ವಾಷಿಂಗ್ಟನ್,ನ.8-ಭಾರತ ಹಾಗೂ ಅಮೆರಿಕ ನಡುವಿನ ದ್ವಿಪಕ್ಷೀಯ ಸಂಬಂಧವು 21ನೇ ಶತಮಾನದ ಮಾದರಿ ಬಾಂಧವ್ಯವಾಗಿ ರೂಪುಗೊಳ್ಳಲಿದೆ ಎಂದು ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲುವು ಸಾಧಿಸಿರುವ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೋ ಬೈಡೆನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಸರಣಿ ಟ್ವೀಟ್ ಮಾಡಿರುವ ಬೈಡೆನ್, ಭಾರತದ ಜತೆಗಿನ ದ್ವಿಪಕ್ಷೀಯ ಸಂಬಂಧವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯು ವುದಾಗಿಯೂ ಭರವಸೆ ನೀಡಿದ್ದಾರೆ.
15 ವರ್ಷ ಹಿಂದೆ ಸಂಸತ್‍ನ ವಿದೇಶಿ ಬಾಂಧವ್ಯ ಸಮಿತಿ ಮುಖ್ಯಸ್ಥನಾಗಿದ್ದಾಗಲೇ ಭಾರತದ ಜತೆಗಿನ ಐತಿಹಾಸಿಕ ಪರಮಾಣು ಒಪ್ಪಂದ, ರಕ್ಷಣೆ ಮತ್ತು ತಂತ್ರಜ್ಞಾನ ಕ್ಷೇತ್ರ ಗಳಲ್ಲಿ ಸಹಕಾರ ಒಪ್ಪಂದಕ್ಕೆ ಅನುಮೋದನೆ ನೀಡಿದ್ದೆ. ಭಾರತ-ಅಮೆರಿಕಗಳು ನಿಕಟ ಸ್ನೇಹಿತರಾದರೆ ಮಾತ್ರವೇ ಜಗತ್ತು ಸುರಕ್ಷಿತವಾಗಿರುತ್ತದೆ ಎಂಬುದನ್ನು ಅಂದೇ ಹೇಳಿದ್ದೆ ಎಂದು ಬೈಡೆನ್ ಬರೆದುಕೊಂಡಿದ್ದಾರೆ.
ಉಭಯ ದೇಶಗಳ ನಡುವೆ ದ್ವಿಪಕ್ಷೀಯ ವಾಣಿಜ್ಯ ಒಪ್ಪಂ ದಕ್ಕೆ ಸಂಬಂಧಿಸಿ ಅವಕಾಶಗಳು ಹೇರಳವಾಗಿವೆ. ಆ ನಿಟ್ಟಿನಲ್ಲಿ ನಮ್ಮ ಸರಕಾರ ಗಮನ ನೀಡಲಿದೆ ಎಂದು ತಿಳಿಸಿ ದ್ದಾರೆ. 7 ವರ್ಷ ಹಿಂದೆ ಉಪಾಧ್ಯಕ್ಷರಾಗಿದ್ದಾಗ ಮುಂಬಯಿ ನಲ್ಲಿ ನಡೆದ ಉದ್ಯಮ ಪ್ರಮುಖರ ಶೃಂಗದಲ್ಲಿ ಮಾತನಾ ಡಿದ್ದ ಬೈಡೆನ್, ಭಾರತ-ಅಮೆರಿಕ ನಡುವೆ ವಾರ್ಷಿಕ 500 ಶತಕೋಟಿ ಡಾಲರ್ ವಹಿವಾಟಿಗೆ ಅವಕಾಶವಿದೆ ಎಂದು ನುಡಿದಿದ್ದರು. ಈಗ ಉಭಯ ದೇಶಗಳ ನಡು ವಿನ ದ್ವಿಪಕ್ಷೀಯ ವಾಣಿಜ್ಯ ವಹಿವಾಟು ವಾರ್ಷಿಕ 150 ಶತಕೋಟಿ ಡಾಲರ್‍ನಷ್ಟಿದೆ.
