ನಂದಿನಿ ಹಾಲಿನ ಪ್ಯಾಕೆಟ್ ನಕಲಿ ಮಾಹಿತಿ ಲಭ್ಯ
ಮೈಸೂರು

ನಂದಿನಿ ಹಾಲಿನ ಪ್ಯಾಕೆಟ್ ನಕಲಿ ಮಾಹಿತಿ ಲಭ್ಯ

January 4, 2022

ಮೈಸೂರು, ಜ.3(ಎಂಕೆ)- ರಾಜ್ಯದ 14 ಹಾಲು ಸಹಕಾರ ಒಕ್ಕೂಟಗಳಲ್ಲಿಯೂ ನಂದಿನಿ ಉತ್ಪನ್ನಗಳ ಪರಿಶೀಲನೆ ನಡೆ ಸಲು ಕೆಎಂಎಫ್ ನಿರ್ದೇಶಕರ ನೇತೃತ್ವ ದಲ್ಲಿ ಏಳು ಮಂದಿ ಸದಸ್ಯರ ‘ಜಾಗೃತ ದಳ’ ರಚಿಸಿ, ಮೊದಲ ಬಾರಿಗೆ ಪೂರ್ಣ ಪ್ರಮಾಣದ ಪರಿಶೀಲನೆ ಅಧಿಕಾರ ನೀಡ ಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು.

ಮೈಸೂರಿನ ಬನ್ನೂರು ರಸ್ತೆಯಲ್ಲಿರುವ ಮೈಮುಲ್ ಕಚೇರಿಯಲ್ಲಿ ಸೋಮವಾರ ಕೆಎಂಎಫ್‍ನ ಅಧಿಕಾರಿಗಳು ಮತ್ತು ನಿರ್ದೇ ಶಕರೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜಾಗೃತ ದಳ’ವು ಸ್ಥಳೀಯ ಪೊಲೀಸರ ಸಹಕಾರದೊಂದಿಗೆ ಕೆಎಂಎಫ್ ಉತ್ಪನ್ನಗಳು ಮಾರಾಟವಾಗುವ ಸ್ಥಳಗಳು ಮತ್ತು ಅಂಗಡಿ ಗಳ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಲಿದೆ. ಈ ಮಧ್ಯೆ ನಂದಿನಿ ಹಾಲಿನ ಪ್ಯಾಕೆಟ್ ನಕಲು ಮಾಡುತ್ತಿರುವ ಮಾಹಿತಿಯೂ ಇದೆ ಎಂದು ಹೇಳಿದರು.

ತಿರುಪತಿ ದೇವಸ್ಥಾನಕ್ಕೆ 410 ಟನ್ ಹಾಗೂ ನ್ಯೂಜಿಲ್ಯಾಂಡ್ ಸೇರಿದಂತೆ ಅನೇಕ ವಿದೇಶಗಳಿಗೂ ನಂದಿನಿ ತುಪ್ಪ ರಫ್ತಾಗು ತ್ತದೆ. ಅಪಾರ ಬೇಡಿಕೆ ಇರುವ ಕೆಎಂಎಫ್ ಉತ್ಪನ್ನಗಳು ಒಂದೆರಡು ಹಬ್ಬದ ಸಂದರ್ಭ ಗಳನ್ನು ಹೊರತುಪಡಿಸಿ, ಸಾಮಾನ್ಯವಾಗಿ ಕಡಿಮೆ ಬೆಲೆಗೆ ಮಾರಾಟವಾಗುವುದಿಲ್ಲ. ಅದಾಗ್ಯೂ ಕಡಿಮೆ ಬೆಲೆಗೆ ಮಾರಾಟ ವಾಗುತ್ತಿದೆ ಎಂಬ ದೂರುಗಳು ಕೇಳಿಬಂದರೆ ಜಾಗೃತ ದಳ ಸದಸ್ಯರು ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ. ಈ ವೇಳೆ ಕೆಎಂಎಫ್ ಉತ್ಪನ್ನಗಳು ನಕಲಾ ಗಿರುವ ಸಾಧ್ಯತೆ ಕಂಡು ಬಂದಲ್ಲಿ ಡೈರಿಯ ಅಧಿಕೃತ ಏಜೆನ್ಸಿಗಳು ಮತ್ತು ಅಂಗಡಿಗಳ ಮಾಲೀಕರ ವಿರುದ್ಧ ಕಠಿಣ ಕ್ರಮ ತೆಗೆದು ಕೊಳ್ಳಲಿದ್ದಾರೆ ಎಂದು ಹೇಳಿದರು.

