ಇನ್ಫೋಸಿಸ್ ಪ್ರತಿಷ್ಠಾನ, ಭಾರತೀಯ ವಿದ್ಯಾಭವನ ಸಂಯುಕ್ತಾಶ್ರಯದಲ್ಲಿ ‘ಭಾರತೀಯ ಹಬ್ಬಗಳು’ ಶೀರ್ಷಿಕೆಯಡಿ ‘ಸಾಂಸ್ಕøತಿಕ ಉತ್ಸವ’ಕ್ಕೆ ಚಾಲನೆ
ಮೈಸೂರು

ಇನ್ಫೋಸಿಸ್ ಪ್ರತಿಷ್ಠಾನ, ಭಾರತೀಯ ವಿದ್ಯಾಭವನ ಸಂಯುಕ್ತಾಶ್ರಯದಲ್ಲಿ ‘ಭಾರತೀಯ ಹಬ್ಬಗಳು’ ಶೀರ್ಷಿಕೆಯಡಿ ‘ಸಾಂಸ್ಕøತಿಕ ಉತ್ಸವ’ಕ್ಕೆ ಚಾಲನೆ

November 5, 2022

ಮೈಸೂರು, ನ.4(ಎಂಕೆ)- ಮೈಸೂರಿನ ಕಲಾಮಂದಿರದಲ್ಲಿ ಇನ್ಫೋಸಿಸ್ ಪ್ರತಿಷ್ಠಾನ ಬೆಂಗಳೂರು ಹಾಗೂ ಭಾರತೀಯ ವಿದ್ಯಾಭವನ (ಬಿವಿಬಿ) ಬೆಂಗಳೂರು-ಮೈಸೂರು ಕೇಂದ್ರಗಳ ಸಂಯುಕ್ತಾಶ್ರಯದಲ್ಲಿ `ಭಾರತೀಯ ಹಬ್ಬಗಳು’ ಶೀರ್ಷಿಕೆಯಡಿ ಆಯೋಜಿಸಿರುವ `ಏಳು ದಿನಗಳ ಸಾಂಸ್ಕøತಿಕ ಉತ್ಸವ’ಕ್ಕೆ ಶುಕ್ರವಾರ ವಿಧ್ಯುಕ್ತ ಚಾಲನೆ ದೊರೆಯಿತು.

