ಮೈಸೂರಲ್ಲಿ ೨೨,೯೦೦ ಕೋಟಿ ರೂ. ವೆಚ್ಚದಲ್ಲಿಸೆಮಿಕಂಡಕ್ಟರ್ ಘಟಕ ಸ್ಥಾಪನೆ
ಮೈಸೂರು

ಮೈಸೂರಲ್ಲಿ ೨೨,೯೦೦ ಕೋಟಿ ರೂ. ವೆಚ್ಚದಲ್ಲಿಸೆಮಿಕಂಡಕ್ಟರ್ ಘಟಕ ಸ್ಥಾಪನೆ

May 3, 2022

ಮೈಸೂರು ವಲಯದ ಸರ್ವತೋಮುಖ ಅಭಿವೃದ್ಧಿಗೆ ನಾಂದಿಯಾಗುವ ವಿಶ್ವಾಸ
ಕಡಕೊಳ ಬಳಿಯ ಕೋಚನಹಳ್ಳಿ ಬಳಿ ೧೫೦ ಎಕರೆ ಭೂಮಿ ಇದಕ್ಕಾಗಿ ಮೀಸಲು

ಕೇಂದ್ರ ಸರ್ಕಾರ ಕಳೆದ ೨೦೨೦ರಲ್ಲಿ ಇಂಡಿಯಾ ಸೆಮಿಕಂಡಕ್ಟರ್ ಯೋಜನೆ ಪ್ರಕಟಿಸಿತ್ತು. ಮೊಬೈಲ್ ಸೇರಿದಂತೆ ಆಯ್ದ ಕೆಲವು ಎಲೆಕ್ಟಾçನಿಕ್ ಉಪ ಕರಣಗಳಿಂದ ಹಿಡಿದು ಕೆಲ ಸುಧಾರಿತ ಸೇವೆಗಳು ಆಟೋಮೊಬೈಲ್ ಸೇರಿದಂತೆ ಅನೇಕ ಎಲೆ ಕ್ಟಾçನಿಕ್ ಸಾಧನಗಳಲ್ಲಿ ಬಳಸುವ ಪ್ರಮುಖ ಉಪ ಕರಣವಿದು. ಸೆಮಿಕಂಡಕ್ಟರ್ ಚಿಪ್ ರೂಪಿಸು ವುದರಲ್ಲಿ ಬೆಂಗಳೂರು ಮುಂಚೂಣ ಯಲ್ಲಿದೆ. ಆದರೂ ಇಡೀ ದೇಶ ಚಿಪ್‌ಗಳಿಗೆ ಅನ್ಯ ದೇಶಗಳನ್ನು ಅವಲಂಬಿಸಬೇಕಾಗಿದೆ. ಇದನ್ನು ಮನವರಿಕೆ ಮಾಡಿಕೊಂಡು ಪ್ರಧಾನಿ ನರೇಂದ್ರ ಮೋದಿ ೮೦ ಸಾವಿರ ಕೋಟಿ ರೂ. ಹೂಡಿಕೆ ಮೂಲಕ ದೇಶದಲ್ಲಿ ಸೆಮಿಕಂಡಕ್ಟರ್ ಯೋಜನೆ ಜಾರಿಗೆ ಬಜೆಟ್‌ನಲ್ಲಿ ಘೋಷಿಸಿದ್ದರು.

