ಮದ್ಯ ಪ್ರಿಯರಿಗೆ ಶೇ.17ರಷ್ಟು ಅಧಿಕ ದರ
ಮೈಸೂರು

ಮದ್ಯ ಪ್ರಿಯರಿಗೆ ಶೇ.17ರಷ್ಟು ಅಧಿಕ ದರ

May 7, 2020

ಬೆಂಗಳೂರು, ಮೇ 6(ಕೆಎಂಶಿ)- ಮದ್ಯ ಪ್ರಿಯರು 1000 ರೂ. ಬಾಟಲಿಗೆ ಹೆಚ್ಚುವರಿಯಾಗಿ 170 ರೂ. ನೀಡಬೇ ಕಾಗಿದೆ. ಲಾಕ್‍ಡೌನ್‍ನಿಂದ 45 ದಿನ ಗಳಿಂದ ಕಾಲ ಮದ್ಯ ವಿಲ್ಲದೆ ಪರದಾಡಿದ ಮದ್ಯಪಾನಿಗಳಿಗೆ ರಾಜ್ಯ ಸರ್ಕಾರ ಹೆಚ್ಚು ವರಿ ದರ ವಿಧಿಸಿದೆ.

ಕಳೆದ ಮುಂಗಡ ಪತ್ರದಲ್ಲಿ ಶೇ.6ರಷ್ಟು ಹೆಚ್ಚುವರಿ ಅಬಕಾರಿ ಶುಲ್ಕವನ್ನು ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ವಿಧಿಸಿ ದ್ದರು. ಇದೀಗ ಕೊರೊನಾ ಹಿನ್ನೆಲೆಯಲ್ಲಿ ಮತ್ತೆ ಶೇ.11ರಷ್ಟು ಅಬಕಾರಿ ಶುಲ್ಕ ವಿಧಿ ಸಿದ್ದಾರೆ. ಒಂದೆರಡು ದಿನದಲ್ಲೇ ಶೇ.17 ರಷ್ಟು ಹೆಚ್ಚುವರಿ ಶುಲ್ಕದ ಆದೇಶ ಹೊರಬೀಳಲಿದೆ. ಅದಾದ ನಂತರವೇ ಮದ್ಯಪ್ರಿಯರಿಗೆ ಹೊಸ ದರದಲ್ಲಿ ಮದ್ಯ ದೊರೆಯಲಿದೆ. ವೈನ್ ಶಾಪ್‍ಗಳಲ್ಲಿ ಇದ್ದ ಹಳೆಯ ದರದ ಮದ್ಯ ಈಗಾ ಗಲೇ ಮಾರಾಟವಾಗಿ ಹೋಗಿದೆ. ಇನ್ನು ಮುಂದೆ ಹೊಸ ದರದಲ್ಲಿ ಗ್ರಾಹಕರು ಮದ್ಯ ಖರೀದಿಸಬೇಕು. ದೆಹಲಿ ಸರ್ಕಾರ ಕೊರೊನಾ ಹಿನ್ನೆಲೆ ತಾತ್ಕಾಲಿಕವಾಗಿ ಶೇ.70ರಷ್ಟು ಸೆಸ್ ವಿಧಿಸಿದ್ದರೆ, ನಮ್ಮ ಮುಖ್ಯಮಂತ್ರಿಯವರು ಶೇ.17ರಷ್ಟು ಅಬ ಕಾರಿ ಶುಲ್ಕವನ್ನು ಹಾಕಿದ್ದಾರೆ. ಇದ ರಿಂದ ರಾಜ್ಯ ಬೊಕ್ಕಸಕ್ಕೆ ಹೆಚ್ಚುವರಿ ಯಾಗಿ 3ರಿಂದ 5 ಸಾವಿರ ಕೋಟಿ ರೂ. ಗಳು ಬರಲಿದೆ ಎಂಬ ವಿಶ್ವಾಸವಿದೆ.

Translate »