ಶತ್ರುಗಳ ವಿರುದ್ಧ ಜಂಟಿ ಹೋರಾಟ..!: ಭಾರತ-ಅಮೆರಿಕ ದೇಶಗಳು ಭಯೋತ್ಪಾದನೆ ವಿರುದ್ಧ ಜಂಟಿಯಾಗಿ ಹೋರಾಟ ನಡೆಸಲಿವೆ. ಪ್ರಾದೇಶಿಕ ಶಾಂತಿ ಮತ್ತು ಸ್ಥಿರತೆಗೆ ಒಟ್ಟಾಗಿ ಶ್ರಮಿಸಲಿವೆ. ಚೀನಾ ಸೇರಿದಂತೆ ಯಾವ ದೇಶವೂ ತನ್ನ ನೆರೆ ರಾಷ್ಟ್ರವನ್ನು ಬೆದರಿಸಲಾಗದು. ನಾವು ಮಾರು ಕಟ್ಟೆಗಳನ್ನು ಮುಕ್ತಗೊಳಿಸುತ್ತೇವೆ ಮತ್ತು ಜತೆಯಾಗಿ ಬೆಳೆಯುತ್ತೇವೆ. ಜಾಗತಿಕ ತಾಪಮಾನ, ಜಾಗತಿಕ ಆರೋಗ್ಯ, ಅಣ್ವಸ್ತ್ರ ನಿಶ್ಯಸ್ತ್ರೀಕರಣ, ಭಯೋತ್ಪಾದನೆ ನಿಗ್ರಹ ಮೊದ ಲಾದ ಸವಾಲುಗಳನ್ನು ಒಟ್ಟಾಗಿಯೇ ಎದುರಿಸುತ್ತೇವೆ ಎಂದು ಪ್ರಚಾರದ ವೇಳೆ ಆಡಿದ್ದ ಮಾತುಗಳನ್ನು ಬೈಡೆನ್ ಪುನ ರುಚ್ಚರಿಸಿದ್ದಾರೆ. ನಾನು ಮತ್ತು ಕಮಲಾ ಹ್ಯಾರಿಸ್ ಇಬ್ಬರೂ ವಿದೇಶಗಳ ಜತೆಗಿನ ನಮ್ಮ ಬಾಂಧವ್ಯವನ್ನು ಗೌರವದಿಂದ ನೋಡಲು ಮತ್ತು ಬಲಪಡಿಸಲು ಬಯಸುತ್ತೇವೆ. ನಮ್ಮ ವಿದೇಶಾಂಗ ನೀತಿಯೂ ಅದೇ ರೀತಿ ಇರುತ್ತದೆ. ಹಾಗೆಯೇ ಭಾರತ-ಅಮೆರಿಕ ಬಾಂಧವ್ಯವನ್ನೂ
ನಾವು ಗೌರವಿಸುತ್ತೇವೆ. ಡೊನಾಲ್ಡ್ ಟ್ರಂಪ್‍ಗೆ ಇದು ಫೆÇೀಟೊಶೂಟ್ ಮಾಡಿಸಿಕೊಳ್ಳುವ ವಿಷಯ. ಆದರೆ ನಮಗೆ ಬಾಂಧವ್ಯ ಬಲಪಡಿಸುವುದೇ ಗುರಿ ಎಂದು ಅವರು ಹೇಳಿದ್ದಾರೆ. ಚುನಾವಣಾ ಪ್ರಚಾರದ ಸಮಯದಲ್ಲಿಯೂ ಬೈಡೆನ್ ಅವರು ಭಾರತದ ಜತೆಗಿನ ಬಾಂಧವ್ಯ ವೃದ್ಧಿ ಕುರಿತು ಪ್ರಸ್ತಾಪಿಸುತ್ತಲೇ ಇದ್ದರು. ಕೊನೆಯ ಅಧ್ಯಕ್ಷೀಯ ಚರ್ಚೆಯಲ್ಲಿ ಟ್ರಂಪ್ ಅವರು ‘’ಭಾರತದ ಗಾಳಿ ಕಲುಷಿತವಾಗಿದೆ,’’ ಎಂದು ದೂಷಿಸಿದಾಗ, ‘’ಗೆಳೆಯರನ್ನೇ ದೂಷಿಸಲು ಈಗ ಮನಸ್ಸಾದರೂ ಹೇಗೆ ಬಂತು,’’ ಎಂದು ನೇರವಾಗಿಯೇ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು.
5 ಲಕ್ಷ ಭಾರತೀಯರಿಗೆ ಅಮೆರಿಕ ನಾಗರಿಕತ್ವ!