ಸುಂದರ ವೇದಿಕೆಯಲ್ಲಿ ದೀಪ ಬೆಳಗಿಸುವ ಮೂಲಕ ಇನ್ಫೋಸಿಸ್ ಮೈಸೂರು ಕಾರ್ಯಕಾರಿ ಉಪಾಧ್ಯಕ್ಷ ಮತ್ತು ಮುಖ್ಯಸ್ಥ ಶಾಜಿ ಮ್ಯಾಥ್ಯೂ, ಸಾಂಸ್ಕøತಿಕ ಉತ್ಸವಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಒಂದು ರಾಷ್ಟ್ರದ ಸಂಸ್ಕøತಿ ಆ ದೇಶದ ಜನರ ಮನಸ್ಸು ಮತ್ತು ಹೃದಯದಲ್ಲಿರುತ್ತದೆ ಎಂದು ಮಹಾತ್ಮ ಗಾಂಧೀಜಿಯವರು ಹೇಳಿದ್ದಾರೆ. ಭಾರತ ವಿಶ್ವದಲ್ಲಿಯೇ ಅತ್ಯಂತ ಶ್ರೀಮಂತ ಕಲೆ-ಸಾಹಿತ್ಯ, ಸಂಸ್ಕøತಿಯನ್ನು ಒಳಗೊಂಡ ದೇಶವಾಗಿದೆ. ಈ ದೇಶದಲ್ಲಿನ ಸಂಸ್ಕøತಿ ಸೃಷ್ಟಿಸುತ್ತಿರುವ ಮಾನವೀಯ ಮೌಲ್ಯಗಳನ್ನು ಬೇರೆ ಯಾವ ದೇಶಗ ಳಲ್ಲಿಯೂ ಕಾಣಲು ಸಾಧ್ಯವಿಲ್ಲ ಎಂದು ಅಭಿವ್ಯಕ್ತಪಡಿಸಿದರು.
ದೇಶದ ವಿವಿಧ ರಾಜ್ಯಗಳಲ್ಲಿರುವ ಕಲೆ-ಸಾಹಿತ್ಯ, ಸಂಸ್ಕøತಿ ನಮ್ಮನ್ನು ಬೇರೆ ದೇಶದವರಿಗಿಂತ ವಿಶೇಷರ ನ್ನಾಗಿಸಿದ್ದು, ಅವುಗಳನ್ನು ನಮ್ಮ ಮುಂದಿನ ಪೀಳಿಗೆ ಯವರಿಗೆ ಉಳಿಸಿ-ಬೆಳೆಸುವುದು ಅತ್ಯಂತ ಅಗತ್ಯವಾ ಗಿದೆ. ಆದ್ದರಿಂದ ಇನ್ಫೋಸಿಸ್ ಪ್ರತಿಷ್ಠಾನ ಹಾಗೂ ಭಾರತೀಯ ವಿದ್ಯಾಭವನ ಒಟ್ಟಾಗಿ ಸಾಂಸ್ಕøತಿಕ ಉತ್ಸವ ಆಯೋಜಿಸುವ ಮೂಲಕ ಕಲೆಗಳನ್ನು ಉಳಿಸುವ ಹಾಗೂ ಆರ್ಥಿಕವಾಗಿ ಹಿಂದುಳಿದ ಕಲಾವಿದರಿಗೆ ವೇದಿಕೆ ಕಲ್ಪಿಸುವುದರ ಮೂಲಕ ಅವರನ್ನು ಪ್ರೋತ್ಸಾಹಿಸುವ ಕೆಲಸ ಮಾಡು ತ್ತಿದೆ ಎಂದು ತಿಳಿಸಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮೈಸೂರು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಮಾತನಾಡಿ, ಸಾಮಾನ್ಯವಾಗಿ ಕಲಾಮಂದಿರಕ್ಕೆ ತಿಂಗಳಿಗೆ ಎರಡ್ಮೂರು ಬಾರಿ ಬರುತ್ತೇನೆ. ಪ್ರತೀ ಕಾರ್ಯಕ್ರಮದಲ್ಲಿಯೂ ಹೆಚ್ಚಿನ ಪ್ರಮಾಣದಲ್ಲಿ ಹಿರಿಯರು ಭಾಗವ ಹಿಸುವುದನ್ನು ಕಾಣುತ್ತಿದ್ದೆ. ಆದರೆ ಇಂದು ಬಹುತೇಕ ಯುವಕ-ಯುವತಿ ಯರು, ಮಕ್ಕಳು ಭಾಗವಹಿಸಿರುವುದು ತುಂಬಾ
ಖುಷಿ ತಂದಿದೆ. ಅಲ್ಲದೆ ಇಂತಹ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಭಾಗವಹಿಸುವುದು ಅತ್ಯಂತ ಅವಶ್ಯವೂ ಆಗಿದೆ ಎಂದರು.

ಮೈಸೂರಿನಲ್ಲಿ ದಸರಾ, ದೀಪಾವಳಿ ಹಬ್ಬ ಮುಗಿದಿದ್ದರೂ ಹಬ್ಬದ ವಾತಾವರಣ ವರ್ಷದ ಕಡೆಯವರೆಗೂ ಇರುವಂತೆ ಸಾಂಸ್ಕøತಿಕ ಉತ್ಸವ ಆಯೋಜಿಸಿರುವುದು ಶ್ಲಾಘನೀಯ. ಇದಕ್ಕಾಗಿ ಭಾರತೀಯ ವಿದ್ಯಾಭವನಕ್ಕೆ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಇನ್ಫೋಸಿಸ್ ಪ್ರತಿಷ್ಠಾನ ಕರ್ನಾಟಕದ ಹೆಮ್ಮೆಯ ಸಂಸ್ಥೆಯಾಗಿದ್ದು, ಪಾರಂಪರಿಕತೆಯನ್ನು ಉಳಿಸಿ-ಬೆಳೆಸುವಲ್ಲಿ ಪ್ರಮುಖ ಕೊಡುಗೆ ನೀಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಉಳಿಸುವ ಕಾಲ: ಮೈಸೂರನ್ನು ಸಾಂಸ್ಕøತಿಕ, ಪಾರಂಪರಿಕ ನಗರಿ ಎಂದು ಕರೆಯಲಾಗುತ್ತದೆ. ಮೊನ್ನೆಯಷ್ಟೇ ಮಹಾರಾಣಿ ಕಾಲೇಜು ಪಾರಂಪರಿಕ ಕಟ್ಟಡ ಕುಸಿದು ಬಿದ್ದಿದ್ದನ್ನು ಮಾಧ್ಯಮಗಳಲ್ಲಿ ನೋಡಿದ್ದೇವೆ. ಇದೇ ರೀತಿಯಾದರೆ ಮತ್ತಷ್ಟು ಪಾರಂಪರಿಕ ಕಟ್ಟಡಗಳನ್ನು ಕಳೆದುಕೊಳ್ಳಬೇಕಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರು ಪಾರಂಪರಿಕ ಕಟ್ಟಡಗಳನ್ನು ಉಳಿಸಲು ಸಹಕಾರ ನೀಡಬೇಕು. ಪಾರಂಪರಿಕ ಕಟ್ಟಡಗಳನ್ನು ಉಳಿಸುವ ಕಾಲ ಇದಾಗಿದೆ ಎಂದು ಅವುಗಳ ಮಹತ್ವವನ್ನು ಮನವರಿಕೆ ಮಾಡಿಕೊಟ್ಟರು.