ಮೈಸೂರು,ಮೇ೨(ಆರ್‌ಕೆ)-ಮೈಸೂರÀಲ್ಲಿ ೨೨,೯೦೦ ಕೋಟಿ ರೂ. ಹೂಡಿಕೆಯೊಂದಿಗೆ ಸೆಮಿಕಂಡಕ್ಟರ್ ಫ್ಯಾಬ್ ಘಟಕ ಸ್ಥಾಪಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.ಈ ಬಗ್ಗೆ ಕರ್ನಾಟಕ ಸರ್ಕಾರವು ಇಸ್ರೇಲ್ ಮೂಲದ ಇಂಟರ್‌ನ್ಯಾಷನಲ್ ಸೆಮಿಕಂಡಕ್ಟರ್ ISಒಅಅನ್‌ಲಾಗ್ ಫ್ಯಾಬ್ ಪ್ರೆöÊವೇಟ್ ಲಿಮಿಟೆಡ್‌ನೊಂದಿಗೆ ಭಾನುವಾರ ಬೆಂಗಳೂರಿನಲ್ಲಿ ಒಡಂಬಡಿಕೆ ಮಾಡಿಕೊಂಡಿದ್ದು, ಈ ಘಟಕ ಸ್ಥಾಪಿಸುವ ನಿರ್ಧಾರಕ್ಕೆ ಮೈಸೂರಿನ ಕೈಗಾರಿ ಕೋದ್ಯಮಿಗಳು, ಜನಪ್ರತಿನಿಧಿಗಳು ಸಂತಸ ವ್ಯಕ್ತಪಡಿಸಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಮ್ಮುಖದಲ್ಲಿ ಐಟಿ-ಬಿಟಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ.ಇ.ವಿ.ರಮಣರೆಡ್ಡಿ ಹಾಗೂ ಐಎಸ್ ಎಂಸಿ ಅನ್‌ಲಾಗ್ ಫ್ಯಾಬ್ ಪ್ರೆöÊವೇಟ್ ಲಿಮಿಟೆಡ್ ನಿರ್ದೇ ಶಕ ಅಜಯ್ ಜಲನ್ ಒಡಂಬಡಿಕೆಗೆ ಸಹಿ ಹಾಕಿದರು.

ಸೆಮಿ ಕಂಡಕ್ಟರ್ ಮ್ಯಾನುಫ್ಯಾಕ್ಚರಿಂಗ್ ಘಟಕವನ್ನು ೨೨,೯೦೦ ಕೋಟಿ ರೂ. ಹೂಡಿಕೆಯೊಂದಿಗೆ ಸ್ಥಾಪಿಸು ತ್ತಿರುವ ಕಂಪನಿಗೆ ಮೈಸೂರು ಭಾಗದ ಕೋಚನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಅಗತ್ಯವಿರುವ ಭೂಮಿ ನೀಡಲಾಗು ವುದು. ಕಡಕೊಳ ಸಮೀಪ ನಿರ್ಮಿಸುತ್ತಿರುವ ಕಂಟೇ ನರ್ ಕಾರ್ಪೊರೇಷನ್ ಆಫ್ ಇಂಡಿಯಾ (ಅಔಓಅಔಖ)ವೇ ಫ್ಯಾಬ್ ಘಟಕ ಸ್ಥಾಪಿಸಲು ಭೂಮಿ ನೀಡಲಾಗುವುದು ಎಂದು ಮೂಲಗಳು ತಿಳಿಸಿವೆ.

೧,೫೦೦ ಪ್ರತ್ಯಕ್ಷ ಹಾಗೂ ೧೦,೦೦೦ ಪರೋಕ್ಷ ಉದ್ಯೋಗ ಕಲ್ಪಿಸುವ ಸೆಮಿಕಂಡಕ್ಟರ್ ಫ್ಯಾಬ್ರಿಕೇಷನ್ ಪ್ಲಾಂಟ್‌ಗೆ ೧೫೦ ಎಕರೆ ಭೂಮಿ ನೀಡಬೇಕೆಂದು ಕಂಪನಿ ಕೋರಿಕೊಂಡಿದೆ.
ಪ್ರತಾಪ್ ಸಿಂಹ ಸ್ವಾಗತ: ಘಟಕ ಸ್ಥಾಪಿಸುತ್ತಿರುವುದನ್ನು ಸ್ವಾಗತಿಸಿರುವ ಸಂಸದ ಪ್ರತಾಪ್ ಸಿಂಹ, ಸೆಮಿಕಂಡಕ್ಟರ್ ಕೈಗಾರಿಕೆಗಳನ್ನು ಪ್ರೋತ್ಸಾಹಿಸಲು ಪ್ರಧಾನಿ ನರೇಂದ್ರ ಮೋದಿ ಅವರು ೭೫,೦೦೦ ಕೋಟಿ ರೂ.ಗಳನ್ನು ಮೀಸಲಿರಿಸಿದ್ದು, ಮೈಸೂರು ಭಾಗದಲ್ಲಿ ಪ್ಲಾಂಟ್ ಬರುತ್ತಿರುವುದರಿಂದ ಇಲ್ಲಿನ ಕೈಗಾರಿಕಾ ಕ್ಷೇತ್ರದ ಅಭಿವೃದ್ಧಿಗೆ ಇದು ಪೂರಕವಾಗಲಿದೆ ಎಂದಿದ್ದಾರೆ. ಮೈಸೂರು ವಿಮಾನ ನಿಲ್ದಾಣದ ವಿಸ್ತರಣೆ, ಮೈಸೂರು-ಬೆಂಗಳೂರು ದಶಪಥ ಹೆದ್ದಾರಿ ನಿರ್ಮಾಣ, ಜೋಡಿ ರೈಲು ಹಳಿ ಮಾರ್ಗದಂತಹ ಉತ್ತಮ ಸಂಪರ್ಕ ವ್ಯವಸ್ಥೆಯು ಇಲ್ಲಿನ ಕೈಗಾರಿಕೋದ್ಯಮದ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು ತಿಳಿಸಿದ್ದಾರೆ.

