ಮೈಸೂರು, ಮೇ 3- ಅಂತರ ಜಿಲ್ಲೆ ಹಾಗೂ ರಾಜ್ಯಗಳಿಗೆ ಸಂಚರಿಸುವವರನ್ನು ವೈದ್ಯಕೀಯ ಪರೀಕ್ಷೆ ನಡೆಸಿ, 14 ದಿನಗಳ ಹೋಂ ಕ್ವಾರಂ ಟೈನ್‍ಗೆ ಸೂಚಿಸಲಾಗುವುದು ಎಂದು ಜಿಲ್ಲಾ ಧಿಕಾರಿ ಅಭಿರಾಮ್ ಜಿ.ಶಂಕರ್ ತಿಳಿಸಿದರು.
ಫೇಸ್‍ಬುಕ್ ಲೈವ್‍ನಲ್ಲಿ ಮಾಹಿತಿ ನೀಡಿದ ಅವರು, ಅಂತರ ಜಿಲ್ಲೆ ಹಾಗೂ ರಾಜ್ಯಕ್ಕೆ ಅಗತ್ಯವಾಗಿ ಹೋಗ ಲೇಬೇಕು ಎನ್ನುವವರಿಗೆ ಪಾಸ್ ವ್ಯವಸ್ಥೆಯಿದೆ. ಈ ಕಡೆಯಿಂದ ಹೋಗಲು ಅವಕಾಶವಿದೆಯೇ ಹೊರತು ವಾಪಸ್ ಬರುವಂತಿಲ್ಲ. ಹೀಗೆ ಬೇರೆ ಜಿಲ್ಲೆ ಹಾಗೂ ರಾಜ್ಯಕ್ಕೆ ಹೋಗುವವರು ಹಾಗೂ ಬೇರೆ ಕಡೆಯಿಂದ ನಮ್ಮ ಜಿಲ್ಲೆಗೆ ಬರುವವರು 14 ದಿನ ಹೋಂ ಕ್ವಾರಂಟೈನ್‍ನಲ್ಲಿ ಕಡ್ಡಾಯವಾಗಿ ಇರಲೇ ಬೇಕು. ನಮ್ಮ ಜಿಲ್ಲೆಗೆ ಖಾಸಗಿ ವಾಹನ ಹಾಗೂ ಸಾರಿಗೆ ವಾಹನಗಳಿಂದ ಬರುವವರಿಗೆ ಪ್ರತ್ಯೇಕವಾಗಿ ಎಂಟ್ರಿ ಪಾಯಿಂಟ್ ಮಾಡಲಾಗುತ್ತದೆ. ಅಲ್ಲಿ ಸ್ಕ್ರೀನಿಂಗ್ ನಡೆಸಿ, ರೋಗಲಕ್ಷಣ ಇದ್ದವರು ಹಾಗೂ ಇಲ್ಲದವರ ಬೇರ್ಪಡಿಸಲಾಗುತ್ತದೆ. ಇಲ್ಲದವರಿಗೆ ಸೀಲಿಂಗ್ ಮಾಡಿ, ಹೋಂ ಕ್ವಾರಂಟೈನ್‍ಗೆ ಕಳು ಹಿಸಲಾಗುತ್ತದೆ. ರೋಗ ಲಕ್ಷಣ ಇದ್ದವರಲ್ಲಿ ಅಗತ್ಯ ವಿದ್ದರೆ ಮಾತ್ರ ಗಂಟಲು ದ್ರವ ಪರೀಕ್ಷೆ ನಡೆಸಲಾಗು ತ್ತದೆ. ಈ ಸಂಬಂಧ ಎಲ್ಲಾ ಅಧಿಕಾರಿಗಳಿಗೂ ತರ ಬೇತಿ ನೀಡಲಾಗಿದೆ. ಅಂತರ ರಾಜ್ಯಕ್ಕೆ ಸಂಚಾರ ಮಾಡ ಬೇಕಾದರೆ ಸೇವಾಸಿಂಧು
ವೆಬ್‍ಸೈಟ್ ಮೂಲಕ ಅರ್ಜಿ ಸಲ್ಲಿಸಬೇಕು. ಎರಡೂ ರಾಜ್ಯಗಳ ನೋಡಲ್ ಅಧಿಕಾರಿಗಳ ಒಪ್ಪಿಗೆ ದೊರೆತರೆ ಮಾತ್ರ ಸಂಚಾರಕ್ಕೆ ಅವಕಾಶವಾಗುತ್ತದೆ. ಇದಕ್ಕಾಗಿ ಏಕಗವಾಕ್ಷಿ (ಸಿಂಗಲ್ ವಿಂಡೋ) ವ್ಯವಸ್ಥೆ ಮಾಡುವ ಚಿಂತನೆಯಿದೆ. ಒಟ್ಟಾರೆ ಹೊರ ಜಿಲ್ಲೆ ಹಾಗೂ ರಾಜ್ಯಗಳÀ ನಡುವೆ ಸಂಚರಿಸಬೇಕಾದರೆ 2 ವಾರಗಳ ಕ್ವಾರಂಟೈನ್‍ಗೆ ಸಿದ್ಧರಾಗಿರಬೇಕು ಎಂದರು. ಈ ಸಂಬಂಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ಮಾತನಾಡಿ, ಗ್ರಾಮಾಂತರ ಪ್ರದೇಶದಲ್ಲಿ ಅಗತ್ಯ ವಸ್ತುಗಳ ಮಾರಾಟ ಹೊರತುಪಡಿಸಿ ಉಳಿದೆಲ್ಲಾ ವ್ಯಾಪಾರ ವಹಿವಾಟಿಗೆ ಸಂಜೆ 4ರವರೆಗೆ ಮಾತ್ರ ಅವಕಾಶವಿರುತ್ತದೆ. ಮೈಸೂರು ಜಿಲ್ಲೆಗೆ ಸಂಪರ್ಕಿಸುವ ಕೆಲವು ರಸ್ತೆಗಳಲ್ಲಿ ಮಾತ್ರ ಸಂಚಾರಕ್ಕೆ ಅವಕಾಶವಿದ್ದು, ಉಳಿದ ರಸ್ತೆಗಳನ್ನು ಬಂದ್ ಮಾಡಲಾಗು ತ್ತದೆ. ಗುಂಡ್ಲುಪೇಟೆ ಕಡೆಯಿಂದ ಚಾಮರಾಜನಗರ, ಸಂತೇಮರಳ್ಳಿ, ಮೂಗೂರು ಮೂಲಕ ಬರಬೇಕು. ಕೊಡಗಿನ ಕುಟ್ಟಾ, ನಾಪೋಕ್ಲು, ಸೂಳ್ಯ ಯಾವ ಕಡೆಯಿಂದಾದರೂ ಕೊಪ್ಪ ಮೂಲಕವೇ ಬರಬೇಕು. ಹಾಸನದಿಂದ ದೊಡ್ಡಹಳ್ಳಿ ಮುಖ್ಯರಸ್ತೆ ಚೆಕ್‍ಪೋಸ್ಟ್ ಕಡೆಯಿಂದ ಮಾತ್ರ ಮೈಸೂರಿಗೆ ಬರಲು ಅವಕಾಶವಿದೆ ಎಂದು ತಿಳಿಸಿದರು.