ಜಾಗತಿಕ ಹೂಡಿಕೆದಾರರ ಸಮಾವೇಶ ಯಶಸ್ವಿ ಸಂಪನ್ನ 10 ಲಕ್ಷ ಕೋಟಿ ಬಂಡವಾಳ ನಿರೀಕ್ಷೆ
News

ಜಾಗತಿಕ ಹೂಡಿಕೆದಾರರ ಸಮಾವೇಶ ಯಶಸ್ವಿ ಸಂಪನ್ನ 10 ಲಕ್ಷ ಕೋಟಿ ಬಂಡವಾಳ ನಿರೀಕ್ಷೆ

November 5, 2022

ಬೆಂಗಳೂರು, ನ.4(ಕೆಎಂಶಿ)-ಜಾಗತಿಕ ಹೂಡಿಕೆದಾರರ ಸಮಾವೇಶ ನಿರೀಕ್ಷೆಗೂ ಮೀರಿ ಯಶಸ್ವಿಯಾಗಿದ್ದು, ವಿಶ್ವದಲ್ಲೇ ಮುಂಚೂ ಣಿಯಲ್ಲಿರುವ ಉದ್ಯಮಿಗಳು ಹತ್ತು ಲಕ್ಷ ಕೋಟಿ ರೂ.ಗೂ ಅಧಿಕ ಬಂಡವಾಳ ಹೂಡಿಕೆ ಮಾಡಲು ಮುಂದೆ ಬಂದಿದ್ದಾರೆ.

