ಮೈಸೂರು, ಅ.28(ಪಿಎಂ)- ಬಿಜೆಪಿ ಮುಖಂಡ, ಮಾಜಿ ಸೆನೆಟ್ ಸದಸ್ಯ, ಚಲನ ಚಿತ್ರ ನಾಯಕ ನಟ, ಜೆಪಿ ಎಂದೇ ಖ್ಯಾತ ನಾಮರಾದ ಎಸ್.ಜಯಪ್ರಕಾಶ್ ಅವರ ಹುಟ್ಟುಹಬ್ಬದ ಅಂಗವಾಗಿ ಬುಧವಾರ ಕೊರೊನಾ ವಾರಿಯರ್‍ಗಳನ್ನು ಸನ್ಮಾನಿಸಲಾಯಿತು.
ಮೈಸೂರಿನ ಜೆಎಲ್‍ಬಿ ರಸ್ತೆಯ ಎಂಜಿ ನಿಯರ್‍ಗಳ ಸಂಸ್ಥೆ ಸಭಾಂಗಣದಲ್ಲಿ ಏರ್ಪ ಡಿಸಿದ್ದ ಸಮಾರಂಭದಲ್ಲಿ ಆಶಾ ಕಾರ್ಯ ಕರ್ತೆಯರು, ನರ್ಸ್‍ಗಳು, ಪೌರಕಾರ್ಮಿ ಕರು, ಪೊಲೀಸರು ಹಾಗೂ ವೈದ್ಯರನ್ನು ಸನ್ಮಾನಿಸುವ ಮೂಲಕ ಎಸ್.ಜಯ ಪ್ರಕಾಶ್ ಅರ್ಥಪೂರ್ಣವಾಗಿ ಜನ್ಮದಿನ ವನ್ನು ಆಚರಿಸಿಕೊಂಡರು.
ನಗರದ ವಿವಿಧ ಪ್ರಾಥಮಿಕ ಆರೋಗ್ಯ ಕೇಂದ್ರಗಳಡಿಯಲ್ಲಿ ಕಾರ್ಯನಿರ್ವಹಿಸು ತ್ತಿರುವ ಪುಷ್ಪಲತಾ, ಸುಮೀಯಾ ಫಿರ್ದೋಸ್, ವಿಜಯಲಕ್ಷ್ಮೀ, ಜಯಶ್ರೀ, ಆರೋಗ್ಯ ಇಲಾ ಖೆಯ ನರ್ಸ್‍ಗಳಾದ ಲತಾಮಣಿ, ಮಾಲಾ, ಜಯಶೀಲಾ, ಪೌರಕಾರ್ಮಿಕರಾದ ಕವಿತಾ, ನಾಗಮ್ಮ, ಲಕ್ಷೀ, ಆರತಿ, ನಂಜುಂಡ, ಪೊಲೀಸ್ ಪೇದೆಗಳಾದ ವೆಂಕಟೇಶ್, ಆಂಜನೇಯ, ಪ್ರವೀಣ್‍ಕುಮಾರ್, ನಾಗೇಂದ್ರ, ಕೆಆರ್ ಆಸ್ಪತ್ರೆ ಕಿರಿಯ ವೈದ್ಯರಾದ ಡಾ.ಮಂಜು ನಾಥ್ ಭಾರ್ಗವ್, ಡಾ.ಚಂದ್ರಶೇಖರ್ ಅವರನ್ನು ಸನ್ಮಾನಿಸಿ, ಅಭಿನಂದಿಸಲಾಯಿತು.
