ಅಪರಿಚಿತ ವಾಹನ ಡಿಕ್ಕಿ: ನಿವೃತ್ತ ಐಬಿ ಅಧಿಕಾರಿ ಆರ್.ಎನ್.ಕುಲಕರ್ಣಿ ಸಾವು
ಮೈಸೂರು

ಅಪರಿಚಿತ ವಾಹನ ಡಿಕ್ಕಿ: ನಿವೃತ್ತ ಐಬಿ ಅಧಿಕಾರಿ ಆರ್.ಎನ್.ಕುಲಕರ್ಣಿ ಸಾವು

November 5, 2022

ಮೈಸೂರು, ನ.4- ಮೈಸೂರಿನ ಮಾನಸಗಂಗೋತ್ರಿ ಕ್ಯಾಂಪಸ್‍ನಲ್ಲಿ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ನಿವೃತ್ತ ಇಂಟೆ ಲಿಜೆನ್ಸ್ ಬ್ಯುರೋ (ಐಬಿ) ಅಧಿಕಾರಿ, ಲೇಖಕ ಆರ್.ಎನ್. ಕುಲಕರ್ಣಿ(82) ಅವರು ಇಂದು ಸಾವಿಗೀಡಾಗಿದ್ದಾರೆ.

ಮೈಸೂರಿನ ಶಾರದಾ ದೇವಿ ನಗರದ ನಿವಾಸಿಯಾದ ಇವರು ಎಂದಿನಂತೆ ಶುಕ್ರ ವಾರ ಸಂಜೆ ವಾಯುವಿಹಾರ ಕ್ಕೆಂದು ಕಾರಿನಲ್ಲಿ ಮಾನಸಗಂಗೋತ್ರಿ ಕ್ಯಾಂಪಸ್‍ಗೆ ತೆರಳಿದ್ದರು. ನಿತ್ಯದಂತೆ ಒಂದು ಕಡೆ ಕಾರು ನಿಲ್ಲಿಸಿಕೊಂಡು ಚಾಲಕ ನಿಂತಿದ್ದರು. ಆ ವೇಳೆ ವಾಯುವಿಹಾರದಲ್ಲಿದ್ದ ಕುಲಕರ್ಣಿ
ಅವರಿಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದು ಪರಾರಿಯಾ ಗಿದೆ. ವಿಷಯ ತಿಳಿದ ಅವರ ಕಾರು ಚಾಲಕ ಸ್ಥಳಕ್ಕೆ ದೌಡಾಯಿಸಿ, ತಕ್ಷಣ ಕಾಮಾಕ್ಷಿ ಆಸ್ಪತ್ರೆಗೆ ಅವರನ್ನು ಕರೆತಂದಿದ್ದಾರೆ. ಆದರೆ ತಲೆಗೆ ತೀವ್ರ ತರವಾದ ಪೆಟ್ಟು ಬಿದಿದ್ದ ಪರಿಣಾಮ ಚಿಕಿತ್ಸೆ ಫಲಕಾರಿಯಾಗದೆ ಕುಲಕರ್ಣಿ ಅವರು ಕೊನೆಯುಸಿರೆಳೆದಿದ್ದಾರೆ. ಕುಲಕರ್ಣಿ ಅವರು ಗಂಗೋತ್ರಿ ಕ್ಯಾಂಪಸ್‍ನಲ್ಲಿ ವಾಯು ವಿಹಾರದಲ್ಲಿದ್ದಾಗ ನಾನು ಎಂದಿನಂತೆ ಒಂದು ಜಾಗದಲ್ಲಿ ಕಾರು ನಿಲ್ಲಿಸಿಕೊಂಡು ಕಾಯುತ್ತಿದ್ದೆ. ಆದರೆ ಸುಮಾರು 5.45ರ ವೇಳೆಯಲ್ಲಿ ದಾರಿಯಲ್ಲಿ ಹೋಗುತ್ತಿದ್ದ ಯಾರೋ ಒಬ್ಬರು ನೀವು ನಿತ್ಯ ಕರೆದುಕೊಂಡು ಬರುತ್ತಿದ್ದ ವ್ಯಕ್ತಿಗೆ ಯಾವುದೋ ವಾಹನ ಗುದ್ದಿಕೊಂಡು ಹೋಗಿದೆ ಎಂದು ತಿಳಿಸಿದರು. ನಾನು ತಕ್ಷಣ ಹೋಗಿ ಅವರನ್ನು ಆಸ್ಪತ್ರೆಗೆ ಕರೆತಂದಿದ್ದಾಗಿ ಕಾರು ಚಾಲಕ ನಿಂಗರಾಜು ತಿಳಿಸಿದ್ದಾರೆ.
ಆರ್.ಎನ್.ಕುಲಕರ್ಣಿ ಅವರು ಪತ್ನಿ, ಇಬ್ಬರು ಮಕ್ಕಳು ಸೇರಿದಂತೆ ಬಂಧುಗಳು, ಅಪಾರ ಸ್ನೇಹಿತರನ್ನು ಅಗಲಿದ್ದಾರೆ. ಮಕ್ಕಳು ವಿದೇಶದಲ್ಲಿದ್ದು ಅವರು ಬಂದ ನಂತರ ಕುಲಕರ್ಣಿ ಅವರ ಅಂತ್ಯ ಸಂಸ್ಕಾರದ ಮಾಹಿತಿ ಲಭ್ಯವಾಗಲಿದೆ.

