ವಿಧಾನಸಭೆ ಚುನಾವಣೆಗೆ ಈಗಲೇ ಬಿಜೆಪಿ ನಾಯಕರಿಂದ ರಾಜ್ಯದಲ್ಲಿ ಪರೋಕ್ಷ ಪ್ರಚಾರ!
ಮೈಸೂರು

ವಿಧಾನಸಭೆ ಚುನಾವಣೆಗೆ ಈಗಲೇ ಬಿಜೆಪಿ ನಾಯಕರಿಂದ ರಾಜ್ಯದಲ್ಲಿ ಪರೋಕ್ಷ ಪ್ರಚಾರ!

June 15, 2022

ಸಮುದಾಯದ ಮುಖಂಡರು, ಸ್ವಾಮೀಜಿಗಳ ಭೇಟಿ
ಪ್ರಧಾನಿಯಾದಿಯಾಗಿ ಕೇಂದ್ರ ಸಚಿವರಿಂದ ನಿರಂತರ ಪ್ರವಾಸ
ಕರ್ನಾಟಕದ ಆಡಳಿತವನ್ನುಉಳಿಸಿಕೊಳ್ಳಲು ತಂತ್ರಗಾರಿಕೆ

ಬೆಂಗಳೂರು, ಜೂ. ೧೪(ಕೆಎಂಶಿ)- ಮರಳಿ ಕರ್ನಾಟಕದಲ್ಲಿ ಅಧಿಕಾರ ಹಿಡಿಯಲು ಪಶ್ಚಿಮಬಂಗಾಳದ ಸೂತ್ರವನ್ನು ಪಾಲಿಸಲು ಬಿಜೆಪಿ ವರಿಷ್ಠರು ಮುಂದಾಗಿದ್ದಾರೆ. ರಾಜ್ಯ ವಿಧಾನಸಭೆಗೆ ಬರುವ ಏಪ್ರಿಲ್ ಮೇ ತಿಂಗಳಲ್ಲಿ ಚುನಾವಣೆ ನಡೆಯಲಿದ್ದು, ಈಗಿನಿಂದಲೇ ಪಕ್ಷದ ನಾಯಕರು ಕಣದಲ್ಲಿ ಸಕ್ರಿಯರಾಗುತ್ತಿದ್ದಾರೆ.

ಪಶ್ಚಿಮಬಂಗಾಳ ಹಾಗೂ ಹೈದ ರಾಬಾದ್ ನಗರಪಾಲಿಕೆ ಯಲ್ಲಿ ಪಕ್ಷ ಹಿಡಿತ ಸಾಧಿಸಲು ನಡೆಸಿದ ಹೋರಾಟದ ಸೂತ್ರವನ್ನೇ ಕರ್ನಾ ಟಕದಲ್ಲೂ ಅಳವಡಿಸಲು ಸಜ್ಜಾಗಿದೆ. ಇದಕ್ಕೆ ಮೊದಲ ಭಾಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು, ಚುನಾವಣೆಗೂ ಮುನ್ನವೇ ೬ರಿಂದ ೮ ಬಾರಿ ರಾಜ್ಯದ ವಿವಿಧೆಡೆ ಸರ್ಕಾರಿ ಮತ್ತು ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ.

ಇದೇ ಸಮಯಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಷಾ, ಬಿಜೆಪಿ ರಾಷ್ಟಿçÃಯ ಅಧ್ಯಕ್ಷ ನಡ್ಡಾ ಸೇರಿದಂತೆ ಪ್ರಮುಖ ನಾಯಕರು ರಾಜ್ಯದಲ್ಲಿ ಪ್ರವಾಸ ಕೈಗೊಂಡು ಪಕ್ಷ ಸಂಘಟನೆ ಜೊತೆ ಮತದಾರರ ಓಲೈಕೆಗೆ ಮುಂದಾಗಲಿದ್ದಾರೆ. ಕೆಲ ದಿನಗಳ ಹಿಂದೆ ರಾಜ್ಯಕ್ಕೆ ಆಗಮಿಸಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ತುಮ ಕೂರಿನ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿದ್ದರೆ, ಮುಂದಿನ ವಾರ ಮೈಸೂರಿಗೆ ಆಗಮಿಸಲಿರುವ ಪ್ರಧಾನಿ ನರೇಂದ್ರಮೋದಿಯವರು ಜೆಎಸ್‌ಎಸ್ ಮಠಕ್ಕೆ ಭೇಟಿ ನೀಡಲಿದ್ದು, ಅದೇ ಕಾಲಕ್ಕೆ ಮೈಸೂರು ರಾಜವಂಶಸ್ಥರನ್ನು ಭೇಟಿ ಮಾಡಲಿದ್ದಾರೆ.