ಕೊರೊನಾ ವಾರಿಯರ್ಸ್ ಹಾಗೂ ಜೆಪಿಯ ವರನ್ನು (ಎಸ್.ಜಯಪ್ರಕಾಶ್) ಸನ್ಮಾನಿಸಿದ ಶಾಸಕ ಎಲ್.ನಾಗೇಂದ್ರ ಮಾತನಾಡಿ, ಜೆಪಿ ಯವರು ಕೊರೊನಾ ವಾರಿಯರ್‍ಗಳನ್ನು ಸನ್ಮಾನಿಸುವ ಮೂಲಕ ಅರ್ಥಪೂರ್ಣ ವಾಗಿ ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿ ದ್ದಾರೆ. ಇದೊಂದು ಮಾದರಿಯ ನಡೆ. ಇವರು ಪಕ್ಷದ ನಿಷ್ಠಾವಂತ ನಾಯಕರಾ ಗಿದ್ದು, ಯಾವುದೇ ಕೆಲಸ ವಹಿಸಿದರೂ ಸಮರ್ಥವಾಗಿ ನಿರ್ವಹಿಸುತ್ತಾರೆ. ಇವರಿಗೆ ಶೀಘ್ರದಲ್ಲಿ ಉನ್ನತ ಸ್ಥಾನಮಾನಗಳು ರಾಜ ಕೀಯ ವಲಯದಲ್ಲಿ ಲಭಿಸುವಂತಾಗಲಿ ಎಂದು ಹಾರೈಸಿದರು.
ಕೊರೊನಾ ನಿಯಂತ್ರಿಸುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಸಂದೇಶ ವನ್ನು ಪ್ರತಿಯೊಬ್ಬರು ಪಾಲಿಸಬೇಕು. ನಮ್ಮ ದೇಶದಲ್ಲಿ ಕೊರೊನಾ ಆವರಿಸಿದ ಹಿನ್ನೆಲೆ ಯಲ್ಲಿ ಮಾಸ್ಕ್ ಧರಿಸುವ ಪರಿಪಾಠ ಬೆಳೆಸಿ ಕೊಂಡಿದ್ದೇವೆ. ಆದರೆ ಜಪಾನ್‍ನಲ್ಲಿ ನೂರಾರು ವರ್ಷಗಳಿಂದ ಮಾಸ್ಕ್ ಜೀವನ ಶೈಲಿಯ ಭಾಗವಾಗಿದೆ. ಆ ಮೂಲಕ ಅವರು ಸಾಂಕ್ರಾ ಮಿಕ ರೋಗಳನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಿದ್ದಾರೆ. ಹೀಗಾಗಿ ನಾವು ಮಾಸ್ಕ್ ಮಹತ್ವ ಅರಿತು ಕೊರೊನಾ ನಿಯಂತ್ರಿಸಲು ಮುಂದಾಗಬೇಕು. ಲಸಿಕೆ ಲಭ್ಯವಾಗುವವ ರೆಗೂ ಮುನ್ನೆಚ್ಚರಿಕೆಯೇ ಮದ್ದು ಎಂಬು ದನ್ನು ಮರೆಯಬಾರದು ಎಂದು ಹೇಳಿದರು.
ಬಿಜೆಪಿ ನಗರಾಧ್ಯಕ್ಷ ಟಿ.ಎಸ್.ಶ್ರೀವತ್ಸ ಮಾತನಾಡಿ, ಜೆಪಿ ಚಾಮರಾಜ ವಿಧಾನ ಸಭಾ ಕ್ಷೇತ್ರದ ಪ್ರಭಾವಿ ನಾಯಕರು. ಕೊರೊನಾ ವಿರುದ್ಧ ಹೋರಾಡುತ್ತಿರುವ ಬಂಧುಗಳನ್ನು ಅವರು ಸನ್ಮಾನಿಸುತ್ತಿರುವುದು ನಿಜಕ್ಕೂ ಪ್ರಶಂಸ ನೀಯ. ಪ್ರಧಾನಿ ಮೋದಿಯವರು ಮಾ.22 ರಂದು ಮನೆಯಲ್ಲೇ ಇರಿ ಎಂದು ದೇಶ ವಾಸಿಗಳಿಗೆ ಕರೆ ನೀಡಿದರು. ಆದರೆ ಕೊರೊನಾ ವಾರಿಯರ್‍ಗಳು ಮನೆಯಿಂದ ಹೊರ ಬಂದು ಕರ್ತವ್ಯ ನಿರ್ವಹಿಸಲೇಬೇಕಿತ್ತು. ಇವರ ಪರಿಶ್ರಮದಿಂದ ಇದೀಗ ಮೈಸೂರಿನಲ್ಲೂ ಸೋಂಕು ನಿಯಂತ್ರಣಕ್ಕೆ ಬರುತ್ತಿದೆ. ಇಂತಹ ಕ್ಷೇತ್ರದವರಿಗೆ ಅಭಿನಂದಿಸುವುದು ನಿಜಕ್ಕೂ ಒಂದು ದೊಡ್ಡ ಕಾರ್ಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
1986ರ ಸಂದರ್ಭದಲ್ಲಿ ನಾನು ಬನು ಮಯ್ಯ ಕಾಲೇಜು ವಿದ್ಯಾರ್ಥಿ ಸಂಘದ ಅಧ್ಯಕ್ಷನಾಗಿದ್ದ ವೇಳೆಯಲ್ಲಿ ಜೆಪಿಯವರು ವಿದ್ಯಾರ್ಥಿ ಸಮುದಾಯದ ಮುಖಂಡರು ಹಾಗೂ ಹೋರಾಟಗಾರರಾಗಿ ಶೈಕ್ಷಣಿಕ ಕ್ಷೇತ್ರದ ಹಲವು ಸಮಸ್ಯೆಗಳಿಗೆ ಪರಿಹಾರ ತಂದುಕೊಟ್ಟವರು. ಮಾಜಿ ಸಚಿವ ಜೀವ ರಾಜ್ ಆಳ್ವಾ ಅವರೊಂದಿಗೆ ಗುರುತಿಸಿ ಕೊಂಡ ಇವರು ರಾಜಕೀಯ ಹಾಗೂ ಸಿನಿಮಾ ರಂಗದಲ್ಲಿ ಬದ್ಧತೆಯಿಂದ ಸೇವೆ ಸಲ್ಲಿಸುತ್ತಿದ್ದಾರೆ ಎಂದು ನುಡಿದರು.
ಬಿಜೆಪಿ ಜಿಲ್ಲಾಧ್ಯಕ್ಷೆ ಹಾಗೂ ಜಿಪಂ ಸದಸ್ಯೆ ಮಂಗಳಾ ಸೋಮಶೇಖರ್ ಮಾತನಾಡಿ, ಜೆಪಿ ಎಂದೇ ಚಿರಪರಿಚಿತರಾದ ಜಯ ಪ್ರಕಾಶ್ ಅವರು ರಾಜಕೀಯ ಹಾಗೂ ಸಿನಿಮಾ ರಂಗ ಎರಡರಲ್ಲೂ ತಮ್ಮ ಸೇವೆ ಸಲ್ಲಿಸುತ್ತಿದ್ದಾರೆ. ಈ ಎರಡೂ ಕ್ಷೇತ್ರದಲ್ಲೂ ಇವರಿಗೆ ಯಶಸ್ಸು ಲಭಿಸಲಿ ಎಂದು ಹಾರೈಸಿ ದರು. ಸಿನಿಮಾ ನಟಿಯರಾದ ಶಿಲ್ಪ, ಬಿಂದು, ಪ್ರತಿಮಾ, ಎಸ್.ಅನು, ಶಮಾ, ಬಿಜೆಪಿ ಮುಖಂಡರಾದ ಮಹೇಶ್ ನಾಯಕ, ಹನುಮಂತೇಗೌಡ, ವಿಜಯಾಂಬಿಕಾ, ರುಕ್ಮಿಣಿ, ಮಹೇಶ್‍ಗೌಡ, ಚಲನಚಿತ್ರ ನಿರ್ಮಾಪಕ ಚೇತನ್ ರಮೇಶ್, ನಿರ್ದೇಶಕ ಶಿವಾಜಿ, ಛಾಯಾಗ್ರಾಹಕರಾದ ಮಹೇಶ್ ತಲಕಾಡ್, ಮನುಸಮರ್ಥ್, ಮಾಜಿ ಪಾಲಿಕೆ ಸದಸ್ಯ ಉಮೇಶ್, ಜೆಪಿಯವರ ಸಹೋದರ ಚೇತನ್ ಸೇರಿದಂತೆ ಬಿಜೆಪಿ ಕಾರ್ಯ ಕರ್ತರು, ಜೆಪಿಯವರ ಅಭಿಮಾನಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.