ವಿಶ್ವವೇ ಒಂದು ಕುಟುಂಬ: ಬಿವಿಬಿ ಬೆಂಗಳೂರು ಕೇಂದ್ರದ ಅಧ್ಯಕ್ಷ ಕೆ.ಜಿ.ರಾಘವನ್ ಮಾತನಾಡಿ, ದೇಶದ ಎರಡು ಪ್ರಮುಖ ಸಂಸ್ಥೆಗಳು ಸೇರಿ ಆಯೋಜಿಸಿರುವ ಈ ಸಾಂಸ್ಕøತಿಕ ಉತ್ಸವ ಅದ್ದೂರಿ ಮಾತ್ರವಲ್ಲ, ಕಲೆ-ಸಾಹಿತ್ಯ, ಸಂಸ್ಕøತಿ ಮೂಲಕ ಎಲ್ಲರನ್ನೂ ಒಂದುಗೂಡಿಸುವ ಕಾರ್ಯಕ್ರಮವಾಗಿದೆ. ಬಿವಿಬಿ ಕಳೆದ 84 ವರ್ಷಗಳಿಂದ ಭಾರತೀಯ ಸಂಸ್ಕøತಿ, ಕಲೆ ಹಾಗೂ ಸಾಹಿತ್ಯವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ. ಭಾರತದ ಸಂವಿಧಾನ ರಚನೆಯಲ್ಲಿ ಮುಖ್ಯ ಪಾತ್ರವಹಿಸಿದ ಡಾ.ಕೆ.ಎಂ.ಮುನ್ಷಿ ಅವರು ಸ್ಥಾಪಿಸಿದ ಭಾರತೀಯ ವಿದ್ಯಾಭವನ, ಭಾರತೀಯ ಸಂಸ್ಕøತಿ ಮತ್ತು ಸಂಪ್ರದಾಯ ಉತ್ತೇಜಿಸುವ ಮುಖ್ಯ ಧ್ಯೇಯವನ್ನು ಹೊಂದಿದೆ ಎಂದರಲ್ಲದೆ ಭಾರತೀಯ ವಿದ್ಯಾಭವನ ವಿಶ್ವವೇ ಒಂದು ಕುಟುಂಬ ಎಂಬುದನ್ನು ನಂಬಿದೆ ಎಂದರು.

ಪೂರ್ಣಕುಂಭ ಸ್ವಾಗತ: ಕಲಾಮಂದಿರ ವೇದಿಕೆಯಲ್ಲಿ ಆಯೋಜಿಸಿದ್ದ ಸಾಂಸ್ಕøತಿಕ ಉತ್ಸವದ ಉದ್ಘಾಟನೆಗೂ ಮುನ್ನ ಕಾರ್ಯಕ್ರಮಕ್ಕೆ ಆಗಮಿಸಿದ ಗಣ್ಯರಿಗೆ ಪೂರ್ಣಕುಂಭ ಸ್ವಾಗತ ನೀಡಲಾಯಿತು. ಧಾರ್ಮಿಕ ಮುಖಂಡರಾದ ಡಾ.ವಿ.ಭಾನುಪ್ರಕಾಶ್ ಶರ್ಮಾ ಅವರ ನೇತೃತ್ವದಲ್ಲಿ ವೇದಘೋಷಗಳೊಂದಿಗೆ ಗಣ್ಯರನ್ನು ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು. ಬಿವಿಬಿ ಮೈಸೂರು ಕೇಂದ್ರದ ಗೌರವ ಕಾರ್ಯದರ್ಶಿ ಪಿ.ಎಸ್.ಗಣಪತಿ ಉಪಸ್ಥಿತರಿದ್ದರು.

Translate »