ಕರ್ನಾಟಕದ ಪ್ರಮುಖ ಮಠ-ಮಾನ್ಯಗಳಿಗೆ ಭೇಟಿ ನೀಡುವ ಮೂಲಕ ಮತಬ್ಯಾಂಕ್ ಅನ್ನು ಕ್ರೋಢೀಕರಿಸಿಕೊಳ್ಳಲು ಕಮಲ ಪಾಳೆಯದ ವರಿಷ್ಠರು ಲೆಕ್ಕ ಹಾಕಿದ್ದು, ಈ ಹಿನ್ನೆಲೆಯಲ್ಲಿ ನರೇಂದ್ರಮೋದಿ ಅವರ ಸಂಪುಟದ ಬಹುತೇಕ ಸಚಿವರು ಸದ್ಯದಲ್ಲೇ ಕರ್ನಾಟಕ ಪ್ರವಾಸ ಆರಂಭಿಸಲಿದ್ದಾರೆ. ಯಡಿಯೂರಪ್ಪ ಅವರನ್ನು ಕೆಳಗಿಳಿಸಿದ ನಂತರ ಕರ್ನಾಟಕದಲ್ಲಿ ಪಕ್ಷ ನಡೆಸುತ್ತಿದ್ದ ಜಾತಿ ಆಧಾರಿತ ರಾಜಕಾರಣದ ಸ್ವರೂಪ ಬದಲಾಗಿದ್ದು, ಈ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಬಲಿಷ್ಠ ಮತ ಬ್ಯಾಂಕ್‌ನ್ನು ಕ್ರೋಢೀಕರಿಸುವುದು ಬಿಜೆಪಿ ವರಿಷ್ಠರಿಗೆ ಸವಾಲಾಗಿದೆ.

ಈ ಸವಾಲನ್ನು ಸ್ವೀಕರಿಸಿರುವ ಬಿಜೆಪಿ ವರಿಷ್ಠರು ಪಶ್ಚಿಮಬಂಗಾಳ ಹಾಗೂ ಹೈದರಾಬಾದ್‌ನಲ್ಲಿ ಅನುಸರಿಸಿದ ಮಾದರಿಯನ್ನೇ ಕರ್ನಾಟಕದಲ್ಲಿ ಮುಂದು ವರಿಸಲು ತೀರ್ಮಾನಿಸಿದ್ದಾರೆ ಎಂದು ಉನ್ನತ ಮೂಲಗಳು ಸ್ಪಷ್ಟಪಡಿಸಿವೆ.

