ಇನ್ಸ್‍ಪೆಕ್ಟರ್ ರವಿ ಉಡುಪಿಗೆ ಎತ್ತಂಗಡಿ; ಒಂದೇ ದಿನದಲ್ಲಿ ವರ್ಗಾವಣೆ ರದ್ದು
ಮೈಸೂರು

ಇನ್ಸ್‍ಪೆಕ್ಟರ್ ರವಿ ಉಡುಪಿಗೆ ಎತ್ತಂಗಡಿ; ಒಂದೇ ದಿನದಲ್ಲಿ ವರ್ಗಾವಣೆ ರದ್ದು

January 31, 2019

ಮೈಸೂರು: ಮೈಸೂರು ದಕ್ಷಿಣ ಗ್ರಾಮಾಂತರ ಠಾಣೆಯಲ್ಲಿ ಕರ್ತವ್ಯಕ್ಕೆ ವರದಿ ಮಾಡಿ ಕೊಳ್ಳುವ ವಿಚಾರದಲ್ಲಿ ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮಿತ್ ಸಿಂಗ್ ಅವರು ದೂರವಾಣಿ ಮೂಲಕ ಅವಾಚ್ಯ ಶಬ್ಧಗಳಿಂದ ನಿಂದಿಸಿ, ಅವಮಾ ನಿಸಿದರೆಂದು ಆರೋಪಿಸಿ ಐಜಿಪಿಯವರಿಗೆ ಲಿಖಿತ ದೂರು ನೀಡಿದ್ದ ಇನ್ಸ್‍ಪೆಕ್ಟರ್ ರವಿ ಈಗ ಹಿರಿಯ ಐಪಿಎಸ್ ಅಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಜನವರಿ 25ರಂದು ರವಿ, ದಕ್ಷಿಣ ವಲಯ ಐಜಿಪಿ ಕೆ.ವಿ. ಶರತ್‍ಚಂದ್ರ ಅವರಿಗೆ ಎಸ್ಪಿ ಅಮಿತ್ ಸಿಂಗ್ ವಿರುದ್ಧ ಲಿಖಿತ ದೂರು ನೀಡಿದ್ದರು. ಈ ದೂರು ವಿಚಾರಣೆ ಮುನ್ನವೇ ಜನವರಿ 29 ರಂದು ರಾಜ್ಯ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ಎನ್. ರಾಜು, ಜನವರಿ 14 ರಂದು ಮೈಸೂರು ದಕ್ಷಿಣ ಗ್ರಾಮಾಂತರ ಠಾಣೆಗೆ ವರ್ಗಾವಣೆಗೊಂಡಿದ್ದ ಸಿ.ವಿ. ರವಿ ಆದೇಶವನ್ನು ರದ್ದುಪಡಿಸಿ, ಉಡುಪಿ ಸಿಎಸ್‍ಬಿ ಘಟಕದ ಇನ್ಸ್‍ಪೆಕ್ಟರ್ ಆಗಿ ವರ್ಗಾವಣೆ ಮಾಡಿದ್ದರು.

ಆದರೆ ಒಂದೇ ದಿನದಲ್ಲಿ ಡಿಜಿಪಿಯವರು ವರ್ಗಾ ವಣೆ ಆದೇಶವನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ರದ್ದುಪಡಿಸಿ, ರವಿ ಅವರನ್ನು ಮುಂದಿನ ಸ್ಥಳ ನಿಯುಕ್ತಿಗಾಗಿ ಬೆಂಗಳೂರಿನ ಪೊಲೀಸ್ ಪ್ರಧಾನ ಕಚೇರಿಯಲ್ಲಿ ವರದಿ ಮಾಡಿಕೊಳ್ಳುವಂತೆ ಹೊಸ ಆದೇಶ (ಸಂಖ್ಯೆ ಸಿಬಿ-2/09/2018-19) ಹೊರಡಿಸಿ ದ್ದಾರೆ. ಜನವರಿ 15, ಸಂಕ್ರಾಂತಿ ಹಬ್ಬದಂದು ವರ್ಗಾವಣೆ ಆದೇಶ ಮತ್ತು ಮೂವ್ ಮೆಂಟ್ ಆರ್ಡರ್ ಪ್ರಕಾರ ತಮಗೆ ಮೈಸೂರು ಗ್ರಾಮಾಂತರ ಠಾಣೆಯಲ್ಲಿ ವರದಿ ಮಾಡಿಕೊಳ್ಳಲು ಅನುಮತಿ ನೀಡುವಂತೆ ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮಿತ್ ಸಿಂಗ್ ಅವರನ್ನು ಮೊಬೈಲ್ ಕರೆ ಮೂಲಕ ರವಿ ಕೇಳಿಕೊಂಡಿದ್ದರು. ಆದರೆ ಎಸ್ಪಿ ಅಮಿತ್ ಸಿಂಗ್, ಡಿಜಿಪಿಯವರು ವರದಿ ಮಾಡಿ ಕೊಳ್ಳಲು ಅವಕಾಶ ನೀಡದಂತೆ ತಮಗೆ ಸೂಚಿಸಿದ್ದು, ಸ್ವಲ್ಪ ಕಾಯುವಂತೆ ತಿಳಿಸಿದ್ದರೆನ್ನಲಾಗಿದೆ.