ಕೈಗಾರಿಕಾ ಚಿತ್ರಣವೇ ಬದಲು: ಸೆಮಿಕಂಡಕ್ಟರ್ ಫ್ಯಾಬ್ ಯೂನಿಟ್ ಬರುತ್ತಿರುವುದ ರಿಂದ ಮೈಸೂರಿನ ಉದ್ಯಮ ಕ್ಷೇತ್ರದ ರೂಪುರೇಷೆಯೇ ಬದಲಾಗಲಿದೆ ಎಂದು ಸಿಐ ಐಎಲ್ ರಾಜ್ಯ ಘಟಕದ ಅಧ್ಯಕ್ಷ ಅರ್ಜುನ್ ರಂಗ ಅಭಿಪ್ರಾಯಿಸಿದ್ದಾರೆ. ಪ್ರಧಾನಿ ಮೋದಿ ಹಾಗೂ ಮುಖ್ಯಮಂತ್ರಿ ಬೊಮ್ಮಾಯಿ ನೇತೃತ್ವದಲ್ಲಿ ಮೈಸೂರಿಗೆ ಇಂತಹ ದೊಂದು ಬೃಹತ್ ಫ್ಯಾಬ್ ಕಂಪನಿ ಬರುತ್ತಿರುವುದು ಉತ್ತಮ ಬೆಳವಣ ಗೆಯಾಗಿದ್ದು, ಇಲ್ಲಿನ ಸಮಗ್ರ ಅಭಿವೃದ್ಧಿಯಾಗಲಿದೆ. ಕೆಲವೇ ದೇಶಗಳು ಮಾತ್ರ ಇಂತಹ ಬೃಹತ್ ಪ್ರಮಾಣದ ಸೆಮಿಕಂಡ ಕ್ಟರ್ ಉತ್ಪಾದನಾ ಘಟಕ ಹೊಂದಿದ್ದು, ಮೈಸೂರಲ್ಲೇ ಈ ಘಟಕ ಸ್ಥಾಪಿಸುತ್ತಿರುವುದು ಉದ್ಯೋಗ ಸೃಷ್ಟಿ ಮತ್ತು ಕೈಗಾರಿಕೋದ್ಯಮಕ್ಕೆ ಅನುಕೂಲ ವಾಗಲಿದೆ ಎಂದರು.

ಮೈಸೂರು ಕೈಗಾರಿಕಾ ಹಬ್:ಪ್ರಧಾನಮಂತ್ರಿಗಳ ಆತ್ಮ ನಿರ್ಭರ ಭಾರತದ ಕನಸಿನ ಯೋಜನೆಯಲ್ಲಿ ಒಂದಾದ ಸೆಮಿ ಕಂಡಕ್ಟರ್ ಪ್ಲಾಂಟ್, ಮೈಸೂರು ಕೈಗಾರಿಕೆಗಳ ಹಬ್ ಎಂಬುದಕ್ಕೆ ಸಾಕ್ಷಿಯಾಗಲಿದೆ ಎಂದು ಸಿಐಐ ಮೈಸೂರು ವಲಯದ ಅಧ್ಯಕ್ಷ ಸುಪ್ರಿಯಾ ಸಾಲಿಯಾನ್ ಅಭಿಪ್ರಾಯ ಪಟ್ಟಿದ್ದಾರೆ. ಕರ್ನಾಟಕ ಡಿಜಿಟಲ್ ಎಕಾನಮಿ ಮತ್ತು ಬಿಯಾಂಡ್ ಬೆಂಗಳೂರು ಯೋಜನೆ ಆರಂಭಿಸಿರುವ ರಾಜ್ಯ ಸರ್ಕಾರವು ಮೈಸೂರಿನ ಕೈಗಾರಿಕಾಭಿವೃದ್ಧಿಗೆ ಪೂರಕವಾಗಿ ಸ್ಪಂದಿಸುತ್ತಿರುವುದರಿAದ ಬಂಡವಾಳ ಹೂಡಲು ಹೊರಗಿನ ಕೈಗಾರಿಕೋದ್ಯಮಿಗಳು ರಾಜ್ಯಕ್ಕೆ ಬರುತ್ತಿರುವುದು ಉತ್ತಮ ಬೆಳವಣ ಗೆಯಾಗಿದೆ ಎಂದು ನುಡಿದರು.