ಪಶ್ಚಿಮಬಂಗಾಳದಲ್ಲಿ ಬಲಿಷ್ಠ ತೃಣಮೂಲ ಕಾಂಗ್ರೆಸ್ ಪಕ್ಷವನ್ನು ಎದುರಿಸಲು ಪ್ರಧಾನಿ ಮೋದಿ ಅವರ ಸಂಪುಟದ ಬಹುತೇಕ ಸಚಿವರು ಪಶ್ಚಿಮಬಂಗಾಳದಲ್ಲಿ ಬೀಡು ಬಿಟ್ಟಿದ್ದರು. ಪಶ್ಚಿಮಬಂಗಾಳದ ರಾಜಕೀಯ ಸ್ವರೂಪ ತೃಣಮೂಲ ಕಾಂಗ್ರೆಸ್ ಮತ್ತು ಕಮ್ಯುನಿಸ್ಟ್ ಪಕ್ಷಗಳ ಮೇಲೆ ಅವಲಂಬಿತವಾಗಿದ್ದು ಸ್ಪಷ್ಟವಾಗಿದ್ದರೂ, ಬಿಜೆಪಿ ವರಿಷ್ಠರ ಕಾರ್ಯತಂತ್ರದಿAದ ಕಮ್ಯುನಿಸ್ಟ್ ಪಕ್ಷದ ಬಹುತೇಕ ಕಾರ್ಯಕರ್ತರು ಕಮಲ ಪಾಳೆಯದತ್ತ ವಾಲಿಕೊಂಡರು. ಇದರ ಪರಿಣಾಮವಾಗಿ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಧಿಕಾರ ಹಿಡಿಯಲು ಸಫಲವಾಗದೇ ಇದ್ದರೂ ಗಣನೀಯ ಸಂಖ್ಯೆಯ ಸೀಟುಗಳನ್ನು ಗಳಿಸಿ ತೃಣಮೂಲ ಕಾಂಗ್ರೆಸ್ ಪಕ್ಷದ ನೇರ ಎದುರಾಳಿಯಾಗಿ ಹೊರಹೊಮ್ಮಿತು. ತದನಂತರ ಹೈದರಾಬಾದ್ ಪ್ರತಿಷ್ಠಿತ ನಗರ ಪಾಲಿಕೆಯ ಚುಕ್ಕಾಣ ಹಿಡಿಯಲು ಹೋರಾಟ ನಡೆಸಿ, ಅಧಿಕಾರ ಹಿಡಿಯಲು ಸಾಧ್ಯವಾಗದಿದ್ದರೂ, ಅಲ್ಲಿನ ಟಿಎಸ್‌ಆರ್ ಪಕ್ಷದ ವಿರುದ್ಧ ದೊಡ್ಡ ಪ್ರಮಾಣದಲ್ಲಿ ಸ್ಥಾನಗಳನ್ನು ಗಳಿಸಿತ್ತು. ಪಶ್ಚಿಮ ಬಂಗಾಳದಲ್ಲಿ ಪಕ್ಷದ ಬಲವರ್ಧನೆಗೆ ಮಾಡಿದ ತಯಾರಿಯನ್ನೇ ಕರ್ನಾಟಕದಲ್ಲೂ ಅನುಸರಿಸಲು ನಿರ್ಧರಿಸಲಾಗಿದ್ದು, ಈ ತಯಾರಿಯಿಂದ ಪಶ್ಚಿಮಬಂಗಾಳದಲ್ಲಿ ಸಿಕ್ಕಿದ್ದಕ್ಕಿಂತ ದೊಡ್ಡ ಮಟ್ಟದ ಯಶಸ್ಸು ಸಿಗುತ್ತದೆ ಎಂದು ಬಿಜೆಪಿ ವರಿಷ್ಠರು ಭಾವಿಸಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ನೆಲ ಕಚ್ಚಿದ್ದ ಪಕ್ಷ ದೊಡ್ಡ ಮಟ್ಟದಲ್ಲಿ ಬೆಳೆದು ನಿಲ್ಲಲು ಸಹಾಯಕವಾಯಿತು. ಹೀಗಿರುವಾಗ ಅಧಿಕಾರ ಇರುವ ಕರ್ನಾಟಕದಲ್ಲಿ ಅದಕ್ಕಿಂತ ದೊಡ್ಡ ಯಶಸ್ಸು ಸಿಗು ವುದು ಸಹಜ. ಆ ಮೂಲಕ ೨೦೨೩ರ ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಅಧಿಕಾರ ಹಿಡಿಯುವುದು ನಿಶ್ಚಿತ ಎಂಬುದು ಬಿಜೆಪಿ ವರಿಷ್ಠರ ಲೆಕ್ಕಾಚಾರ. ಕರ್ನಾಟಕದ ನೆಲೆಯಲ್ಲಿ ಪ್ರಮುಖರಾಗಿರುವ ವಿವಿಧ ಸಮುದಾಯಗಳ ನಾಯಕರು ಮತ್ತು ಸ್ವಾಮೀಜಿಗಳನ್ನು ಮೋದಿ ಟೀಮ್ ಇನ್ನು ಮುಂದೆ ನಿರಂತರವಾಗಿ ಭೇಟಿ ಮಾಡಲಿದ್ದು, ಆ ಮೂಲಕ ಕರ್ನಾಟಕದ ಮತಬ್ಯಾಂಕ್ ಸ್ವರೂಪ ಬಿಜೆಪಿಗೆ ಅನು ಕೂಲವಾಗುವಂತೆ ನೋಡಿಕೊಳ್ಳಲಿ ಎಂದು ಪ್ರಧಾನಿ ಮೋದಿ ಬಯಸಿದ್ದಾರೆ. ಅದರನುಸಾರ, ಇನ್ನು ಮುಂದೆ ಬಿಜೆಪಿಯ ಕೇಂದ್ರ ನಾಯಕರ ಕರ್ನಾಟಕ ದಂಡಯಾತ್ರೆ ನಡೆಯಲಿದ್ದು, ಈಗ ಪ್ರಧಾನಿ ನರೇಂದ್ರ ಮೋದಿಯವರ ರಾಜ್ಯ ಭೇಟಿಯ ಹಿಂದಿರುವುದು ಇದೇ ಉದ್ದೇಶ ಎಂದಿವೆ. ಪ್ರಧಾನಿ ಭೇಟಿಗೂ ಮುನ್ನ ಪಕ್ಷದ ರಾಷ್ಟಿçÃಯ ಅಧ್ಯಕ್ಷ ನಡ್ಡಾ ಎರಡು ದಿನಗಳ ರಾಜ್ಯ ಪ್ರವಾಸ ಕೈಗೊಳ್ಳುತ್ತಿದ್ದಾರೆ. ತಮ್ಮ ಭೇಟಿಯ ಸಂದರ್ಭದಲ್ಲಿ ಹಿಂದುಳಿದ ವರ್ಗಗಳ ಸಮಾವೇಶ ದಲ್ಲಿ ಪಾಲ್ಗೊಂಡರೆ ಚಿತ್ರದುರ್ಗದಲ್ಲಿ ಮಠಾಧೀಶರುಗಳನ್ನು ಭೇಟಿ ಮಾಡುವ ಕಾರ್ಯ ಕ್ರಮವಿದೆ. ಹೀಗೆ ಜಾತಿ ಸಂಘಟನೆಯ ಜೊತೆಗೆ ಮಠಾಧೀಶರು ಮತ್ತು ರಾಜ್ಯದಲ್ಲಿರುವ ಚಿಂತಕರ ಸಹಕಾರ ಮತ್ತು ಅವರ ಆಶೀರ್ವಾದಕ್ಕೆ ಬಿಜೆಪಿ ಮುಂದಾಗಿದೆ.

 

Translate »