ಬಹುಮುಖ ಪ್ರತಿಭೆ: ಹಾವೇರಿ ಜಿಲ್ಲೆ ಸವಣೂರಿನಲ್ಲಿ 1940ರಲ್ಲಿ ಜನಿಸಿದ ಆರ್.ಎನ್. ಕುಲಕರ್ಣಿ ಅವರು ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದಿಂದ ಬಿಎಸ್(ಆನರ್ಸ್) ಪದವಿ ಪಡೆದಿದ್ದರು. ಅಲ್ಲದೆ ಭಾರತೀಯ ವಿದ್ಯಭವನ, ಬಾಂಬೆಯಿಂದ ಪತ್ರಿಕೋದ್ಯಮದಲ್ಲಿ ಡಿಪ್ಲೊಮಾ ಕೂಡ ಪಡೆದಿದ್ದರು. ಶಿಕ್ಷಕರಾಗಿ ವೃತ್ತಿ ಪ್ರಯಾಣ ಆರಂಭಿಸಿದ್ದ ಇವರು. ನಂತರ 1963ರಲ್ಲಿ ಭಾರತ ಸರ್ಕಾರದ ಇಂಟೆಲಿಜೆನ್ಸ್ ಬ್ಯುರೋ ಸೇರ್ಪಡೆಗೊಂಡು ನಾನಾ ಹುದ್ದೆ ಹಾಗೂ ಸ್ಥಳಗಳಲ್ಲಿ ಮೂರೂವರೆ ದಶಕಗಳ ಕಾಲ ಸೇವೆ ಸಲ್ಲಿಸಿದ್ದರು. ಭಾರತೀಯ ರಾಜತಾಂತ್ರಿಕ ಕಾರ್ಯಗಳು, ಕಾಪೆರ್Çರೇಟ್ ಕ್ಷೇತ್ರದಲ್ಲೂ ಕೆಲಸ ಮಾಡಿದರು. ವಾಯುಯಾನ ಸಂಶೋಧನಾ ಕೇಂದ್ರ(ಎಆರ್‍ಸಿ)ದಲ್ಲಿ, ಭಾರತ ಸರ್ಕಾರದ ವಿದೇಶಿ ಇಂಟೆಲಿಜೆನ್ಸ್ ಏಜೆನ್ಸಿಯ ಸಂಶೋಧನೆ ಮತ್ತು ವಿಶ್ಲೇಷಣೆ ದಳ(ರಾ)ದಲ್ಲಿ, ಇಂಡಿಯನ್ ಆಯಿಲ್ ಕಾರ್ಪೊರೇಷನ್(ಐಓಸಿ) ಮಾರ್ಕೆಟಿಂಗ್ ವಿಭಾಗದಲ್ಲಿ ವಿಜಿಲನ್ಸ್ ಚೀಫ್ ಆಗಿ ಕರ್ತವ್ಯ ನಿರ್ವಹಿಸಿದ್ದರು. ಖಾಸಗಿ ಪೈಲೆಟ್ ಲೈಸೆನ್ಸ್ ಪಡೆದಿದ್ದ ಇವರು, ದೇಶದ ಒಳಗೆ ಹಾಗೂ ಹೊರಗೆ ಸಾಕಷ್ಟು ಪ್ರಯಾಣಿಸಿದ್ದರು. ಕುಲಕರ್ಣಿ ಅವರ ವಿಶೇಷ ಕರ್ತವ್ಯ ಪರಿಗಣಿಸಿ ನಾಗಾಲ್ಯಾಂಡ್ ಸರ್ಕಾರ ಅವರಿಗೆ ಪೊಲೀಸ್ ಸರ್ವೀಸ್ ಮೆಡಲ್ ನೀಡಿ ಪ್ರಶಂಸಿಸಿತ್ತು. ಓದು ಮತ್ತು ಬರವಣಿಗೆಯನ್ನು ಹವ್ಯಾಸವಾಗಿಸಿಕೊಂಡಿದ್ದ ಕುಲಕರ್ಣಿ ಅವರು `ಸಿನ್ ಆಫ್ ನ್ಯಾಷನಲ್ ಕಾನ್ಸೈನ್ಸ್’, `ಗಾಡ್ ಸ್ಮೈಲ್ಸ್’ `ಫೇಸೆಟ್ಸ್ ಆಫ್ ಟೆರೆರಿಸಂ ಇನ್ ಇಂಡಿಯಾ’ ಸೇರಿದಂತೆ ಮಹತ್ವದ ವಿಷಯಗಳನ್ನೊಳಗೊಂಡ ಹಲವು ಪುಸ್ತಕಗಳನ್ನೂ ಪ್ರಕಟಿಸಿದ್ದರು.

Translate »