ಭಾರತದ ಮೊದಲ ಖಾಸಗಿ ರೈಲು ಕಾರ್ಯಾರಂಭ
ಮೈಸೂರು

ಭಾರತದ ಮೊದಲ ಖಾಸಗಿ ರೈಲು ಕಾರ್ಯಾರಂಭ

June 16, 2022

ಕೊಯಮತ್ತೂರು: ಭಾರತದ ಮೊದಲ ಖಾಸಗಿ ರೈಲು ಕಾರ್ಯಾರಂಭ ಮಾಡಿದ್ದು, ಈ ರೈಲು ಕೊಯಮತ್ತೂರು ಮತ್ತು ಶಿರಡಿ ನಡುವೆ ಸಂಚರಿಸುತ್ತದೆ. ಭಾರ ತೀಯ ರೈಲ್ವೆ ಸೇವೆ ಆರಂಭವಾದ ಬಳಿಕ ಮೊದಲ ಬಾರಿಗೆ ಖಾಸಗಿ ಸಂಸ್ಥೆಗಳು ನಿರ್ವಹಿಸುವ ಪ್ರಯಾಣ ಕರ ರೈಲು ಸೇವೆ ಆರಂಭವಾಗಿದ್ದು, ಕೇಂದ್ರ ಸರ್ಕಾರದ ‘ಭಾರತ್ ಗೌರವ್’ ಯೋಜನೆಯಡಿ ಇದು ಚಾಲನೆಗೊಂಡಿರುವುದು ಗಮನಾರ್ಹ. ಈ ರೈಲು ಕೊಯಮತ್ತೂರು ಮತ್ತು ಶಿರಡಿ ನಡುವೆ ಸಂಚರಿಸುತ್ತದೆ. ಜೂ.೧೪ರ ಸಂಜೆ ಕೊಯಮತ್ತೂರಿನಲ್ಲಿ ಖಾಸಗಿ ರೈಲುಸೇವೆಗೆ ಚಾಲನೆ ದೊರೆತಿದ್ದು, ರೈಲು ತಮಿಳುನಾಡಿನ ಕೊಯ ಮತ್ತೂರು ಉತ್ತರ ರೈಲು ನಿಲ್ದಾಣದಿಂದ ಶಿರಡಿ ನಡುವೆ ಸಂಚರಿಸುತ್ತದೆ. ಶಿರಡಿಗೆ ತಲುಪುವ ಮೊದಲು, ರೈಲು ತಿರುಪುರ್, ಈರೋಡ್, ಸೇಲಂ ಜೋಲಾರ್‌ಪೇಟ್, ಬೆಂಗಳೂರು ಯಲಹಂಕ, ಧರ್ಮಾವರ, ಮಂತ್ರಾಲಯ ರಸ್ತೆ (ನಿಲುಗಡೆ), ಮತ್ತು ವಾಡಿಯಲ್ಲಿ ನಿಲ್ಲುತ್ತದೆ. ಖಾಸಗಿ ರೈಲಿನ ದರಗಳು ಭಾರತೀಯ ರೈಲ್ವೆಗಳು ವಿಧಿಸುವ ನಿಯಮಿತ ರೈಲು ಟಿಕೆಟ್ ದರಗಳಿಗೆ ಸಮನಾಗಿರುತ್ತದೆ. ಶಿರಡಿ ಸಾಯಿ ಬಾಬಾ ದೇವಸ್ಥಾನದಲ್ಲಿ ವಿಶೇಷ ವಿಐಪಿ ದರ್ಶನ ಒದಗಿಸುತ್ತದೆ. ದಕ್ಷಿಣ ರೈಲ್ವೇ ಮಜ್ದೂರ್ ಯೂನಿಯನ್‌ಗೆ ಸೇರಿದ ರೈಲ್ವೇ ನೌಕರರ ಗುಂಪು ಖಾಸಗಿ ರೈಲು ಸೇವೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಖಾಸಗಿ ರೈಲು ಸೇವೆ ಭಾರತೀಯ ರೈಲ್ವೆಯನ್ನು ಖಾಸಗೀಕರಣಗೊಳಿಸುವ ಯೋಜನೆಯಾಗಿದೆ ಎಂದು ಆರೋಪಿಸಿದ್ದಾರೆ.

Translate »