ಮೈಸೂರಲ್ಲಿ ವಿಶ್ವ ಹಿರಿಯರ ನಿಂದನೆ ತಡೆ ಜಾಗೃತಿ ದಿನಾಚರಣೆ ಹಿರಿಯರ ನಿರ್ಲಕ್ಷö್ಯಕ್ಕೆ ಜಾಮೀನುರಹಿತ ಅರೆಸ್ಟ್ ವಾರೆಂಟ್
ಮೈಸೂರು

ಮೈಸೂರಲ್ಲಿ ವಿಶ್ವ ಹಿರಿಯರ ನಿಂದನೆ ತಡೆ ಜಾಗೃತಿ ದಿನಾಚರಣೆ ಹಿರಿಯರ ನಿರ್ಲಕ್ಷö್ಯಕ್ಕೆ ಜಾಮೀನುರಹಿತ ಅರೆಸ್ಟ್ ವಾರೆಂಟ್

June 16, 2022

ಮೈಸೂರು,ಜೂ.೧೫(ಪಿಎA)- ಹಿರಿಯರ ನಿಂದನೆ, ನಿರ್ಲಕ್ಷö್ಯ ಅವರ ಮಕ್ಕಳಿಂದಲೇ ಹೆಚ್ಚಾಗಿ ಆಗುತ್ತಿದ್ದು, ಈ ಸಂಬAಧ ಸಾಕಷ್ಟು ದೂರುಗಳು ಬರುತ್ತವೆ. ಇಂತಹ ಪ್ರಕರಣಗಳು ವಾಸ್ತವದಲ್ಲಿ ದಾಖಲಾಗು ವುದು ಕಡಿಮೆ. ಒಂದು ವೇಳೆ ಪ್ರಕರಣ ದಾಖ ಲಾದರೆ ಜಾಮೀನು ರಹಿತ ಅರೆಸ್ಟ್ ವಾರೆಂಟ್ ಜಾರಿ ಯಾಗಲಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀ ಶರೂ ಆದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ದೇವರಾಜ ಭೂತೆ ಹೇಳಿದರು.

ಮೈಸೂರಿನ ದೇವರಾಜ ಮಾರುಕಟ್ಟೆ ಬಳಿಯ ಚಿಕ್ಕ ಗಡಿಯಾರ ಆವರಣದಲ್ಲಿ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ರಾಷ್ಟಿçÃಯ ಸೇವಾ ಯೋಜನೆ, ಹಿರಿಯ ನಾಗರಿಕರ ಸಹಾಯವಾಣ ಕೇಂದ್ರ, ನೈಟಿಂಗೇಲ್ಸ್ ಮೆಡಿಕಲ್ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ ಬುಧವಾರ ಹಮ್ಮಿ ಕೊಂಡಿದ್ದ ವಿಶ್ವ ಹಿರಿಯರ ನಿಂದನೆ ತಡೆ ಜಾಗೃತಿ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

ನಮ್ಮ ಪರಂಪರೆ ಮತ್ತು ಸಂಸ್ಕೃತಿಯಲ್ಲಿ ಹಿರಿಯ ರನ್ನು ಗೌರವ ಮತ್ತು ಪ್ರೀತಿಯಿಂದ ಕಾಣಲಾಗಿದೆ. ಶ್ರೀರಾಮನು ತನ್ನ ತಂದೆಗೆ ಕೊಟ್ಟ ಮಾತಿನಂತೆ ವನ ವಾಸ ಮಾಡಿದ. ಶ್ರವಣಕುಮಾರ ತನ್ನ ಅಂಧ ತಂದೆ- ತಾಯಿಯನ್ನು ಹೆಗಲ ಮೇಲೆ ಹೊತ್ತು ತೀರ್ಥಯಾತ್ರೆ ಮಾಡಿಸಿದ. ಹಿರಿಯರ ವಿಚಾರದಲ್ಲಿ ಇಂತಹ ಉನ್ನತ ಪರಂಪರೆ ನಮ್ಮದು. ಇಂತಹ ನೆಲದಲ್ಲಿಯೂ ಹಿರಿಯ ರನ್ನು ನಿಂದಿಸದAತೆ ಜಾಗೃತಿ ಮೂಡಬೇಕಾದ ಪರಿ ಸ್ಥಿತಿ ಬಂದಿರುವುದು ವಿಷಾದನೀಯ ಎಂದರು.

