‘ಸಪ್ತಪದಿ’ ರಾಯಭಾರಿಯಾಗಿ ಇನ್ಫೋಸಿಸ್‍ನ ಸುಧಾಮೂರ್ತಿ ಆಯ್ಕೆ
ಮೈಸೂರು

‘ಸಪ್ತಪದಿ’ ರಾಯಭಾರಿಯಾಗಿ ಇನ್ಫೋಸಿಸ್‍ನ ಸುಧಾಮೂರ್ತಿ ಆಯ್ಕೆ

March 2, 2020

ಬೆಂಗಳೂರು,ಮಾ.1-`ಸಪ್ತಪದಿ’ ವಿವಾಹಕ್ಕೆ ಇನ್ಫೋಸಿಸ್ ಸಂಸ್ಥಾಪಕಿ ಡಾ.ಸುಧಾಮೂರ್ತಿ ಅವರನ್ನು ರಾಯ ಭಾರಿಯನ್ನಾಗಿ ಮಾಡಲಾಗಿದೆ ಎಂದು ಮುಜರಾಯಿ ಸಚಿವ ಕೋಟ ಶ್ರೀನಿ ವಾಸ್ ಪೂಜಾರಿ ಹೇಳಿದರು. ಶಿರಸಿಯ ಡಾ.ಅಂಬೇಡ್ಕರ್ ಭವನದಲ್ಲಿ ಮುಜ ರಾಯಿ ದತ್ತಿ ಇಲಾಖೆ ಹಾಗೂ ಜಿಲ್ಲಾಡ ಳಿತದಿಂದ ಆಯೋಜಿಸಿದ್ದ ‘ಸಪ್ತಪದಿ’ ಸರಳ ಸಾಮೂಹಿಕ ವಿವಾಹ ವಿಚಾರ ಸಂಕೀರ್ಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಪ್ತಪದಿ ವಿವಾಹಕ್ಕೆ ಯಾವುದೇ ಆದಾಯ ಮಿತಿ ಇಲ್ಲ, ಸರಳ ಸಾಮೂಹಿಕ ವಿವಾಹ ಎಲ್ಲ ವರ್ಗದವರಿಗೆ ಸಹಕಾರಿಯಾಗಲಿದೆ ಎಂದರು.

ಬಡವರು, ಮಧ್ಯಮ ವರ್ಗ ಸೇರಿ ಎಲ್ಲ ವರ್ಗದವರು ಸಪ್ತಪದಿ ಸರಳ ಸಾಮೂಹಿಕ ವಿವಾಹದಲ್ಲಿ ನೋಂದಣಿ ಮಾಡಿಸಿಕೊಂಡು ವಿವಾಹವಾಗ ಬಹುದು. ಸಪ್ತಪದಿ ಯೋಜನೆಯಲ್ಲಿ ಮದುವೆಯಾಗುವ ಜೋಡಿಗಳಿಗೆ ಸರಕಾರಿ ಉಪನೋಂದಣಾಧಿಕಾರಿಗಳಿಂದ ವಿವಾಹ ನೋಂದಣಿ ಮಾಡಿ ಕೊಡಲಾಗುವುದು. ಅಧಿಕಾರಿಗಳು ಕೂಡ ತಮ್ಮ ಮಕ್ಕಳ ಮದುವೆಯನ್ನು ಸಪ್ತಪದಿಯಲ್ಲಿ ಮಾಡುವಂತೆ ಮುತುವರ್ಜಿ ವಹಿಸಬೇಕು ಎಂದು ಕರೆ ನೀಡಿದರು. ಇನ್ನು, ಸರಳ ವಿವಾಹವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಇನ್ಫೋಸಿಸ್‍ನ ಸುಧಾಮೂರ್ತಿ ಅವರನ್ನು ರಾಯಭಾರಿ ಆಗಿ ಆಯ್ಕೆ ಮಾಡಲಾಗಿದೆ. ಈ ಮೂಲಕ ರಾಜ್ಯದ ಜನರಲ್ಲಿ ಸರಳ ವಿವಾಹದ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲಾಗುವುದು ಎಂದರು.

ಶಾಸಕ ದಿನಕರ ಶೆಟ್ಟಿ ಮಾತನಾಡಿ, ಕರಾವಳಿ ಭಾಗದಲ್ಲಿ ಸಾಮೂಹಿಕ ವಿವಾಹಕ್ಕೆ ಆಸಕ್ತಿ ತೋರಿಸುವುದು ಕಡಿಮೆ. ಸರಳ ಸಾಮೂಹಿಕ ವಿವಾಹ ಒಳ್ಳೆಯ ಕಾರ್ಯಕ್ರಮವಾಗಿದ್ದು, ಕರಾವಳಿ ಭಾಗದ ಜನರಲ್ಲಿ ಸಾಮೂಹಿಕ ವಿವಾಹ ಉತ್ತೇಜಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದರು.

Translate »