ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆ ಇಂದು ಮತ ಎಣ ಕೆ
ಮೈಸೂರು

ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆ ಇಂದು ಮತ ಎಣ ಕೆ

June 15, 2022

ಮೈಸೂರಿನ ಮಹಾರಾಣ ವಾಣ ಜ್ಯ ಮತ್ತು ಮ್ಯಾನೇಜ್‌ಮೆಂಟ್ ಕಾಲೇಜಿನಲ್ಲಿ ಅಗತ್ಯ ಸಿದ್ಧತೆ;ವ್ಯಾಪಕ ಪೊಲೀಸ್ ಬಂದೋಬಸ್ತ್

ಯಾರೊಬ್ಬರೂ ಮೊದಲ ಪ್ರಾಶಸ್ತö್ಯದ ನಿಗದಿತ ಖೋಟಾ ತಲುಪದಿದ್ದರೆ ಫಲಿತಾಂಶ ವಿಳಂಬ ಸಾಧ್ಯತೆ

ಮೈಸೂರಿನ ವಾಲ್ಮೀಕಿ ರಸ್ತೆಯಲ್ಲಿರುವ ಮಹಾರಾಣ ಮಹಿಳಾ ವಾಣ ಜ್ಯ ಮತ್ತು ನಿರ್ವಹಣಾ ಕಾಲೇಜಿನ ಸ್ಟಾçಂಗ್ ರೂಂನಲ್ಲಿ ನಗರ ಪೊಲೀಸರ ಕಾವಲು. ಮತ ಎಣ ಕೆಗೆ ಸಜ್ಜುಗೊಳಿಸಿರುವುದನ್ನು ಮತ್ತೊಂದು ಚಿತ್ರದಲ್ಲಿ ಕಾಣಬಹುದು.

ಮೈಸೂರು,ಜೂ. ೧೪(ಆರ್‌ಕೆ)- ದಕ್ಷಿಣ ಪದವೀಧರ ಕ್ಷೇತ್ರದಿಂದ ವಿಧಾನಪರಿ ಷತ್ತಿಗೆ ಸೋಮವಾರ ನಡೆದ ಚುನಾವಣೆಯ ಮತ ಎಣ ಕೆ ಕಾರ್ಯ ನಾಳೆ (ಜೂ.೧೫) ಮೈಸೂರಿನ ವಾಲ್ಮೀಕಿ ರಸ್ತೆಯಲ್ಲಿರುವ ಮಹಾ ರಾಣ ವಾಣ ಜ್ಯ ಮತ್ತು ಮ್ಯಾನೇಜ್ ಮೆಂಟ್ ಕಾಲೇಜಿನಲ್ಲಿ ನಡೆಯಲಿದೆ.

ಚುನಾವಣಾಧಿಕಾರಿಗಳೂ ಆದ ಪ್ರಾದೇ ಶಿಕ ಆಯುಕ್ತ ಡಾ.ಜಿ.ಸಿ.ಪ್ರಕಾಶ್ ಮಾಧ್ಯಮ ಪ್ರತಿನಿಧಿಗಳಿಗೆ ಮತ ಎಣ ಕೆ ಸಿದ್ಧತೆ ಕುರಿತು ಮಾಹಿತಿ ನೀಡಿದರು. ಕ್ಷೇತ್ರ ವ್ಯಾಪ್ತಿಯ ಮೈಸೂರು, ಮಂಡ್ಯ, ಹಾಸನ ಮತ್ತು ಚಾಮ ರಾಜನಗರ ಜಿಲ್ಲೆಗಳಲ್ಲಿ ಒಟ್ಟು ೯೯,೩೦೪ ಮಂದಿ ಮತ ಚಲಾಯಿಸಿದ್ದು, ಶೇ.೬೯.೯೫ ರಷ್ಟು ಮತದಾನವಾಗಿದೆ ಎಂದರು.

