ಶಿಥಿಲಾವಸ್ಥೆಯತ್ತ ಸಾಗಿರುವ ಮೈಸೂರು ಸರ್ಕಾರಿ ಅತಿಥಿಗೃಹದ ಪಾರಂಪರಿಕ ಹೆಬ್ಬಾಗಿಲು
ಮೈಸೂರು

ಶಿಥಿಲಾವಸ್ಥೆಯತ್ತ ಸಾಗಿರುವ ಮೈಸೂರು ಸರ್ಕಾರಿ ಅತಿಥಿಗೃಹದ ಪಾರಂಪರಿಕ ಹೆಬ್ಬಾಗಿಲು

June 16, 2022

ಮೈಸೂರು, ಜೂ. ೧೫(ಆರ್‌ಕೆ)- ಅಂತರ ರಾಷ್ಟಿçÃಯ ಯೋಗ ದಿನಾಚರಣೆಯಲ್ಲಿ ಪಾಲ್ಗೊ ಳ್ಳಲು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮೈಸೂರಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಸಾಂಸ್ಕೃತಿಕ ನಗರಿ ಸಿಂಗಾರಗೊಳ್ಳುತ್ತಿದ್ದರೂ, ನಗರದ ಹೃದಯ ಭಾಗದಲ್ಲಿರುವ ಸರ್ಕಾರಿ ಅತಿಥಿಗೃಹದ ಪಾರಂಪರಿಕ ಸ್ವಾಗತ ಕಮಾನು ಗೇಟ್ ಅರ್ಥಾತ್ ಹೆಬ್ಬಾಗಿಲು ಮಾತ್ರ ನಿರ್ಲಕ್ಷö್ಯಕ್ಕೊಳಗಾಗಿದೆ.

ಜೂನ್ ೨೦ ಮತ್ತು ೨೧ರಂದು ಮೈಸೂರಿನ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿರು ವುದರಿಂದ ಪ್ರಧಾನಿಗಳು ಸಂಚರಿಸುವ ಮಾರ್ಗ, ಸರ್ಕಲ್, ಜಂಕ್ಷನ್‌ಗಳು, ವಾಸ್ತವ್ಯ ಹೂಡುವ ಸ್ಥಳದ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛಗೊಳಿಸಿ ಅಭಿವೃದ್ಧಿಪಡಿಸುತ್ತಿರುವ ಮೈಸೂರು ಮಹಾನಗರ ಪಾಲಿಕೆಯು, ಬಣ್ಣ-ಬಣ್ಣದ ವಿದ್ಯುತ್ ದೀಪಾ ಲಂಕಾರಗಳಿAದ ಶೃಂಗಾರ ಮಾಡುತ್ತಿದೆ.

ಆದರೆ ನಗರದ ಹೃದಯ ಭಾಗದಲ್ಲಿರುವ ನಜರ್ ಬಾದ್‌ನ ಸರ್ಕಾರಿ ಅತಿಥಿಗೃಹದ ಉತ್ತರ ದ್ವಾರದ ಪಾರಂಪರಿಕ ಆರ್ಚ್ ಗೇಟ್ ಶಿಥಿಲ ಗೊಂಡಿದ್ದು, ಹೆಬ್ಬಾಗಿಲ ಮೇಲೆ ಅರಳಿ ಮರದ ಗಿಡಗಳು ಬೇರು ಬಿಟ್ಟಿರುವುದರಿಂದ ಸ್ವಾಗತ ಕಮಾನಿನ ಅಲ್ಲಲ್ಲಿ ಬಿರುಕು ಬಿಟ್ಟಿದೆಯಲ್ಲದೆ, ಪ್ಲಾಸ್ಟಿಂಗ್ ಸಹ ಕಿತ್ತುಬಿದ್ದಿದೆ.

