ಇನ್ನೆರಡು ವರ್ಷದಲ್ಲಿ ಮೈಸೂರು ವಿಮಾನ ನಿಲ್ದಾಣ ಅಂತರರಾಷ್ಟ್ರೀಯ ಮಟ್ಟಕ್ಕೆ
ಮೈಸೂರು

ಇನ್ನೆರಡು ವರ್ಷದಲ್ಲಿ ಮೈಸೂರು ವಿಮಾನ ನಿಲ್ದಾಣ ಅಂತರರಾಷ್ಟ್ರೀಯ ಮಟ್ಟಕ್ಕೆ

June 16, 2022

ಬೆಂಗಳೂರು, ಜೂ.೧೫(ಕೆಎಂಶಿ)-ಮೈಸೂರು ಮಂಡಕಳ್ಳಿ ವಿಮಾನ ನಿಲ್ದಾಣ ಇನ್ನೆರಡು ವರ್ಷಗಳಲ್ಲಿ ಅಂತರರಾಷ್ಟಿçÃಯ ವಿಮಾನ ನಿಲ್ದಾಣವಾಗಿ ಪರಿವರ್ತನೆಗೊಳ್ಳಲಿದೆ ಎಂದು ವಸತಿ ಮತ್ತು ಮೂಲಸೌಕರ್ಯ ಸಚಿವ ವಿ.ಸೋಮಣ್ಣ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯವನ್ನು ಕೃಷಿ ಮತ್ತು ಕೈಗಾರಿಕಾ ಹಬ್ ಆಗಿ ರೂಪಿಸುವ ಉದ್ದೇಶದಿಂದ ಕೆಲವು ವಿಮಾನ ನಿಲ್ದಾಣಗಳನ್ನು ಮೇಲ್ದರ್ಜೆಗೇರಿಸುವುದರ ಜೊತೆಗೆ ದಾವಣಗೆರೆ, ರಾಯಚೂರು ಹಾಗೂ ಕೊಪ್ಪಳದಲ್ಲಿ ಹೊಸ ವಿಮಾನ ನಿಲ್ದಾಣಗಳನ್ನು ಸ್ಥಾಪಿಸುವುದಾಗಿ ಪ್ರಕಟಿಸಿದರು.
ಮೈಸೂರು ವಿಮಾನ ನಿಲ್ದಾಣವನ್ನು ೧೮೨೦ ಕೋಟಿ ರೂ.ಗಳ ವೆಚ್ಚದಲ್ಲಿ ಮೇಲ್ದರ್ಜೆಗೇರಿಸುವ ಕೆಲಸ ಪ್ರಾರಂಭವಾಗಿದೆ. ವಿಸ್ತರಣೆಗೆ ಅಗತ್ಯವಿರುವ ಭೂ ಸ್ವಾಧೀನ ಕಾರ್ಯಕ್ಕೆ ತಗಲುವ ೩೦೦ ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ ಎಂದರು.
ಬಿಜಾಪುರದ ವಿಮಾನ ನಿಲ್ದಾಣ ಕಾಮಗಾರಿ ಆರಂಭವಾಗಿದ್ದು, ೩೨೦೦ ಎಕರೆ ವಿಸ್ತೀರ್ಣದ ಈ ವಿಮಾನ ನಿಲ್ದಾಣ ಪೂರ್ಣ ಗೊಂಡರೆ ರಾಜ್ಯದ ಅಭಿವೃದ್ಧಿ ಪರ್ವವೇ ಆರಂಭವಾಗಲಿದೆ ಎಂದ ಅವರು, ಆ ಭಾಗದಲ್ಲಿ ತೋಟಗಾರಿಕೆ ಮತ್ತು ಪುಷ್ಪೋ ದ್ಯಮ ವಿಫುಲವಾಗಿ ಬೆಳೆಯಲು ದಾರಿಯಾಗುತ್ತದೆ ಎಂದರು.

ಬಿಜಾಪುರ, ಬಾಗಲಕೋಟೆ ಸೇರಿದಂತೆ ಆ ಭಾಗದ ಹಲವು ಜಿಲ್ಲೆಗಳಲ್ಲಿ ವಿಶ್ವದರ್ಜೆಯ ಹೂವು ಮತ್ತು ಹಣ್ಣು ಬೆಳೆಯಲಾಗು ತ್ತಿದ್ದು ಅಂತರರಾಷ್ಟಿçÃಯ ವಿಮಾನ ನಿಲ್ದಾಣ ಪ್ರಾರಂಭವಾದರೆ ಕರ್ನಾಟಕದ ಆರ್ಥಿಕ ಚಿತ್ರಣವೇ ಬದಲಾಗಲಿದೆ ಎಂದರು.