ಆರ್ಥಿಕ ಅಭಿವೃದ್ಧಿ:ಮೈಸೂರಿಗೆ ಐಎಸ್‌ಎಸಿ ಸೆಮಿಕಂಡಕ್ಟರ್ ಫ್ಯಾಬ್ ತರುತ್ತಿರುವುದು ಸಂತಸ ತಂದಿದೆ. ಅದರಿಂದ ಇಲ್ಲಿನ ಆರ್ಥಿಕ ಅಭಿವೃದ್ಧಿಯಾಗಲಿದೆ ಎಂದು ಮೈಸೂರಿನ ರಾಜ ವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅಭಿಪ್ರಾಯಪಟ್ಟಿದ್ದಾರೆ.
ಅಪಾರ ಕೈಗಾರಿಕಾ ಪರಂಪರೆಯನ್ನು ಹೊಂದಿರುವ ಮೈಸೂರಿನಲ್ಲಿ ಇಂತಹ ಘಟಕ ಸ್ಥಾಪಿಸುತ್ತಿರುವುದರಿಂದ ಮೈಸೂರಿನ ಸಮಗ್ರ ಆರ್ಥಿಕ ಅಭಿವೃದ್ಧಿ ಜೊತೆಗೆ ರಾಜ್ಯ ಮತ್ತು ರಾಷ್ಟçದ ಸಮಗ್ರ ಅಭಿವೃದ್ಧಿಗೂ ನೆರವಾಗಲಿದೆ ಎಂದು ಅವರು ತಿಳಿಸಿದ್ದಾರೆ.

ಉದ್ಯೋಗ ಸೃಷ್ಟಿ: ಸೆಮಿಕಂಡಕ್ಟರ್ ಉತ್ಪಾದನಾ ಘಟಕದಿಂದಾಗಿ ಉದ್ಯೋಗ ಸೃಷ್ಟಿಯ ಜೊತೆಗೆ ಅಪಾರ ಪ್ರಮಾಣದ ತೆರಿಗೆಯೂ ಸಂಗ್ರಹವಾಗುತ್ತದೆ ಎಂದು ಮೈಸೂರು ಕೈಗಾ ರಿಕೆಗಳ ಘಟಕದ ಸಂಘಟನಾ ಕಾರ್ಯದರ್ಶಿ ಸುರೇಶ್‌ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.

ಸ್ವರೂಪವೇ ಬದಲು:ಸುಮಾರು ೨೨,೯೦೦ ಕೋಟಿ ರೂ. ಬಂಡವಾಳದೊAದಿಗೆ ಈ ಉದ್ಯಮ ಸ್ಥಾಪನೆಯಾದಲ್ಲಿ ಮೈಸೂರು ಭಾಗದ ಕೈಗಾರಿಕಾ ಸ್ವರೂಪವೇ ಬದಲಾಗಲಿದೆ. ಈ ಹಿಂದೆಯೇ ಈ ಪ್ರಸ್ತಾವನೆ ಇತ್ತು. ಈಗ ಅದು ಸಾಕಾರಗೊಳ್ಳುತ್ತಿರುವುದು ಸಂತಸದ ವಿಷಯ ಎಂದು ಎಂಸಿಸಿಐ ಅಧ್ಯಕ್ಷ ಕೆ.ಬಿ.ಲಿಂಗರಾಜು ಅಭಿಪ್ರಾಯಪಟ್ಟಿದ್ದಾರೆ.

 

Translate »