ವೇತನ ಪರಿಷ್ಕರಣೆಗೆ ಆಗ್ರಹಿಸಿ ವಿಮಾ ಕಂಪನಿ ನೌಕರರ ಪ್ರತಿಭಟನೆ
ಮೈಸೂರು

ವೇತನ ಪರಿಷ್ಕರಣೆಗೆ ಆಗ್ರಹಿಸಿ ವಿಮಾ ಕಂಪನಿ ನೌಕರರ ಪ್ರತಿಭಟನೆ

October 29, 2020

ಮೈಸೂರು, ಅ.28(ಪಿಎಂ)- ವೇತನ ಪರಿಷ್ಕರಣೆಗೆ ಒತ್ತಾಯಿಸಿ ಹಾಗೂ ನೂತನ ಪಿಂಚಣಿ ಯೋಜನೆ ಹಿಂಪಡೆಯಲು ಆಗ್ರಹಿಸಿ ಸರ್ಕಾರಿ ಸ್ವಾಮ್ಯದ ಸಾಮಾನ್ಯ ವಿಮಾ ಕಂಪನಿಗಳ ಸಿಬ್ಬಂದಿ ಹಾಗೂ ಅಧಿಕಾರಿಗಳ ಜಂಟಿ ವೇದಿಕೆಯಿಂದ ಬುಧ ವಾರ ಮೈಸೂರಿನ ರಾಮಸ್ವಾಮಿ ವೃತ್ತದ ಲ್ಲಿರುವ ನ್ಯಾಷನಲ್ ಇನ್ಷೂರೆನ್ಸ್ ಕಂಪ ನಿಯ ಮೈಸೂರು ವಿಭಾಗೀಯ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

ಕೇಂದ್ರ ಸರ್ಕಾರದ ಅಧೀನದ ಯುನೈ ಟೆಡ್ ಇಂಡಿಯಾ, ನ್ಯಾಷನಲ್ ಇನ್ಷೂರೆನ್ಸ್ ಕಂಪನಿ, ನ್ಯೂ ಇಂಡಿಯಾ, ಓರಿಯಂಟಲ್ ಇನ್ಷೂರೆನ್ಸ್ ಕಂಪನಿಗಳ ನೌಕರರ ವೇತನ ಪರಿಷ್ಕರಣೆ 2017 ರಿಂದಲೂ ಆಗಿಲ್ಲ. ಕೂಡಲೇ ವೇತನ ಪರಿಷ್ಕರಣೆಗೆ ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.

ನೂತನ ಪಿಂಚಣಿ ಯೋಜನೆ ಕೈಬಿಟ್ಟು 1995ರ ಪಿಂಚಣಿ ಯೋಜನೆಯನ್ನೇ ಮತ್ತೆ ಜಾರಿಗೊಳಿಸಬೇಕು. ಕುಟುಂಬ ಪಿಂಚಣಿ ಯನ್ನು ಶೇ.10ರಿಂದ ಶೇ.30ಕ್ಕೆ ಹೆಚ್ಚಳ ಮಾಡಬೇಕು ಎಂದು ಆಗ್ರಹಿಸಿದರು.

ನಾಲ್ಕೂ ವಿಮಾ ಕಂಪನಿಗಳನ್ನು ವಿಲೀನಗೊಳಿಸಬೇಕು ಎಂಬುದೂ ಸೇರಿ ದಂತೆ 11 ಬೇಡಿಕೆಗಳ ಈಡೇರಿಕೆಗಾಗಿ ನ.26ಕ್ಕೆ ರಾಷ್ಟ್ರವ್ಯಾಪಿ ಮುಷ್ಕರ ನಡೆಸಲಾಗುವುದು ಎಂದು ಇದೇ ವೇಳೆ ವೇದಿಕೆ ಸಂಚಾಲಕ ಬಲರಾಮ್ ಪ್ರಕಟಿಸಿ ದರು. ಜಂಟಿ ವೇದಿಕೆ ಕಾರ್ಯದರ್ಶಿ ಮಹೇಶ್, ಪದಾಧಿಕಾರಿ ಎನ್. ರವಿಕುಮಾರ್ ಸೇರಿದಂತೆ ಮತ್ತಿತರರು ಪ್ರತಿಭಟನೆಯಲ್ಲಿದ್ದರು.

Translate »