ಇಂದಿನಿಂದ ರಾಜ್ಯದ ಹಸಿರುವಲಯಗಳಲ್ಲಿ ಡಿಎಲ್ ಟೆಸ್ಟ್ ಆರಂಭ
ಮೈಸೂರು

ಇಂದಿನಿಂದ ರಾಜ್ಯದ ಹಸಿರುವಲಯಗಳಲ್ಲಿ ಡಿಎಲ್ ಟೆಸ್ಟ್ ಆರಂಭ

May 7, 2020

ಬೆಂಗಳೂರು : ಡಿಎಲ್/ಎಲ್‍ಎಲ್ ಪರೀಕ್ಷೆಗಾಗಿ ಕಾದು ಕುಳಿತಿರುವವರಿಗೆ ಇದೊಂದು ಸಿಹಿ ಸುದ್ದಿ. ನಾಳೆಯಿಂದ ಹಸಿರು ವಲಯದಲ್ಲಿ ಡಿಎಲ್, ಎಲ್‍ಎಲ್ ಪರೀಕ್ಷೆಗಳು ಆರಂಭವಾಗಲಿದೆ. ಡಿಎಲ್, ಎಲ್‍ಎಲ್ ಲೈಸೆನ್ಸ್‍ಗೆ ಈಗಾಗಲೇ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳಿಗೆ ಆದ್ಯತೆ ಮೇರೆಗೆ ಈ ಪರೀಕ್ಷೆ ನಡೆಯಲಿದೆ.

ಪ್ರತಿದಿನ ಶೇ.50ರಷ್ಟು ಅಭ್ಯರ್ಥಿ ಗಳಿಗೆ ಮಾತ್ರ ಪರೀಕ್ಷೆ ನಡೆಯಲಿದೆ. ಪರೀಕ್ಷೆಗೆ ಹಾಜರಾಗುವ ದಿನಾಂಕ ವನ್ನು ಆರ್‍ಟಿಒ, ಅಭ್ಯರ್ಥಿಗಳ ಮೊಬೈಲ್ ಸಂಖ್ಯೆಗೆ ಸಂದೇಶ ಕಳುಹಿಸಿದೆ. ಅಂದ ಹಾಗೆ ರಾಜ್ಯದಲ್ಲಿ 14 ಜಿಲ್ಲೆಗಳು ಗ್ರೀನ್ ಝೋನ್‍ಗಳಲ್ಲಿವೆ. ಇಂತಹ ಜಿಲ್ಲೆಗಳಲ್ಲಿ ಮಾತ್ರ ಈ ಪರೀಕ್ಷೆ ನಡೆಯಲಿದ್ದು, ಉಳಿದ ಕಿತ್ತಳೆ ಮತ್ತು ಕೆಂಪು ವಲಯ ದಲ್ಲಿ ಲೈಸೆನ್ಸ್ ಹೊರತುಪಡಿಸಿ ವಾಹನ್-4 ತಂತ್ರಾಶದ ಅಡಿಯಲ್ಲಿ ವಾಹನಗಳ ನೋಂದಣಿ, ವಾಹನದ ವರ್ಗಾವಣೆ ಅರ್ಹತಾ ಪತ್ರ ನವೀಕರಣ ಇತ್ಯಾದಿ ಸೇವೆಗಳು ಲಭ್ಯವಾಗಲಿದೆ ಎಂದು ಸಾರಿಗೆ ಇಲಾಖೆ ಆದೇಶದಲ್ಲಿ ತಿಳಿಸಿದೆ. ಇನ್ನೂ ಡಿಎಲ್, ಎಲ್‍ಎಲ್ ಪರೀಕ್ಷೆಗೆ ಹಾಜರಾಗುವವರು ಕಡ್ಡಾಯ ವಾಗಿ ಮಾಸ್ಕ್ ಧರಿಸಬೇಕು, ಕಚೇರಿಗೆ ಹಾಜರಾಗುವ ಸಂದರ್ಭದಲ್ಲಿ ಕೋವಿಡ್ 19 ಮಾರ್ಗಸೂಚಿಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಸ್ಯಾನಿಟೈಸರ್ ಬಳಕೆ, ಥರ್ಮಲ್ ಸ್ಕ್ರೀನಿಂಗ್ ಒಳಪಡಬೇಕಾಗುತ್ತದೆ ಎಂಬುದಾಗಿ ಕಟ್ಟುನಿಟ್ಟಾಗಿ ಸೂಚಿಸಿದ್ದಾರೆ.

Translate »