ಮಳೆ, ಬಿಸಿಲಿಗೆ ಇಡೀ ಆರ್ಚ್ ಗೇಟ್ ಪೇಂಟಿAಗ್ಸ್ ಹಾಳಾಗಿ ಪಾಚಿ ಕಟ್ಟಿದ್ದರೂ ಪಾಲಿಕೆ ಅಧಿಕಾರಿಗಳ ನಿರ್ಲಕ್ಷö್ಯದಿಂದಾಗಿ ಹಳೇ ಪಾರಂಪರಿಕ ನಿರ್ಮಾಣ ಶಿಥಿಲಗೊಂಡು ಕುಸಿದು ಬೀಳುವ ಸ್ಥಿತಿಗೆ ತಲುಪಿದೆ. ಪ್ರತೀದಿನ ಬೆಂಗಳೂರಿಗೆ ಹೋಗುವ ಮತ್ತು ಮೈಸೂರಿಗೆ ಬರುವ ಕೆಎಸ್ ಆರ್‌ಟಿಸಿ ಬಸ್ಸುಗಳು ಸೇರಿದಂತೆ ಎಲ್ಲಾ ವಾಹನ ಗಳೂ ಸರ್ಕಾರಿ ಅತಿಥಿಗೃಹದ ಉತ್ತರ ಗೇಟ್ ಮೂಲಕವೇ ಹಾದು ಹೋಗುತ್ತವೆ.

ಪ್ರವಾಸಿಗರು ಪ್ರತೀದಿನ ಇದೇ ಮಾರ್ಗದಲ್ಲಿ ಸಂಚರಿಸುತ್ತಾರೆ. ಇದೀಗ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮೈಸೂರಿಗೆ ಆಗಮಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮೈಸೂರಿನ ಬಹುತೇಕ ರಸ್ತೆ ಗಳನ್ನು ರಿಪೇರಿ ಮಾಡಿ ಅಭಿವೃದ್ಧಿಪಡಿಸುತ್ತಿರುವ ಪಾಲಿಕೆ ಅಧಿಕಾರಿಗಳು, ಸಿದ್ಧತೆಗಾಗಿಯೇ ಕೋಟ್ಯಾಂ ತರ ರೂ. ಖರ್ಚು ಮಾಡುತ್ತಿರುವಾಗ ಶಿಥಿಲಾವಸ್ಥೆ ಯಲ್ಲಿದ್ದು, ಗಿಡಗಂಟಿ ಬೆಳೆದುಕೊಂಡಿರುವ ಹೆರಿ ಟೇಜ್ ಆರ್ಚ್ ಗೇಟ್ ನಿರ್ವಹಣೆಯನ್ನು ಮರೆ ತಿರುವುದು ಶೋಚನೀಯ.

ಕೇವಲ ಗೋಡೆ ಮೇಲೆ ಬೆಳೆದಿರುವ ಗಿಡ ಕಿತ್ತು, ಕೆಳಬಿದ್ದಿರುವೆಡೆ ರೀ-ಪ್ಲಾಸ್ಟಿಂಗ್ ಮಾಡಿ ಸುಣ್ಣ-ಬಣ್ಣ ಬಳಿದರೆ ಸಾಕು. ಈ ಪಾರಂಪರಿಕ ನಿರ್ಮಾ ಣದ ಸಂರಕ್ಷಣೆಯಾಗಿ ನೋಡಲೂ ಸುಂದರವಾಗಿ ಕಾಣುತ್ತದೆ. ಕೇವಲ ಅಲ್ಪ ಹಣದಲ್ಲಿ ಈ ಹಳೆಯ ನಿರ್ಮಾಣವನ್ನು ಸುರಕ್ಷಿತವಾಗಿ ಉಳಿಸಬಹು ದಾಗಿದ್ದರೂ, ಇಚ್ಛಾಸಕ್ತಿ ಕೊರತೆಯಿಂದಾಗಿ ಪಾರಂಪರಿಕ ನಿರ್ಮಾಣ ಶಿಥಿಲಾವಸ್ಥೆಯಲ್ಲಿದೆ.

