಾಜಿ ಶಾಸಕ ಇದಿನಬ್ಬ ಮೊಮ್ಮಗನ ಪತ್ನಿ ಬಂಧನ

January 4, 2022

ಉಳ್ಳಾಲ, ಜ.3- ಐಸಿಎಸ್ ಸಂಘಟನೆಯ ನಂಟು ಹೊಂದಿರುವ ಆರೋಪದ ಮೇರೆಗೆ ಕಾಂಗ್ರೆಸ್‍ನ ಮಾಜಿ ಶಾಸಕ ಬಿ.ಎಂ.ಇದಿನಬ್ಬ ಅವರ ಮೊಮ್ಮಗನ ಪತ್ನಿಯನ್ನು ದೆಹಲಿಯ ರಾಷ್ಟ್ರೀಯ ತನಿಖಾ ತಂಡದ (ಎನ್‍ಐಎ) ಅಧಿಕಾರಿಗಳು ಬಂಧಿಸಿದ್ದಾರೆ.

ಮೂಲತಃ ಕೊಡಗು ಜಿಲ್ಲೆಯವಳಾದ ದೀಪ್ತಿ ಮರಿಯಂ ಎಂಬಾಕೆಯೇ ಎನ್‍ಐಎಯಿಂದ ಬಂಧನಕ್ಕೊಳಗಾದವಳಾಗಿದ್ದು, ಈಕೆ ಇದಿನಬ್ಬ ಅವರ ಮೊಮ್ಮಗ ಅನಾಸ್ ಅಬ್ದುಲ್ ರೆಹಮಾನ್ ಅವರನ್ನು ಪ್ರೀತಿಸಿ ಮದುವೆಯಾಗಿದ್ದಳು. ಅಲ್ಲದೇ ಮತಾಂತರವೂ ಆಗಿದ್ದಳು ಎಂದು ಹೇಳಲಾಗಿದೆ. ಈಕೆ ಐಸಿಎಸ್ ಸಂಘಟನೆಗೆ ಯುವಕರನ್ನು ಸೇರಿಸುತ್ತಿದ್ದಾಳೆ ಎಂಬ ಸಂಶಯದ ಮೇರೆಗೆ ಐಎನ್‍ಎ ಅಧಿಕಾರಿಗಳು 2021ರ ಆಗಸ್ಟ್ ತಿಂಗಳಲ್ಲಿ ಈಕೆಯನ್ನು ವಶಕ್ಕೆ ಪಡೆದು ಎರಡು ದಿನ ವಿಚಾರಣೆಗೊಳಪಡಿಸಿದ್ದರು.

ಆ ಸಂದರ್ಭದಲ್ಲಿ ಇದಿನಬ್ಬ ಅವರ ಮೊಮ್ಮಗ ಅನಾಸ್ ಅಬ್ದುಲ್ ರೆಹಮಾನ್ ನನ್ನು ಕೂಡ ವಿಚಾರಣೆ ನಡೆಸಿದ್ದರು. ಇಂದು ಇದಿನಬ್ಬ ಅವರ ಪುತ್ರ ಬಿ.ಎಂ. ಬಾಷಾ ಅವರ ಮನೆ ಮೇಲೆ ದಾಳಿ ನಡೆಸಿದ ಎನ್‍ಐಎ ಅಧಿಕಾರಿಗಳು ದೀಪ್ತಿ ಮರಿಯಂಳನ್ನು ಬಂಧಿಸಿ ದೆಹಲಿಗೆ ಕರೆದೊಯ್ದಿದ್ದಾರೆ ಎಂದು ಮೂಲಗಳು ತಿಳಿಸಿವೆ.

Translate »