ಜೂನ್ ೧೫ರಂದು ಬುಧವಾರ ಬೆಳಗ್ಗೆ ೮ ಗಂಟೆಯಿAದ ಮತ ಎಣ ಕೆ ಪ್ರಕ್ರಿಯೆ ಆರಂಭವಾಗಲಿದ್ದು, ಬೆಳಗ್ಗೆ ೭.೪೫ ಗಂಟೆಗೆ ಸ್ಟಾçಂಗ್ ರೂಂನಿAದ ಮತ ಪೆಟ್ಟಿಗೆಗಳನ್ನು ತೆಗೆದು, ನಂತರ ತಿರಸ್ಕೃತ ಮತಗಳನ್ನು ಬೇರ್ಪಡಿಸಿ ಊರ್ಜಿತ ಮತಗಳಿರುವ ಮತ ಪತ್ರಗಳನ್ನು ತಲಾ ೨೫ರಂತೆ ಬಂಡಲ್ ಮಾಡಲಾಗುವುದು. ಈ ಪ್ರಕ್ರಿಯೆ ಪೂರ್ಣ ಗೊಳ್ಳುವಷ್ಟರಲ್ಲಿ ಮಧ್ಯಾಹ್ನವಾಗಲಿದ್ದು, ಮಧ್ಯಾಹ್ನ ಭೋಜನದ ನಂತರ ಮತಗಳ ಎಣ ಕೆ ಕಾರ್ಯ ಆರಂಭಿಸಲಾಗುವುದು. ಮೊದಲ ಪ್ರಾಶಸ್ತö್ಯದ ಮತಗಳನ್ನು ಯಾವ ಅಭ್ಯರ್ಥಿ ಒಟ್ಟು ಊರ್ಜಿತ ಮತಗಳ ಶೇ.೫೦ ಮತ್ತು ೧ ಅನ್ನು ಪಡೆಯುತ್ತಾರೋ ಅವರು ನಿಗದಿತ ಖೋಟಾ ತಲುಪಿ ಜಯಶೀಲ ರಾದರೆಂದು ಫಲಿತಾಂಶ ಪ್ರಕಟಿಸಲಾಗು ವುದು. ಒಂದು ವೇಳೆ ಯಾವ ಅಭ್ಯ ರ್ಥಿಯೂ ಮೊದಲ ಪ್ರಾಶಸ್ತö್ಯದ ಮತಗಳಲ್ಲಿ ನಿಗದಿತ ಖೋಟಾ ತಲುಪದಿದ್ದಲ್ಲಿ ಎರಡನೇ ಪ್ರಾಶಸ್ತö್ಯದ ಮತಗಳ ಎಣ ಕೆ ಆರಂಭಿಸಿ ಕಡಿಮೆ ಮತ ಪಡೆದಿರುವ ಅಭ್ಯರ್ಥಿಗಳನ್ನು ಎಲಿಮಿನೇಟ್ ಮಾಡಿ ಅವರ ಮತಗಳನ್ನು ಕೊರತೆ ಇರುವ ಅಭ್ಯರ್ಥಿಗಳಿಗೆ ಸೇರಿಸುತ್ತಾ ಹೋಗಿ ಎರಡನೇ ಪ್ರಾಶಸ್ತö್ಯದ ಮತಗಳಲ್ಲಿ ಖೋಟಾ ತಲುಪಿದ ಅಭ್ಯರ್ಥಿ ವಿಜೇತರೆಂದು ಫಲಿತಾಂಶ ಪ್ರಕಟಿಸಲಾಗುತ್ತದೆ ಎಂದು ತಿಳಿಸಿದರು.

