ಕನಿಷ್ಠ ಬೆಂಬಲ ಬೆಲೆಯಡಿ ಭತ್ತ, ರಾಗಿ ಖರೀದಿ ಕೇಂದ್ರ ಆರಂಭ
ಮೈಸೂರು

ಕನಿಷ್ಠ ಬೆಂಬಲ ಬೆಲೆಯಡಿ ಭತ್ತ, ರಾಗಿ ಖರೀದಿ ಕೇಂದ್ರ ಆರಂಭ

February 26, 2021

ಮೈಸೂರು,ಫೆ.25-2020-21ನೇ ಸಾಲಿನ ಮುಂಗಾರು (ಖಾರೀಫ್) ಋತುವಿನಲ್ಲಿ ರೈತರು ಬೆಳೆದ ಭತ್ತ ಮತ್ತು ರಾಗಿಯನ್ನು ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರೈತ ರಿಂದ ಖರೀದಿಸಲು ಮೈಸೂರು ಜಿಲ್ಲೆಗೆ ರಾಜ್ಯ ಸಹಕಾರ ಮಾರಾಟ ಮಹಾಮಂಡಳಿ ಯನ್ನು ಖರೀದಿ ಏಜೆನ್ಸಿಯನ್ನಾಗಿ ನೇಮಿ ಸಿದ್ದು, ಜಿಲ್ಲೆಯಲ್ಲಿ 12 ಖರೀದಿ ಕೇಂದ್ರ ಗಳನ್ನು ತೆರೆಯಲಾಗಿದೆ ಎಂದು ಜಿಲ್ಲಾಧಿ ಕಾರಿ ರೋಹಿಣಿ ಸಿಂಧೂರಿ ತಿಳಿಸಿದ್ದಾರೆ.

ಮೈಸೂರು ಜಿಲ್ಲೆಯಲ್ಲಿ ಖರೀದಿಸಲು ತೀರ್ಮಾನಿಸಿರುವ ಕೃಷಿ ಉತ್ಪನ್ನಗಳಾದ ಸಾಮಾನ್ಯ ಭತ್ತಕ್ಕೆ 1868 ರೂ., ಗ್ರೇಡ್ `ಎ’ ಭತ್ತಕ್ಕೆ 1888 ರೂ. ಹಾಗೂ ರಾಗಿ 3295 ರೂ. ನಿಗದಿ ಮಾಡಲಾಗಿದೆ. ಮೈಸೂರು ತಾಲೂಕಿನಲ್ಲಿ ಬಂಡಿಪಾಳ್ಯದ ಎಪಿಎಂಸಿ ಆವರಣ ಹಾಗೂ ಬಿಳಿಕೆರೆ ಖರೀದಿ ಕೇಂದ್ರ, ನಂಜನಗೂಡಿನ ಎಪಿಎಂಸಿ ಆವರಣ, ಟಿ.ನರ ಸೀಪುರ ಎಪಿಎಂಸಿ, ಹುಣಸೂರು ತಾಲೂ ಕಿನ ಎಪಿಎಂಸಿ ಹಾಗೂ ರತ್ನಪುರಿ ಎಪಿ ಎಂಸಿ, ಕೆ.ಆರ್.ನಗರದ ತಾಲೂಕಿನ ಎಪಿ ಎಂಸಿ ಆವರಣ ಹಾಗೂ ಚುಂಚನಕಟ್ಟೆಯ ಶ್ರೀರಾಮ ಸಹಕಾರ ಸಕ್ಕರೆ ಕಾರ್ಖಾನೆ ಉಗ್ರಾಣ, ಹೆಚ್.ಡಿ.ಕೋಟೆ ತಾಲೂಕಿನ ಸರ ಗೂರು ಎಪಿಎಂಸಿ ಆವರಣ, ಪಿರಿಯಾ ಪಟ್ಟಣ ತಾಲೂಕಿನ ಎಪಿಎಂಸಿ ಆವರಣ ಹಾಗೂ ಬೆಟ್ಟದಪುರದ ಎಪಿಎಂಸಿ ಆವರಣ ದಲ್ಲಿ ಕೃಷಿ ಇಲಾಖೆಯು ನೀಡಿರುವ ಕೃಷಿ ಬೆಳೆಗಳ ಉತ್ಪತ್ತಿ ಅಂದಾಜು ಮತ್ತು ರೈತರ ಅನುಕೂಲಗಳನ್ನು ಗಮನದಲ್ಲಿರಿಸಿಕೊಂಡು ಭತ್ತ ಮತ್ತು ರಾಗಿ ಖರೀದಿಗೆ ಕೇಂದ್ರ ಗಳನ್ನು ತೆರೆಯಲಾಗಿದೆ. ಪ್ರಸಕ್ತ ಸಾಲಿನಲ್ಲಿ ರೈತರಿಂದ ಹೆಚ್ಚು ಆಹಾರ ಧಾನ್ಯಗಳನ್ನು ಖರೀದಿಸುವ ಉದ್ದೇಶದಿಂದ ಪ್ರತಿ ಎಕರೆಗೆ ನಿಗದಿಪಡಿಸಿರುವ ಮಿತಿಯನ್ನು ಮುಂದುವರೆ ಸಿದ್ದು, ಗರಿಷ್ಟ ಮಿತಿಯನ್ನು ತೆರವುಗೊಳಿ ಸಿದೆ. ಈಗಾಗಲೇ ಆಹಾರ ಧಾನ್ಯಗಳನ್ನು ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಮಾರಾಟ ಮಾಡಿರುವ ರೈತರಿಂದ ಕೂಡಾ ಗರಿಷ್ಠ ಮಿತಿಯನ್ನು ಸಡಿಲಿಸಿ ಆಹಾರ ಧಾನ್ಯಗಳನ್ನು ಖರೀದಿಸಲು ಸರ್ಕಾರವು ಅವಕಾಶವನ್ನು ಕಲ್ಪಿಸಿದೆ. ಭತ್ತವನ್ನು ಪ್ರತಿ ಎಕರೆಗೆ 25 ಕ್ವಿಂಟಾಲ್‍ನಂತೆ ಹಾಗೂ ರಾಗಿ ಯನ್ನು ಪ್ರತಿ ಎಕರೆಗೆ 10 ಕ್ವಿಂಟಾಲ್ ನಂತೆ ನೀಡಬಹುದಾಗಿದು,್ದ ಗರಿಷ್ಠ ಮಿತಿ ಯನ್ನು ತೆಗೆದುಹಾಕಲಾಗಿದೆ.

 

 

 

Translate »