ಈ ಮಧ್ಯೆ ಪ್ರಭಾವಿಯೊಬ್ಬರು ಎಸ್ಪಿ ಅವರಿಗೆ ಕರೆ ಮಾಡಿ ರವಿ ವರದಿ ಮಾಡಿಕೊಳ್ಳಲು ಅವಕಾಶ ನೀಡು ವಂತೆ ತಿಳಿಸಿದ್ದರೆನ್ನಲಾಗಿದೆ. ಇದರಿಂದ ಬೇಸರ ಹಾಗೂ ಸಿಟ್ಟುಗೊಂಡಿದ್ದ ಎಸ್ಪಿ ಅಮಿತ್ ಸಿಂಗ್, ಪೊಲೀಸ್ ಇನ್ಸ್‍ಪೆಕ್ಟರ್ ಸಿ.ವಿ.ರವಿ ಅವರಿಗೆ ಮೊಬೈಲ್ ನಲ್ಲಿ ಅವಾಚ್ಯ ಶಬ್ಧಗಳಿಂದ ನಿಂದಿಸಿ, ಅವಮಾನಿಸಿದ್ದ ರೆನ್ನಲಾಗಿದೆ. ಈ ಮೊಬೈಲ್ ಸಂಭಾಷಣೆ ಸಾಮಾ ಜಿಕ ಜಾಲತಾಣದಲ್ಲಿ ವೈರಲ್ ಕೂಡ ಆಗಿತ್ತು.

ಇದರಿಂದ ತೀವ್ರ ನೊಂದಿದ್ದ ಸಿ.ವಿ. ರವಿ, ಜನ ವರಿ 25 ರಂದು ಐಜಿಪಿ (ದಕ್ಷಿಣ ವಲಯ) ಕೆ.ವಿ. ಶರತ್‍ಚಂದ್ರ ಅವರಿಗೆ ಎಸ್ಪಿ ವಿರುದ್ಧ ಲಿಖಿತ ದೂರು ನೀಡಿ ಅದರ ಪ್ರತಿಯನ್ನು ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೂ ರವಾನಿಸಿದ್ದರು.

ಈ ಬೆಳವಣಿಗೆ ಹಿನ್ನೆಲೆಯಲ್ಲಿ ರವಿ ಅವರನ್ನು ಉಡುಪಿ ಜಿಲ್ಲೆಗೆ ವರ್ಗಾವಣೆ ಮಾಡಿದ ನಂತರ ಒಂದೇ ದಿನ ದಲ್ಲಿ ಆ ಆದೇಶವನ್ನೂ ಇಂದು ರದ್ದುಗೊಳಿಸಿರುವುದ ರಿಂದ ರವಿ ಈಗ ಡಿಜಿಪಿ ಕಚೇರಿಯಲ್ಲಿ ವರದಿ ಮಾಡಿ ಕೊಳ್ಳಬೇಕಿದೆ. ಹಿರಿಯ ಐಪಿಎಸ್ ಅಧಿಕಾರಿ ವರ್ಗ ಹಾಗೂ ಪ್ರಭಾವಿ ರಾಜಕಾರಣಿಗಳ ಎದುರಾಕಿ ಕೊಂಡರೆ ಎಂತಹ ಸ್ಥಿತಿ ಬರುತ್ತದೆ ಎಂಬುದಕ್ಕೆ ಇನ್ಸ್ ಪೆಕ್ಟರ್ ಸಿ.ವಿ. ರವಿ ಪ್ರಕರಣ ಮತ್ತೊಂದು ಸಾಕ್ಷಿ.

ಈ ಹಿಂದೆಯೂ 2013ರ ವಿಧಾನಸಭಾ ಚುನಾವಣೆ ವೇಳೆ ಸಿದ್ದರಾಮಯ್ಯ ಪರ ಪ್ರಚಾರ ಮಾಡುತ್ತಿದ್ದ ಅವರ ಮಗ ರಾಕೇಶ್ ಮತ್ತು ಬಿಜೆಪಿ ಅಭ್ಯರ್ಥಿ ಕಾಪು ಸಿದ್ದಲಿಂಗಸ್ವಾಮಿ ನಡುವೆ ಘರ್ಷಣೆ ನಡೆದಾಗ ನಜರ್ ಬಾದ್ ಠಾಣೆ ಪೊಲೀಸರು ದಾಖಲಿಸಿದ ಹಲ್ಲೆ ಪ್ರಕರಣದಲ್ಲಿ ರಾಕೇಶ್ ಹೆಸರು ಸೇರಿಸಿದ್ದಕ್ಕೆ ಅಂದಿನ ನಜರ್‍ಬಾದ್ ಠಾಣೆ ಅಂದಿನ ಇನ್ಸ್‍ಪೆಕ್ಟರ್ ಅಮಾ ನತುಗೊಂಡಿದ್ದರು. ನಂತರ ಅವರನ್ನು ಕಾರವಾರ ಜಿಲ್ಲೆಗೆ ವರ್ಗಾವಣೆ ಮಾಡಿ, ಮುಂಬಡ್ತಿ ಸಹ ಸಿಗ ದಂತೆ ಮಾಡಲಾಗಿತ್ತು. ಈಗ ಇನ್ಸ್‍ಪೆಕ್ಟರ್ ರವಿ ವಿಷಯದಲ್ಲೂ ಅದೇ ಬೆಳವಣಿಗೆ ಕಂಡುಬರುತ್ತಿದೆ.

 

Translate »