ಬುಧವಾರ ಮೈಸೂರಲ್ಲಿ ಒಬ್ಬರು ಡಿಸ್ಚಾರ್ಜ್: ಸಕ್ರಿಯ ಪ್ರಕರಣ ಕೇವಲ 7
ಮೈಸೂರು

ಬುಧವಾರ ಮೈಸೂರಲ್ಲಿ ಒಬ್ಬರು ಡಿಸ್ಚಾರ್ಜ್: ಸಕ್ರಿಯ ಪ್ರಕರಣ ಕೇವಲ 7

May 7, 2020

ಮೈಸೂರು,ಮೇ 6(ಎಂಟಿವೈ)- ಕೊರೊನಾ ಸೋಂಕಿತರಲ್ಲಿ ರಾಜ್ಯದಲ್ಲಿ 2ನೇ ಸ್ಥಾನದಲ್ಲಿದ್ದ ಮೈಸೂರು ಜಿಲ್ಲೆ ಈಗ ನಿಧಾನವಾಗಿ ಕೊರೊನಾ ಮುಕ್ತ ವಾಗುತ್ತಾ ಸಾಗಿದೆ. ಸತತ 6ನೇ ದಿನವೂ ಹೊಸ ಪ್ರಕರಣ ಪತ್ತೆಯಾಗಿಲ್ಲ. ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸೋಂಕಿತರಲ್ಲಿ ಇಂದು ಮತ್ತೊಬ್ಬರು ಗುಣಮುಖರಾಗಿ ಮನೆಗೆ ತೆರಳಿದರು. ಜಿಲ್ಲೆಯಲ್ಲಿ ಈವರೆಗೆ ಗುಣಮುಖರಾ ದವರ ಸಂಖ್ಯೆ 83ಕ್ಕೆ ಏರಿದೆ. 90ರ ಗಡಿ ಮುಟ್ಟಿದ್ದ ಸೋಂಕಿತರ ಸಂಖ್ಯೆ ಈಗ 7ಕ್ಕೆ ಇಳಿದಿದೆ. ಇಂದು ಸೋಂಕಿತ ವ್ಯಕ್ತಿ ಪಿ-268 ಆಸ್ಪತ್ರೆಯಿಂದ ಮನೆಗೆ ಮರಳಿದರು. ಕೋವಿಡ್ ಆಸ್ಪತ್ರೆಯಲ್ಲಿ ರುವ 7 ಮಂದಿಯ ಆರೋಗ್ಯವೂ ಸುಧಾ ರಿಸಿದ್ದು, ಇನ್ನೆರಡು ದಿನದಲ್ಲಿ ಆಸ್ಪತ್ರೆ ಯಿಂದ ಬಿಡುಗಡೆಯಾಗುವ ಸಂಭವ ವಿದೆ. ರೆಡ್‍ಜೋನ್‍ನಿಂದ ಮುಕ್ತಿ ಪಡೆ ಯುವತ್ತ ಮೈಸೂರು ಜಿಲ್ಲೆ ದಾಪುಗಾ ಲಿರಿಸುತ್ತಿದೆ. ಇದುವರೆಗೆ 4762 ಮಂದಿ ಮೇಲೆ ನಿಗಾ ವಹಿಸಲಾಗಿತ್ತು. 4754 ಮಂದಿ 14 ದಿನಗಳ ಕ್ವಾರಂಟೈನ್ ಮುಗಿಸಿದ್ದಾರೆ. 4767 ಮಂದಿಯ ಸ್ವ್ಯಾಬ್ ಪರೀಕ್ಷೆ ಯಲ್ಲಿ 4677 ಸ್ಯಾಂಪಲ್ ನೆಗೆಟಿವ್, 90 ಮಂದಿಯದು ಪಾಸಿಟಿವ್ ಬಂದಿತ್ತು.

Translate »