ಮೈಸೂರು ಜಿಲ್ಲೆಯಲ್ಲಿ ಕೈಗಾರಿಕೆಗಳು ಪುನಾರಂಭ
ಮೈಸೂರು

ಮೈಸೂರು ಜಿಲ್ಲೆಯಲ್ಲಿ ಕೈಗಾರಿಕೆಗಳು ಪುನಾರಂಭ

May 7, 2020

ಮೈಸೂರು, ಮೇ 6(ಆರ್‍ಕೆ)- ಕೋವಿಡ್-19 ಲಾಕ್‍ಡೌನ್ ನಿರ್ಬಂಧದಿಂದಾಗಿ ಕಳೆದ 42 ದಿನ ಗಳಿಂದ ಬಂದ್ ಆಗಿದ್ದ ಕೈಗಾರಿಕೆಗಳು ಮಂಗಳ ವಾರದಿಂದ (ಮೇ 5) ಪುನಾರಂಭಗೊಂಡಿವೆ.

ಸಣ್ಣ, ಮಧ್ಯಮ ಹಾಗೂ ಭಾರೀ ಕೈಗಾರಿಕೆಗಳೂ ಸೇರಿದಂತೆ ಮೈಸೂರು ಜಿಲ್ಲೆಯಲ್ಲಿ ಒಟ್ಟು ಸುಮಾರು 26,000 ಕೈಗಾರಿಕೆಗಳು ಮಂಗಳವಾರ ಕಾರ್ಯಾ ರಂಭವಾಗಿದ್ದು, ಮೊದಲ ಎರಡು ದಿನ ಸ್ವಚ್ಛತೆ, ನಿರ್ವಹಣೆ ನಂತರ ಉತ್ಪಾದನೆ ಆರಂಭವಾಗಲಿದೆ ಎಂದು ಮೈಸೂರು ಕೈಗಾರಿಕೆಗಳ ಸಂಘದ ಕಾರ್ಯದರ್ಶಿ ಸುರೇಶ್ ಜೈನ್ ತಿಳಿಸಿದ್ದಾರೆ.

ಮೈಸೂರಿನ ಯಾದವಗಿರಿ, ಮೇಟಗಳ್ಳಿ, ಹೆಬ್ಬಾಳು, ಹೂಟಗಳ್ಳಿ, ಕೂರ್ಗಳ್ಳಿ, ವಿಶ್ವೇಶ್ವರಯ್ಯನಗರ ಕೈಗಾರಿಕಾ ಪ್ರದೇಶ, ನಂಜನಗೂಡು ತಾಲೂಕಿನ ತಾಂಡ್ಯ ಕೈಗಾ ರಿಕಾ ವಲಯವೂ ಸೇರಿದಂತೆ ಜಿಲ್ಲೆಯಾದ್ಯಂತ ಎಲ್ಲಾ ಸೂಕ್ಷ್ಮ, ಸಣ್ಣ, ಮಧ್ಯಮ ಹಾಗೂ ಬೃಹತ್ ಕೈಗಾರಿಕಾ ಘಟಕಗಳು ಕಾರ್ಯಾರಂಭಗೊಂಡಿರುವುದರಿಂದ ಮಾಲೀಕರು, ಕಾರ್ಮಿಕರು ಹಾಗೂ ಗ್ರಾಹಕರು ನೆಮ್ಮ ದಿಯ ನಿಟ್ಟುಸಿರು ಬಿಟ್ಟಿದ್ದಾರೆ ಎಂದು ತಿಳಿಸಿದರು.

ಕೈಗಾರಿಕಾ ಘಟಕಗಳಿಗೆ ಆಗಿಂದಾಗ್ಗೆ ಸೋಂಕು ನಿರೋಧಕ ರಸಾಯನಿಕ ಸಿಂಪಡಿಸುವುದರೊಂದಿಗೆ ಫಾಗಿಂಗ್ ಮಾಡಲಾಗುವುದು. ಇಲ್ಲಿಗೆ ಬರುವ ಹಾಗೂ ಹೋಗುವ ಸರಕು ಸಾಗಣೆ ವಾಹನಗಳಿಗೂ ರಸಾ ಯನಿಕ ಸಿಂಪಡಿಸಿ ಎಲ್ಲಾ ಅಗತ್ಯ ಮುಂಜಾಗ್ರತಾ ಕ್ರಮ ಗಳನ್ನು ಕೈಗೊಳ್ಳಲು ವ್ಯವಸ್ಥೆ ಮಾಡಲಾಗಿದೆ ಎಂದರು.

ಲಾಕ್‍ಡೌನ್ ನಿರ್ಬಂಧವಿದ್ದ ಕಾರಣ, ಕೈಗಾರಿಕೆ ಗಳು ವಿದ್ಯುತ್ ಶುಲ್ಕದೊಂದಿಗೆ 1 ಹೆಚ್‍ಪಿ ಸಾಮ ಥ್ರ್ಯಕ್ಕೆ ಪಾವತಿಸಬೇಕಿದ್ದ 80ರಿಂದ 100 ರೂ. ಶುಲ್ಕವನ್ನು ಎರಡು ತಿಂಗಳಿಗೆ ಅನ್ವಯವಾಗಿ ಸರ್ಕಾರ ಮನ್ನಾ ಮಾಡಿರುವುದರಿಂದ ಸಂಕಷ್ಟದಲ್ಲಿ ರುವ ಕೈಗಾರಿಕೋದ್ಯಮಿಗಳಿಗೆ ಕೊಂಚ ಭಾರ ಕಡಿಮೆ ಯಾದಂತಾಗಿದೆ. ಕಾರ್ಮಿಕರು ತಮ್ಮೊಂದಿಗೆ ಕೈಗಾ ರಿಕೆಗಳು ನೀಡಿರುವ ಗುರುತಿನ ಚೀಟಿಯೊಂದಿಗೆ ಕರ್ತವ್ಯಕ್ಕೆ ಹಾಜರಾಗ ಬೇಕು ಎಂದೂ ಸುರೇಶ್ ಕುಮಾರ್ ಜೈನ್ ತಿಳಿಸಿದ್ದಾರೆ.

Translate »