ಮತ ಎಣ ಕೆ ಕಾರ್ಯಕ್ಕೆ ಮಹಾರಾಣ ವಾಣ ಜ್ಯ ಮತ್ತು ಮ್ಯಾನೇಜ್‌ಮೆಂಟ್ ಕಾಲೇಜಿ ನಲ್ಲಿ ೨೮ ಟೇಬಲ್‌ಗಳನ್ನು ಅಳವಡಿಸಲಾಗಿದ್ದು, ಪ್ರತೀ ಟೇಬಲ್‌ಗೆ ಒಬ್ಬ ಮೇಲ್ವಿಚಾರಕ, ಇಬ್ಬರು ಮತ ಎಣ ಕೆ ಸಹಾಯಕರಂತೆ ಒಟ್ಟು ೯೦ ಸಿಬ್ಬಂದಿಗಳನ್ನು ನೇಮಿಸಲಾಗಿದೆ. ಅಭ್ಯರ್ಥಿಗಳ ಪರವಾಗಿ ಒಬ್ಬರಂತೆ ಮತ ಎಣ ಕೆ ಟೇಬಲ್‌ಗಳಿಗೆ ಏಜೆಂಟರನ್ನು ನೇಮಿಸಿ ಕೊಳ್ಳಲು ಸೂಚಿಸಲಾಗಿದೆ. ಮತ ಎಣ ಕೆ ಕೇಂದ್ರದಲ್ಲಿ ಸಿಸಿ ಕ್ಯಾಮರಾ ಜೊತೆಗೆ ಎಣ ಕೆ ಪ್ರಕ್ರಿಯೆಯನ್ನು ವೀಡಿಯೋ ಮಾಡಲು ವ್ಯವಸ್ಥೆ ಮಾಡಲಾಗಿದೆ. ಸ್ಥಳದಲ್ಲಿ ಅಗ್ನಿಶಾಮಕ ದಳದ ವಾಹನ, ಸಿಬ್ಬಂದಿ, ಆಂಬುಲೆನ್ಸ್ನೊAದಿಗೆ ಆರೋಗ್ಯ ಸಿಬ್ಬಂದಿಗಳನ್ನೂ ನಿಯೋಜಿಸಲಾಗಿದೆ. ಕೇಂದ್ರದ ಸುತ್ತ ೨೦೦ ಮೀ. ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಿದ್ದು, ಮತ ಎಣ ಕೆ ಅಧಿಕಾರಿ, ಸಿಬ್ಬಂದಿ, ಅಭ್ಯರ್ಥಿಗಳು, ಏಜೆಂಟರು, ಪೊಲೀ ಸರು, ಮಾಧ್ಯಮ ಪ್ರತಿನಿಧಿಗಳನ್ನು ಹೊರತುಪಡಿಸಿ ಬೇರೆ ಯಾರೂ ಕೇಂದ್ರಕ್ಕೆ ಪ್ರವೇಶಿಸದಂತೆ ಎಚ್ಚರ ವಹಿಸಲಾಗಿದೆ. ಮತ ಎಣ ಕೆ ಕೇಂದ್ರಕ್ಕೆ ಭಾರೀ ಪೊಲೀಸ್ ಬಂದೋಬಸ್ತ್ ಮಾಡಲಾ ಗಿದೆ. ಮೂವರು ಎಸಿಪಿಗಳು, ೮ ಮಂದಿ ಇನ್ಸ್ಪೆಕ್ಟರ್‌ಗಳು, ೧೨ ಸಬ್ ಇನ್ಸ್ಪೆಕ್ಟರ್ ಗಳು, ೧೫ ಎಎಸ್‌ಐಗಳು, ೧೨೦ ಮಂದಿ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಿ ಕಟ್ಟೆಚ್ಚರ ವಹಿಸಲಾಗುತ್ತಿದೆ. ಚುನಾವಣಾ ವೀಕ್ಷಕರಾದ ಪೊನ್ನುರಾಜ್ ಅವರು ಮತ ಎಣ ಕಾ ಕೇಂದ್ರದಲ್ಲಿ ಉಪಸ್ಥಿತರಿದ್ದು, ಪರಿವೀಕ್ಷಣೆ ನಡೆಸಲಿದ್ದು, ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳೂ ಸಹಾಯಕ ಚುನಾವಣಾಧಿಕಾರಿಗಳಾಗಿ ಹಾಜರಿದ್ದು, ಮೇಲ್ವಿಚಾರಣೆ ನಡೆಸಲಿದ್ದಾರೆ ಎಂದು ಡಾ.ಜಿ.ಸಿ.ಪ್ರಕಾಶ್ ತಿಳಿಸಿದರು. ಮತ ಪೆಟ್ಟಿಗೆಗಳನ್ನು ಸ್ಟಾçಂಗ್ ರೂಂನಲ್ಲಿ ಭದ್ರಪಡಿ ಸಿದ್ದು, ದಿನದ ೨೪ ಗಂಟೆಯೂ ಶಸ್ತç ಸಜ್ಜಿತ ಪೊಲೀಸರನ್ನು ಭದ್ರತೆಗೆ ನಿಯೋಜಿಸ ಲಾಗಿದೆ. ಸ್ಥಳದಲ್ಲಿ ಕುಡಿಯುವ ನೀರು, ಊಟ, ತಿಂಡಿ ವ್ಯವಸ್ಥೆ ಕಲ್ಪಿಸಿ ಸುಲಲಿತ ಮತ ಎಣ ಕೆಗೆ ಅಗತ್ಯ ಪೂರ್ವ ಸಿದ್ಧತೆಯನ್ನು ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.