ಹಿರಿಯರಿಗೆ ಕಿರುಕುಳ ಹೆಚ್ಚಾಗಿ ಅವರ ಮಕ್ಕಳಿಂ ದಲೇ ಆಗುತ್ತಿರುತ್ತದೆ. ಪ್ರತಿಯೊಬ್ಬರು ಒಂದು ದಿನ ವಯೋವೃದ್ಧರಾಗಲೇಬೇಕು. ಇದನ್ನು ಮನಗಂಡು ನಮ್ಮ ಹಿರಿಯರನ್ನು ಕಾಳಜಿಯಿಂದ ನೋಡಿಕೊಳ್ಳ ಬೇಕು. ನಾವು ಚಿಕ್ಕವರಿದ್ದಾಗ ನಮ್ಮ ಪೋಷಕರು ಅದೆಷ್ಟು ಕಾಳಜಿಯಿಂದ ಸಾಕಿ ಸಲುಹಿದರು ಎಂಬುದನ್ನು ಅವ ಲೋಕಿಸಬೇಕು. ವೃದ್ಧಾಪ್ಯರಲ್ಲಿ ಮಕ್ಕಳ ಮನೋಭಾವ ಬರುತ್ತದೆ. ಹಾಗಾಗಿ ಹಿರಿಯರನ್ನು ಅವರ ಮಕ್ಕಳು ಪೋಷಕರಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.

ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಆರ್. ಮಾಲಿನಿ ಮಾತನಾಡಿ, ಹಿರಿಯರು ತಮ್ಮ ಮಕ್ಕಳಿಂದಲೇ ಶೋಷಣೆಗೆ ಒಳಗಾವುದೇ ಹೆಚ್ಚು. ಕಿರುಕುಳ ಅನು ಭವಿಸಿದರೂ ಮುಜುಗರದಿಂದ ಹೊರಗೆ ಹೇಳದೇ ನೋವು ತಿನ್ನುತ್ತಾರೆ. ಹಿರಿಯರ ಶೋಷಣೆ ಕಾನೂ ನಿನಡಿ ಅಪರಾಧವಾಗಲಿದೆ ಎಂದು ಹೇಳಿದರು.

ಮೈಸೂರು ವಿವಿ ಎನ್‌ಎಸ್‌ಎಸ್ ಸಂಯೋಜಕ ಡಾ. ಎಂ.ಬಿ.ಸುರೇಶ್ ಮಾತನಾಡಿ, ಕೋಲಾರ ಜಿಲ್ಲೆಯಲ್ಲಿ ಹಿರಿಯ ನಾಗರಿಕರ ಸಹಾಯವಾಣ ಗೆ (ಎಲ್ಡರ್ ಲೈನ್-೧೪೫೬೭) ವರ್ಷದಲ್ಲಿ ೫೫ ಸಾವಿರ ಕರೆಗಳು ಬಂದಿರುವುದು ಮಾಧ್ಯಮಗಳಲ್ಲಿ ವರದಿಯಾಗಿದೆ. ಹಾಗಾದರೆ ರಾಜ್ಯ, ದೇಶ ಮತ್ತು ಪ್ರಪಂಚದಲ್ಲಿ ಇನ್ನೆಷ್ಟು ಹಿರಿಯರು ಸಮಸ್ಯೆಯಲ್ಲಿ ಇದ್ದಾರೆ ಎಂದು ಊಹಿಸಿದರೆ ನೋವಾಗುತ್ತದೆ. ಹಿರಿಯರ ಮೇಲಿನ ದೌರ್ಜನ್ಯ ತಡೆಯುವುದು ಅತ್ಯಗತ್ಯವಾಗಿದೆ ಎಂದರು.

ಇದೇ ವೇಳೆ ಹಮ್ಮಿಕೊಂಡಿದ್ದ ಜಾಗೃತಿ ಜಾಥಾಕ್ಕೆ ದೇವರಾಜ ಭೂತೆ ಚಾಲನೆ ನೀಡಿದರು. ಹಿರಿಯ ರನ್ನು ಕೆಟ್ಟದಾಗಿ ನಡೆಸಿಕೊಳ್ಳುವುದು ಅಪರಾಧ… ಹಿರಿಯರನ್ನು ಗೌರವಿಸಿ ಮತ್ತು ಪ್ರೀತಿಸಿ… ಎಂಬಿತ್ಯಾದಿ ಘೋಷವಾಕ್ಯ ಒಳಗೊಂಡ ಫಲಕಗಳನ್ನಿಡಿದು ವಿವಿಧ ಕಾಲೇಜುಗಳ ಎನ್‌ಎಸ್‌ಎಸ್ ಸ್ವಯಂ ಸೇವಕರು ಜಾಥಾ ನಡೆಸಿದರು. ಚಿಕ್ಕ ಗಡಿಯಾರದಿಂದ ಆರಂಭಗೊAಡ ಜಾಥಾ, ದೇವರಾಜ ಅರಸು ರಸ್ತೆ, ಕೆಆರ್ ವೃತ್ತ, ಆಲ್ಬರ್ಟ್ ವಿಕ್ಟರ್ ರಸ್ತೆ, ಚಾಮರಾಜ ಒಡೆಯರ್ ವೃತ್ತದಲ್ಲಿ ಸಾಗಿ, ಅದೇ ಮಾರ್ಗದಲ್ಲಿ ಹಿಂತಿರುಗಿ ಚಿಕ್ಕ ಗಡಿ ಯಾರ ಆವರಣದಲ್ಲಿ ಜಾಥಾ ಕೊನೆಗೊಂಡಿತು.
ಬೀದಿ ನಾಟಕ: ಚಿಕ್ಕ ಗಡಿಯಾರ ಆವರಣದಲ್ಲಿ ರಂಗಾAತರAಗ ಮೈಸೂರು ತಂಡದ ವತಿಯಿಂದ ಹಿರಿಯರ ನಿಂದನೆ ತಡೆ ಕುರಿತಂತೆ ಇದೇ ವೇಳೆ ಬೀದಿ ನಾಟಕ ಪ್ರದರ್ಶಿಸಲಾಯಿತು. ತಂಡದ ಕೀರ್ತಿರಾಜ್ ಮತ್ತು ರುಬೀನ್ ಸಂಜಯ್ ನೇತೃತ್ವದಲ್ಲಿ ೮ ಮಂದಿ ಕಲಾವಿದರು ನಾಟಕದ ಮೂಲಕ ಹಿರಿಯರ ಬಗೆಗೆ ಕಾಳಜಿ ವಹಿಸಬೇಕಿರುವ ಮಹತ್ವದ ಬಗ್ಗೆ ಸಂದೇಶ ಸಾರಿದರು. ೨೦ ನಿಮಿಷ ಅವಧಿಯ ಕಿರಿ ನಾಟಕ ವನ್ನು ೫ ಪ್ರದರ್ಶನ ನೀಡಿ, ಜಾಗೃತಿ ಮೂಡಿಸಲಾಯಿತು.

ಮಹಾರಾಣ ವಾಣ ಜ್ಯ ಕಾಲೇಜಿನ ಎನ್‌ಎಸ್‌ಎಸ್ ಕಾರ್ಯಕ್ರಮ ಅಧಿಕಾರಿ ಡಾ.ಗೋವಿಂದೇಗೌಡ, ಮಹಾರಾಜ ಕಾಲೇಜಿನ ಎನ್‌ಎಸ್‌ಎಸ್ ಕಾರ್ಯ ಕ್ರಮ ಅಧಿಕಾರಿ ಡಾ.ಪಿ.ಎಸ್.ಮಧುಸೂದನ್, ಮಹಾರಾಣ ವಿಜ್ಞಾನ ಕಾಲೇಜಿನ ಎನ್‌ಎಸ್‌ಎಸ್ ಕಾರ್ಯಕ್ರಮ ಅಧಿಕಾರಿ ರಮೇಶ್‌ಬಾಬು, ರಾಷ್ಟಿçÃಯ ಹಿರಿಯ ನಾಗರಿಕರ ಸಹಾಯವಾಣ ಯ ಕ್ಷೇತ್ರ ನಿರ್ವಹಣಾಧಿಕಾರಿ (ಮೈಸೂರು-ಚಾಮರಾಜನಗರ ಜಿಲ್ಲೆ) ಆರ್.ವಿಕ್ರಮ್ ಮತ್ತಿತರರು ಹಾಜರಿದ್ದರು.

Translate »