ಕರ್ನಾಟಕದ ಕೈಗಾರಿಕಾ ಸ್ನೇಹಿಗೆ ಮನಸೋತ ಅದಾನಿ, ಅಂಬಾನಿ, ಬಜಾಜ್, ಮಿತ್ತಲ್, ಜಿಂದಾಲ್ ಸೇರಿದಂತೆ ವಿಶ್ವಮಟ್ಟದ ಅಗ್ರಗಣ್ಯ ಉದ್ಯಮಿಗಳು ಲಕ್ಷಾಂತರ ಕೋಟಿ ರೂ. ಬಂಡವಾಳ ಹೂಡಿಕೆಗೆ ಸರ್ಕಾರದೊಂದಿಗೆ ಒಪ್ಪಂದ ಮಾಡಿಕೊಂಡಿವೆ. ಸಮಾವೇಶದ ಆರಂಭಕ್ಕೂ ಮುನ್ನ ಐದು ಲಕ್ಷ ಕೋಟಿ ಬಂಡ ವಾಳ ಹಾಗೂ ಐದು ಲಕ್ಷ ಉದ್ಯೋಗ ಗುರಿ ಇಟ್ಟುಕೊಂಡಿದ್ದ ರಾಜ್ಯ ಸರ್ಕಾರಕ್ಕೆ ನಿರೀಕ್ಷೆಗೂ ಮೀರಿ ಬಂಡವಾಳ ಹಾಗೂ ಉದ್ಯೋಗ ದ್ವಿಗುಣಗೊಂಡಿದೆ. ಮೂರು ದಿನಗಳ ಸಮಾ ವೇಶದ ನಂತರ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್
ನಿರಾಣಿ ರಾಜ್ಯದಲ್ಲಿ ಬಂಡವಾಳ ಹೂಡಿಕೆಗಾಗಿ ರಾಷ್ಟ್ರ ಮತ್ತು ವಿಶ್ವದ ವಿವಿಧ ಭಾಗಗಳಲ್ಲಿ ರೋಡ್ ಶೋ ನಡೆಸಿದಾಗ ನಮಗೆ ಐದು ಲಕ್ಷ ಕೋಟಿ ಬಂಡವಾಳ ಹರಿದುಬರುವ ನಿರೀಕ್ಷೆ ಇತ್ತು. ಸಮಾವೇಶಕ್ಕೆ ಬಂದ ಉದ್ದಿಮೆದಾರರು ರಾಜ್ಯ ಸರ್ಕಾರದ ಕೈಗಾರಿಕಾ ಸ್ನೇಹಿ ಯನ್ನು ನೋಡಿ ನಮ್ಮ ನಿರೀಕ್ಷೆಗೂ ಮೀರಿ ಬಂಡವಾಳ ಹೂಡಿಕೆಗೆ ಮುಂದಾಗಿದ್ದಾರೆ. ಹೂಡಿಕೆದಾರರ ನಿರೀಕ್ಷೆಗಳನ್ನು ರಾಜ್ಯ ಸರ್ಕಾರ ಹುಸಿ ಮಾಡುವುದಿಲ್ಲ. ಇದೇ ಕಾರಣಕ್ಕಾಗಿ ನಿನ್ನೆ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಒಂದೇ ಸೂರಿನಡಿ ಉದ್ದಿಮೆದಾರರಿಗೆ ಅನುಮತಿ ನೀಡುವ ಬಂಡವಾಳ ಸ್ನೇಹಿ ಪ್ರಾಧಿಕಾರ ರಚನೆಗೆ ತೀರ್ಮಾನ ಕೈಗೊಳ್ಳಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸರ್ಕಾರ ನೀಡಿದ ಬೆಂಬಲ ನಮ್ಮ ನಿರೀಕ್ಷೆಯನ್ನು ಮೀರಿ ರಾಜ್ಯದ ನಿರುದ್ಯೋಗಿಗಳಿಗೆ ಉದ್ಯೋಗ ಸೃಷ್ಟಿಸುವ ಅವಕಾಶ ಲಭ್ಯವಾಗಿದೆ. ಇದನ್ನು ನಾವು ಸಮರ್ಥವಾಗಿ ಬಳಸಿ ಕೊಳ್ಳುತ್ತೇವೆ. ನಾಳೆಯಿಂದಲೇ ಈ ಉದ್ದಿಮೆ ದಾರರಿಗೆ ಕೈಗಾರಿಕೆ ಸ್ಥಾಪಿಸಲು ಅಗತ್ಯ ಮೂಲ ಸೌಕರ್ಯ ಕಲ್ಪಿಸಲು ಕ್ರಮ ಕೈಗೊಳ್ಳುತ್ತೇವೆ. ಹಸಿರು ಇಂಧನ ವಲಯದಲ್ಲಿ ಎರಡರಿಂದ ಮೂರು ಲಕ್ಷ ಕೋಟಿ ರೂ. ಬಂಡವಾಳ ಹೂಡಿಕೆಗೆ ಉದ್ದಿಮೆದಾರರು ಮುಂದಾಗಿದ್ದಾರೆ. ಈ ವಲಯ ದಲ್ಲಿ ರಾಜ್ಯ ಸರ್ಕಾರ ನೀಡುತ್ತಿರುವ ಪೆÇ್ರೀತ್ಸಾಹ ಮತ್ತು ಸಬ್ಸಿಡಿಯ ನಿಯಮಾವಳಿಗಳಿಗೆ ಮನಸೋತ ಉದ್ದಿಮೆ ದಾರರು ದೊಡ್ಡ ಪ್ರಮಾಣದಲ್ಲಿ ಬಂಡವಾಳ ಹೂಡಲು ಮುಂದಾ ಗಿದ್ದಾರೆ ಎಂದರು. ಬಂಡವಾಳ ಹೂಡಲು ಮುಂದಾಗಿರುವ ಕೈಗಾರಿಕೋದ್ಯಮಿಗಳು ಬೆಂಗಳೂರು, ಮೈಸೂರು, ತುಮಕೂರು ಹಾಗೂ ಮಂಗಳೂರನ್ನೇ ಕೇಂದ್ರವಾಗಿಟ್ಟು ಕೊಂಡಿದ್ದಾರೆ. ಆದರೆ ರಾಜ್ಯದ ಎಲ್ಲೆಡೆ ಉದ್ಯಮಗಳು ತಲೆ ಎತ್ತಬೇಕು. ಸ್ಥಳೀಯವಾಗಿ ಉಂಟಾಗಿರುವ ನಿರುದ್ಯೋಗ ಸಮಸ್ಯೆ ಬಗೆಹರಿಸಬೇಕೆಂಬ ಉದ್ದೇಶದಿಂದ ರಾಜ್ಯದ ವಿವಿಧ ಭಾಗಗಳಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಲು ಸರ್ಕಾರ ಉತ್ತೇಜನ ನೀಡುತ್ತಿದೆ.

ಕರ್ನಾಟಕದಲ್ಲಿ ಇದುವರೆಗೂ ನಡೆದಿರುವ ಹೂಡಿಕೆದಾರರ ಸಮಾವೇಶಕ್ಕೂ ಈ ಮೂರು ದಿನಗಳಲ್ಲಿ ನಡೆದಿರುವ ಸಮಾವೇಶಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಬೃಹತ್ ಉದ್ಯಮಿದಾರರು ದೊಡ್ಡ ಪ್ರಮಾಣದಲ್ಲಿ ಆಸಕ್ತಿ ತೋರಿರುವುದರಿಂದ ನಮ್ಮ ನಿರೀಕ್ಷೆಗೂ ಮೀರಿ ಸಮಾವೇಶ ಯಶಸ್ವಿ ಕಂಡಿದೆ ಎಂದರು. ರಾಜ್ಯದಲ್ಲಿ ಅಂದಾಜು ಹತ್ತು ಲಕ್ಷ ಉದ್ಯೋಗ ಸೃಷ್ಟಿಯಾಗಿ, ಕನ್ನಡಿಗರಿಗೆ ಹೆಚ್ಚಿನ ಪ್ರಮಾಣದಲ್ಲಿ ಉದ್ಯೋಗ ಲಭ್ಯವಾಗಲಿದೆ ಎಂಬುದೇ ಅತ್ಯಂತ ಸಂತಸದ ವಿಷಯ ಎಂದರು.

Translate »