 

ಮೈಸೂರು ನಗರದಲ್ಲಿ ನಿಷೇಧಾಜ್ಞೆ
ಮೈಸೂರು,ಜೂ.೧೪(ಆರ್‌ಕೆ)-ದಕ್ಷಿಣ ಪದವೀಧರರ ಕ್ಷೇತ್ರದ ಚುನಾವಣೆ ಮತ ಎಣ ಕೆ ನಡೆಯುವ ಹಿನ್ನೆಲೆಯಲ್ಲಿ ನಾಳೆ(ಜೂ.೧೫) ಬೆಳಗ್ಗೆ ೬ರಿಂದ ಮಧ್ಯರಾತ್ರಿ ೧೨ ಗಂಟೆವರೆಗೆ ಮೈಸೂರು ನಗರ ವ್ಯಾಪ್ತಿಯಲ್ಲಿ ಸೆಕ್ಷನ್ ೧೪೪ ರೀತ್ಯಾ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಮತ ಎಣ ಕೆ ನಡೆಯುವ ಮಹಾರಾಣ ಸರ್ಕಾರಿ ಮಹಿಳಾ ವಾಣ ಜ್ಯ ಮತ್ತು ನಿರ್ವಹಣಾ ಕಾಲೇಜು ಬಳಿ ವಿಜಯೋತ್ಸವ, ಮೆರವಣ ಗೆ, ಪಟಾಕಿ ಸಿಡಿಸುವುದು, ಸ್ಫೋಟಕ ವಸ್ತು, ಮಾರಕಾಸ್ತç ಕೊಂಡೊಯ್ಯುವುದನ್ನು ನಿಷೇಧಿಸ ಲಾಗಿದೆ. ಎಣ ಕಾ ಕೇಂದ್ರದ ಸುತ್ತ ೨೦೦ ಮೀ. ವ್ಯಾಪ್ತಿ ಪ್ರದೇಶದಲ್ಲಿ ೫ಕ್ಕಿಂತ ಹೆಚ್ಚು ಮಂದಿ ಗುಂಪು ಸೇರುವುದು, ಪ್ರಚೋದನಾಕಾರಿ ಭಾಷಣ ಮಾಡುವುದನ್ನು ನಿಷೇ ಧಿಸಲಾಗಿದೆ ಎಂದು ನಗರ ಪೊಲೀಸ್ ಕಮೀಷ್ನರ್ ಡಾ.ಚಂದ್ರಗುಪ್ತ ತಿಳಿಸಿದ್ದಾರೆ.
ಇಂದು ಮದ್ಯ ನಿರ್ಬಂಧ

ಮೈಸೂರು: ಮತ ಎಣ ಕೆ ಹಿನ್ನೆಲೆ ಯಲ್ಲಿ ಮೈಸೂರು ನಗರ ಸೇರಿದಂತೆ ನಗರ ವ್ಯಾಪ್ತಿ ಯಿಂದ ೫ ಕಿ.ಮೀ. ಸುತ್ತಲಿನ ಪ್ರದೇಶದಲ್ಲಿ ಬುಧವಾರ ಮದ್ಯ ಮಾರಾಟಕ್ಕೆ ನಿರ್ಬಂಧ ವಿಧಿಸಲಾಗಿದೆ. ಮಂಗಳವಾರ ಮಧ್ಯರಾತ್ರಿ ೧೨ರಿಂದ ಬುಧವಾರ ಮಧ್ಯರಾತ್ರಿ ೧೨ರವರೆಗೆ ಎಲ್ಲಾ ರೀತಿ ಮದ್ಯದ ಅಂಗಡಿಗಳನ್ನು ಮತ್ತು ಮದ್ಯ ತಯಾರಿಕಾ ಘಟಕಗಳನ್ನು ಬಂದ್ ಮಾಡುವಂತೆ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಆದೇಶ ಹೊರಡಿಸಿದ್ದಾರೆ.

Translate »