ಇದು ಸಾಧ್ಯವಾದರೆ ಸಹಜವಾಗಿಯೇ ಕೃಷಿ ಮತ್ತು ಕೈಗಾರಿಕೆ ಕ್ಷೇತ್ರಗಳಲ್ಲಿ ಬಂಡವಾಳ ಹೂಡುವವರು ಇನ್ನಷ್ಟು ಆಸಕ್ತಿ ತಳೆಯು ತ್ತಾರೆ. ಆ ಮೂಲಕ ರಾಜಧಾನಿ ಬೆಂಗಳೂರಿನ ಮೇಲೆ ಕೇಂದ್ರೀ ಕೃತವಾಗಿರುವ ಗಮನ ಇಡೀ ರಾಜ್ಯದ ಮೇಲೆ ಬೀಳುತ್ತದೆ. ಮೈಸೂರು, ಬಿಜಾಪುರ, ಶಿವಮೊಗ್ಗಗಳಲ್ಲಿ ಎಟಿಆರ್‌ನಿಂದ ಬೋಯಿಂಗ್ ವಿಮಾನ ಗಳ ಓಡಾಟಕ್ಕೆ ಅನುವು ಮಾಡಿಕೊಡಲಾಗುವುದು. ಈ ವಿಮಾನ ನಿಲ್ದಾಣಗಳು ಮೇಲ್ದರ್ಜೆಗೇರಿಸಿದರೆ ರಾಷ್ಟಿçÃಯ, ಅಂತರರಾಷ್ಟಿçÃಯ ವಿಮಾನಗಳು ಹಾರಾಟ ನಡೆಸಲು ಸಹಕಾರಿಯಾಗಲಿದೆ. ವಿಶ್ವದ ಯಾವುದೇ ಭಾಗದಿಂದ ಈ ನಗರಗಳಿಗೆ ವಾಯು ಸಂಪರ್ಕವಿದೆ ಎಂದಾದಲ್ಲಿ ಉದ್ದಿಮೆದಾರರು ಬಂಡವಾಳ ಹೂಡಲು ಆಸಕ್ತಿ ತೋರುತ್ತಾರೆ. ಇದರಿಂದ ಆ ಪ್ರದೇಶ ಆರ್ಥಿಕ ಬೆಳವಣ ಗೆಗೆ ಸಹ ಕಾರಿಯಾಗುವುದಲ್ಲದೆ, ನಿರುದ್ಯೋಗ ಸಮಸ್ಯೆ ನಿವಾರಣೆಯಾಗು ತ್ತದೆ. ರಾಜ್ಯದಲ್ಲಿ ಮೂಲಸೌಕರ್ಯಗಳನ್ನು ಒದಗಿಸುವ ಯೋಜನೆ ಗಳಿಗೆ ಅಪಾರ ಪ್ರಮಾಣದ ಭೂಮಿ ಬೇಕು. ಆದರೆ ಸುಪ್ರೀಂಕೋರ್ಟ್ ನಿರ್ಧಾರದಿಂದ ಸ್ವಾಧೀನಪಡಿಸಿಕೊಳ್ಳುವ ಭೂಮಿಗೆ ಮೂರು ಪಟ್ಟು ಹಣ ನೀಡಬೇಕಿದ್ದು, ಇದು ಸಮಸ್ಯೆಯಾಗಿದೆ. ರೈಲ್ವೇ ಯೋಜನೆ, ವಿಮಾನ ಯೋಜನೆ ಸೇರಿದಂತೆ ಹಲವು ಯೋಜನೆಗಳ ಜಾರಿಗೆ ಬೇಕಾಗುವ ಭೂಸ್ವಾಧೀನ ಪ್ರಕ್ರಿಯೆಗೆ ರಾಜ್ಯ ಸರ್ಕಾರವೇ ಹಣ ಒದಗಿಸಬೇಕಿದೆ. ಈ ವಿಷಯದಲ್ಲಿ ಕೊರತೆ ಇರುವುದರಿಂದ ನಿರೀ ಕ್ಷಿತ ವೇಗದಲ್ಲಿ ಮುಂದುವರಿಯುವುದು ಕಷ್ಟವಾಗುತ್ತಿದೆ ಎಂದರು.

Translate »