ಈ ಕುರಿತು ‘ಮೈಸೂರು ಮಿತ್ರ’ನಿಗೆ ಪ್ರತಿಕ್ರಿಯಿ ಸಿದ ಆ ಭಾಗದ ೨೭ನೇ ವಾರ್ಡ್ ಕಾರ್ಪೊರೇಟರ್ ರಫಿಕ್ ಅಹಮದ್ ಅವರು, ಪಾರಂಪರಿಕ ಆರ್ಚ್ ಗೇಟ್ ಗೋಡೆಯಲ್ಲಿ ಗಿಡ ಬೆಳೆದು ಪ್ಲಾಸ್ಟಿಂಗ್ ಕಳಚಿದೆ. ಈಗಲೇ ಪಾಲಿಕೆ ಇಂಜಿನಿಯರ್‌ಗಳನ್ನು ಕರೆಸಿ ತೋರಿಸಿ ತಡಮಾಡದೇ ಗಿಡ ತೆಗೆದು ರೀಪ್ಲಾಸ್ಟಿಂಗ್ ಮಾಡಿ ಬಣ್ಣ ಬಳಿಸಲು ಕ್ರಮ ವಹಿಸುತ್ತೇನೆ. ನಾಳೆ ಯಿಂದಲೇ ಕಾಮಗಾರಿ ಆರಂಭಿಸಿ ಪ್ರಧಾನಿಗಳು ಬರುವಷ್ಟರಲ್ಲಿ ಕೆಲಸ ಪೂರೈಸುತ್ತೇವೆ ಎಂದರು.

ಫೈವ್‌ಲೈಟ್ ಸರ್ಕಲ್‌ನಿಂದ ಹೈದರ್ ಅಲಿ ರಸ್ತೆವರೆಗಿನ ಅಬ್ಬಾ ರಸ್ತೆಯನ್ನು ೬ ಪಥದ ರಸ್ತೆಯ ನ್ನಾಗಿ ಅಭಿವೃದ್ಧಿಗೊಳಿಸಿದ ಸಂದರ್ಭ ೨೦೨೦ರಲ್ಲಿ ಈ ಪಾರಂಪರಿಕ ಕಮಾನನ್ನು ಪಾರಂಪರಿಕ ತಜ್ಞರ ಸಲಹೆಯಂತೆ ಯಥಾಸ್ಥಿತಿಯಲ್ಲಿ ಕಾಯ್ದುಕೊಂಡು, ರಿಪೇರಿ ಮಾಡಿ ಅಭಿವೃದ್ಧಿಪಡಿಸಲಾಗಿತ್ತು.

ಸುರಕ್ಷತೆ ದೃಷ್ಟಿಯಿಂದ ಈ ಹೆಬ್ಬಾಗಿಲ ಸುತ್ತ ಕಬ್ಬಿ ಣದ ಗ್ರಿಲ್‌ಗಳನ್ನು ಅಳವಡಿಸಿದ್ದರು. ಪಾರಂಪರಿಕ ತಜ್ಞರ ಸಮಿತಿ ಹಾಗೂ ಹಿರಿಯ ನಾಗರಿಕರ ಒತ್ತಾ ಯದ ಮೇರೆಗೆ ರಿಪೇರಿ ಮಾಡಿಸಿದ್ದ ಪಾಲಿಕೆ ಅಧಿ ಕಾರಿಗಳು, ನಂತರ ಅತ್ತ ಗಮನಹರಿಸದೇ ನಿರ್ಲಕ್ಷö್ಯ ವಹಿಸಿದ ಕಾರಣ ಇದೀಗ ಅಲ್ಲಿ ಗಿಡಗಳು ಬೆಳೆದು ಶಿಥಿಲಗೊಂಡಿದೆ. ಪ್ರಧಾನಿಗಳ ಭೇಟಿಗೆ ದಿನಗಣನೆ ಆರಂಭವಾಗಿದ್ದರೂ ಅಧಿಕಾರಿಗಳಿಗೆ ಈ ಪಾರಂ ಪರಿಕ ಆರ್ಚ್ ಗೇಟ್‌ನ ಸೌಂದರ್ಯ ಕಾಪಾಡು ವುದರತ್ತ ಗಮನ ಕೊಡದಿರುವ ಬಗ್ಗೆ ಹಿರಿಯ ನಾಗರಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

 

 

Translate »