ವಾಷಿಂಗ್ಟನ್,ನ.8-ಅಮೆರಿಕದ ನೂತನ ಅಧ್ಯಕ್ಷರಾಗಿ ಜೋ ಬೈಡೆನ್ ಆಯ್ಕೆ ಯಾದ ಬೆನ್ನಲ್ಲೇ ಬೈಡೆನ್ ಸರ್ಕಾರ ಅನಿವಾಸಿ ಭಾರತೀಯರಿಗೆ ಗುಡ್‍ನ್ಯೂಸ್ ನೀಡಿದ್ದು, 5 ಲಕ್ಷ ಭಾರತೀಯರಿಗೆ ಅಮೆರಿಕ ನಾಗರಿಕತ್ವ ನೀಡಲು ಮುಂದಾಗಿದೆ.
ಜೋ ಬೈಡೆನ್ ಮತ್ತು ಭಾರತ ಮೂಲದ ಕಮಲಾ ಹ್ಯಾರಿಸ್ ಸರ್ಕಾರ ಅನಿವಾಸಿ 5 ಲಕ್ಷ ಭಾರತೀಯರೂ ಸೇರಿದಂತೆ 11 ಲಕ್ಷ ವಿದೇಶಿ ವಲಸಿಗರಿಗೆ ಅಮೆರಿಕ ನಾಗರಿಕತ್ವ ನೀಡುವ ಕುರಿತು ನಿರ್ಧರಿಸಿದೆ. ಅಂತೆಯೇ ನಾಗರಿಕತ್ವ ವಿತರಣೆಗೆ ವಾರ್ಷಿಕ 95,000 ಮಿತಿ ಹೇರಲಾಗಿದ್ದು, ಈ ಕುರಿತಂತೆ ಬೈಡೆನ್ ಕ್ಯಾಂಪೇನ್ ಪಾಸಲಿಸಿ ಡಾಕ್ಯುಮೆಂಟ್ ನಲ್ಲಿ ತಿಳಿಸಲಾಗಿದೆ. ಅಮೆರಿಕದಲ್ಲಿ ಕೆಲಸಕ್ಕಾಗಿ ಬಂದ ವಿವಿಧ ದೇಶಗಳ ಸುಮಾರು 11 ಲಕ್ಷ ವಲಸಿಗರಿದ್ದು, ಈ ಪೈಕಿ ಭಾರತದ ಮೂಲದ 5 ಲಕ್ಷ ವಲಸಿಗರಿದ್ದಾರೆ. ಈ ವಲಸಿಗರಿಗೆ ನಾಗರಿಕತ್ವ ನೀಡಲು ಬೈಡನ್ ಸರ್ಕಾರ ನೀತಿ ಜಾರಿಗೆ ತರಲು ಮುಂದಾಗಿದೆ. ಬೈಡನ್ ಸರ್ಕಾರ ಈ ನೀತಿಯ ಪ್ರಕಾರ, ವಲಸೆ ಸುಧಾರಣಾ ಕಾನೂನು ಜಾರಿಗೊಳಿಸುವು ದಕ್ಕೆ, ಅದಕ್ಕೆ ಸಂಬಂಧಿಸಿದ ಮಸೂದೆ ಸಿದ್ಧಪಡಿಸಿ ಅಂಗೀಕರಿಸುವುದಕ್ಕಾಗಿ ಬೈಡೆನ್ ಅವರು, ಕಾಂಗ್ರೆಸ್ ಜೊತೆಗೂಡಿ ಶೀಘ್ರವೇ ಕೆಲಸ ಮಾಡಲಿದ್ದಾರೆ ಎಂದು ಹೇಳಲಾಗಿದೆ. ಅಮೆರಿಕಕ್ಕೆ ವಲಸೆ ಬರುವ ಉದ್ಯೋಗಸ್ಥರ ಕುಟುಂಬಗಳೂ ಕೂಡ ಒಟ್ಟಿಗೆ ಇರಿಸುವ ಪ್ರಯತ್ನ ಇದಾಗಿದೆ. ಈ ಹಿಂದೆ ಬರಾಕ್ ಒಬಾಮ ಅಧ್ಯಕ್ಷರಾಗಿದ್ದಾಗ ಜಾರಿಯಲ್ಲಿದ್ದ ಅನೇಕ ನೀತಿಗಳನ್ನು ಒಬಾಮಾ ಸರ್ಕಾರ ರದ್ದುಗೊಳಿಸಿತ್ತು. ಈ ಪೈಕಿ ಉತ್ತಮವಾದ ಕೆಲ ನೀತಿಗಳನ್ನು ಮತ್ತೆ ಜಾರಿಗೊಳಿಸಲಾಗುವುದು ಎಂದು ಬೈಡೆನ್ ತಂಡ ಘೋಷಣೆ ಮಾಡಿದೆ.