ಈಗಾಗಲೇ ಹೊಸಕೋಟೆಯಲ್ಲಿ 1,728 ಲೀಟರ್, ನೆಲಮಂಗಲದ ಮಾಕಳಿ ಪ್ರದೇಶ ದಲ್ಲಿ ಸುಮಾರು 6,990 ಲೀಟರ್ ಹಾಗೂ ಬೆಂಗಳೂರಿನ ಜಯನಗರದ ಡಿಪಾರ್ಟ್ ಮೆಂಟಲ್ ಸ್ಟೋರ್ಸ್‍ನಲ್ಲಿ 4 ಲೀಟರ್ ಸಂಶ ಯಾಸ್ಪದ ತುಪ್ಪವನ್ನು ವಶಕ್ಕೆ ಪಡೆದಿದ್ದಾರೆ. ಸಾರ್ವಜನಿಕರಿಗೆ ತಪ್ಪು ಸಂದೇಶ ಹೋಗ ಬಾರದೆಂದು ನಕಲಿ ತುಪ್ಪ ಪ್ರಕರಣ ಸಂಬಂಧ ಕಠಿಣ ಕ್ರಮ ಕೈಗೊಳ್ಳುವಂತೆ ರಾಜ್ಯದ ಎಲ್ಲಾ ಜಿಲ್ಲಾ ಎಸ್ಪಿಗಳಿಗೆ ಸೂಚನೆ ನೀಡಲಾಗಿದೆ. ವ್ಯತ್ಯಾಸ ಕಂಡು ಬಂದರೆ ಕೂಡಲೇ ಬಂಧಿ ಸುವಂತೆ ಆದೇಶಿಸಲಾಗಿದೆ ಎಂದರು.

ಮೈಸೂರಿನಲ್ಲಿ ನಕಲಿ ನಂದಿನಿ ತುಪ್ಪ ಮಾರಾಟದ ಬಗ್ಗೆ 2 ತಿಂಗಳ ಹಿಂದೆಯೇ ಮೈಮುಲ್‍ನ ಅಧಿಕಾರಿಗಳಿಗೆ ಮಾಹಿತಿ ಇತ್ತು. ಕಡಿಮೆ ಬೆಲೆ ಮಾರಾಟವಾಗುತ್ತಿ ರುವ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದ ಮೈಮುಲ್ ಅಧಿಕಾರಿಗಳು, ನಕಲಿ ತುಪ್ಪ ಮಾರಾಟ ಜಾಲವನ್ನು ಪತ್ತೆ ಹಚ್ಚಿದ್ದಾರೆ. ನಾಲ್ವರನ್ನು ಬಂಧಿಸಲಾಗಿದ್ದು, ತನಿಖೆಗೆ ಒಳಪಡಿಸಲಾಗಿದೆ. ನಕಲಿ ತುಪ್ಪ ತಯಾರಿಕೆ ಮತ್ತು ಮಾರಾಟದ ಹಿಂದೆ ಯಾರಿದ್ದಾರೆ ಎಂಬ ಮಾಹಿತಿಯನ್ನು ಪೊಲೀಸರು ಕಲೆ ಹಾಕುತ್ತಿದ್ದಾರೆ. ಅಲ್ಲದೆ ನಂದಿನಿ ಹಾಲಿನ ಪ್ಯಾಕೆಟನ್ನು ನಕಲು ಮಾಡುತ್ತಿದ್ದಾರೆ ಎಂಬ ಮಾಹಿತಿಯೂ ಪೊಲೀಸರ ಬಳಿಯಿದ್ದು, ಎರಡ್ಮೂರು ವಿಧಾನದಲ್ಲಿ ತನಿಖೆ ನಡೆ ಯುತ್ತಿದೆ ಎಂದು ತಿಳಿಸಿದರು.

ಸಭೆಯಲ್ಲಿ ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಸತೀಶ್, ಮೈಮುಲ್ ಅಧ್ಯಕ್ಷ ಪ್ರಸನ್ನ, ಮೈಮುಲ್ ವ್ಯವಸ್ಥಾಪಕ ನಿರ್ದೇ ಶಕ ವಿಜಯ್‍ಕುಮಾರ್, ಎಎಸ್ಪಿ ಶಿವ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

Translate »