ಕೆಜಿ ಕೊಪ್ಪಲಿನಲ್ಲಿ ಆಸ್ತಿ ಸರ್ವೇ ಕಾರ್ಯ ಆರಂಭಿಸಿದ ಪಾಲಿಕೆ
ಮೈಸೂರು

ಕೆಜಿ ಕೊಪ್ಪಲಿನಲ್ಲಿ ಆಸ್ತಿ ಸರ್ವೇ ಕಾರ್ಯ ಆರಂಭಿಸಿದ ಪಾಲಿಕೆ

October 29, 2020

ಮೈಸೂರು, ಅ.28(ಪಿಎಂ)- ಮೈಸೂರು ಮಹಾ ನಗರ ಪಾಲಿಕೆ ವಲಯ ಕಚೇರಿ 3ರ ವತಿಯಿಂದ ವಾರ್ಡ್ 42ರ ಕೆಜಿ ಕೊಪ್ಪಲಿನಲ್ಲಿ ಆಸ್ತಿ ತೆರಿಗೆ ಸಂಗ್ರಹ ಸಂಬಂಧ ನ.4ರಿಂದ 11ರವರೆಗೆ ಕಂದಾಯ ಅದಾಲತ್ ನಡೆಯಲಿದೆ. ಪೂರ್ವಭಾವಿಯಾಗಿ ಐದು ದಿನಗಳ ಆಸ್ತಿ ಸರ್ವೆ ಕಾರ್ಯಕ್ಕೆ ವಾರ್ಡಿನಲ್ಲಿ ಬುಧವಾರ ಚಾಲನೆ ನೀಡಲಾಯಿತು.

`ಪಾಲಿಕೆ ನಡೆ-ಕೆಜಿ ಕೊಪ್ಪಲು ಕಡೆ’ ಶೀರ್ಷಿಕೆ ಯಡಿ ಕನ್ನೇಗೌಡನ ಕೊಪ್ಪಲು 5ನೇ ಕ್ರಾಸ್‍ನಲ್ಲಿರುವ ಶ್ರೀ ಸಿದ್ದಪ್ಪಾಜಿ ದೇವಸ್ಥಾನ ಆವರಣದಲ್ಲಿ ತಾತ್ಕಾ ಲಿಕವಾಗಿ ಕಚೇರಿ ತೆರೆದು ಕಂದಾಯ ಅದಾಲತ್‍ಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ಕಚೇರಿಯು ನ.4-11ರವರೆಗೆ ಪ್ರತಿದಿನ ಬೆಳಗ್ಗೆ 10ರಿಂದ ಸಂಜೆ 4ರವ ರೆಗೆ ಕಾರ್ಯನಿರ್ವಹಿಸಲಿದೆ. ಸರ್ಕಾರಿ ರಜೆ ದಿನ ಗಳಾದ ಅ.30, 31 ಹಾಗೂ ನ.1 ಸೇರಿದಂತೆ ಒಟ್ಟು 5 ದಿನ ಪಾಲಿಕೆ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ ಮನೆ ಮನೆಗೆ ತೆರಳಿ ಆಸ್ತಿ ಹಾಗೂ ತೆರಿಗೆ ವಿವರ ಕಲೆ ಹಾಕಿ ಆನ್‍ಲೈನ್‍ನಲ್ಲಿ ದಾಖಲಿಸಲಿದೆ.

ಬುಧವಾರ ಇಲ್ಲಿನ ಚಂದ್ರಮೌಳೇಶ್ವರ ಸ್ವಾಮಿ ದೇವಸ್ಥಾನದ ಬಳಿ ಸರ್ವೆ ಕಾರ್ಯದ ಪರಿವೀಕ್ಷಣೆ ನಡೆಸಿದ ವಲಯ ಆಯುಕ್ತ ಸತ್ಯಮೂರ್ತಿ ಮಾಧ್ಯಮ ದವರೊಂದಿಗೆ ಮಾತನಾಡಿದರು. ಕೋವಿಡ್ ಹಿನ್ನೆಲೆ ಯಲ್ಲಿ ಇಲ್ಲಿನ ಜನರು ನಗರ ಪಾಲಿಕೆ ಕಚೇರಿಗೆ ಭೇಟಿ ನೀಡಿ ಆಸ್ತಿ ತೆರಿಗೆ ಪಾವತಿಸಲು ಹಿಂದೇಟು ಹಾಕು ತ್ತಿದ್ದಾರೆ. ಹೀಗಾಗಿ ವಾರ್ಡಿನಲ್ಲೇ ತಾತ್ಕಾಲಿಕವಾಗಿ ಕಚೇರಿ ಆರಂಭಿಸಿ ತೆರಿಗೆ ಪಾವತಿಗೆ ಅನುಕೂಲ ಕಲ್ಪಿಸ ಲಾಗುತ್ತಿದೆ ಎಂದರು. ಆಸ್ತಿ ಹಾಗೂ ತೆರಿಗೆ ವಿವರ ಕಲೆ ಹಾಕಿ ಆನ್‍ಲೈನ್‍ನಲ್ಲಿ ದಾಖಲಿಸುವ ಸಲುವಾಗಿ ಐದು ದಿನಗಳ ಸರ್ವೆ ಕಾರ್ಯವನ್ನೂ ಇಂದು ಆರಂಭಿಸಿದ್ದೇವೆ. ವಲಯ ಕಚೇರಿ ವ್ಯಾಪ್ತಿಯ ಎಲ್ಲಾ ಕಂದಾಯ ಸಿಬ್ಬಂದಿಯನ್ನು ಈ ವಾರ್ಡ್‍ಗೆ ನಿಯೋ ಜನೆ ಮಾಡಲಾಗಿದೆ ಎಂದು ಹೇಳಿದರು.

 

Translate »