ಮೈಸೂರು, ಮಾ.7-ತಾಲೂಕಿನ ವಿಜಯ ಪುರ ಸೇರಿದಂತೆ ನಂಜನಗೂಡು ಹಾಗೂ ಹುಣಸೂರಿನ ವಿವಿಧೆಡೆ ಮಹಿಳಾ ಗ್ರಾಮ ಸಭೆಗಳ ಮೂಲಕ ವಿಶ್ವ ಮಹಿಳಾ ದಿನ ಆಚರಿಸಲಾಯಿತು.
ತಾಲೂಕಿನ ಜಯಪುರ ಹೋಬಳಿಯ ವಿಜಯಪುರ ಗ್ರಾಮ ಪಂಚಾಯಿತಿಯಲ್ಲಿ ಆಯೋಜಿಸಿದ್ದ ಮಹಿಳಾ ಗ್ರಾಮಸಭೆ ಉದ್ಘಾ ಟಿಸಿದ ಜಯಪುರ ಸಮುದಾಯ ಆರೋಗ್ಯ ಕೇಂದ್ರದ ಆರೋಗ್ಯ ನಿರೀಕ್ಷಕ ಡಾ.ದಿನೇಶ್, ಸರ್ಕಾರಿ ಆಸ್ಪತ್ರೆಯಲ್ಲಿ ಲಭ್ಯವಿರುವ ಸವ ಲತ್ತುಗಳು ಸೇರಿದಂತೆ ಮಹಿಳೆಯರಿಗೆ ಕೇಂದ್ರ-ರಾಜ್ಯ ಸರ್ಕಾರಗಳು ಜಾರಿಗೆ ತಂದಿ ರುವ ಮಾತೃಪೂರ್ಣ, ಮಾತೃ ವಂದನಾ, ಮಾತೃಶ್ರೀ ಯೋಜನೆಗಳ ಕುರಿತು ಮಾಹಿತಿ ನೀಡಿದರು. ಬಾಲ್ಯವಿವಾಹ ತಡೆ ಕುರಿತು ಜಾಗೃತಿ ಮೂಡಿಸಿದರು.
ಪಿಡಿಓ ನರಹರಿ ಮಾತನಾಡಿದರು. ಈ ಸಂದರ್ಭದಲ್ಲಿ ಗ್ರಾಪಂ ಕಾರ್ಯದರ್ಶಿ ವಿಮಲಾ ವಿನ್ನಿ ಬಸವಾರಾಧ್ಯ, ಗ್ರಾಪಂ ಸಿಬ್ಬಂದಿ ಮತ್ತು ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತೆಯರಿದ್ದರು.
ನಂಜನಗೂಡು ವರದಿ: ತಾಲೂಕಿನ ಕೂಡ್ಲಾಪುರ ಗ್ರಾಮದ ಸರ್ಕಾರಿ ಪ್ರೌಢ ಶಾಲಾ ಆವರಣದಲ್ಲಿ ಆಯೋಜಿಸಿದ್ದ ಮಹಿಳಾ ಗ್ರಾಮ ಸಭೆಯಲ್ಲಿ ಬಾಲ್ಯ ವಿವಾಹ ಪದ್ಧತಿ ಸಂಪೂರ್ಣವಾಗಿ ನಿಷೇಧವಾದಾಗ ಮಾತ್ರ ಮಹಿಳಾ ದಿನಾಚರಣೆಗೆ ಅರ್ಥ ಬರುತ್ತದೆ. ಈ ನಿಟ್ಟಿನಲ್ಲಿ ಎಲ್ಲರೂ ಜಾಗೃತರಾಗ ಬೇಕು ಎಂದು ಬಾಲ ವಿಕಾಸನ ಯೋಜನಾ ಧಿಕಾರಿ ಮಂಜುಳಾ ಕರೆ ನೀಡಿದರು.
ವಕೀಲೆ ಅಶ್ವಿನಿ ಮಾತನಾಡಿ, ಮಹಿಳೆಯರ ಹಕ್ಕುಗಳ ರಕ್ಷಣೆಗೆ ಕಾನೂನುಗಳಿದ್ದು, ಉಚಿತ ಕಾನೂನು ನೆರವು ದೊರೆಯಲಿದೆ ಎಂದು ತಿಳಿಸಿದರು.
ತಾಪಂ ಇಓ ಶ್ರೀಕಂಠರಾಜೇಅರಸ್, ಅಕ್ಷರ ದಾಸೋಹ ಅಧಿಕಾರಿ ಮಲ್ಲಿ ಕಾರ್ಜುನಸ್ವಾಮಿ, ನಿವೃತ್ತ ಬ್ಯಾಂಕ್ ಅಧಿಕಾರಿ ರಾಜೇಂದ್ರ, ಆರೋಗ್ಯ ಇಲಾಖೆಯ ಅಶ್ವಿನಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಮಹಿಳೆಯರಿಂದ ಶಾಲೆ ಆವರಣದಲ್ಲಿ ಸಸಿಗಳನ್ನು ನೆಡ ಲಾಯಿತು. ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷ ಸಿದ್ದರಾಜು, ಕೂಡ್ಲಾಪುರ ಪಿಡಿಓ ಪ್ರಮಿಳಾ, ಉಪಾಧ್ಯಕ್ಷ ಗುರುಸಿದ್ದಮ್ಮ, ಸದಸ್ಯರಾದ ಶಾಂತಮ್ಮ, ಗೌರಿ, ಮಹದೇವಯ್ಯ, ಶಾಲಾ ಮುಖ್ಯಶಿಕ್ಷಕ ಮಹೇಶ್, ಮಹಿಳಾ ಸ್ವಸಹಾಯ ಸಂಘ, ಅಂಗನವಾಡಿ, ಆಶಾ ಕಾರ್ಯಕರ್ತರು, ವಿದ್ಯಾರ್ಥಿನಿಯರಿದ್ದರು.
ಹುಣಸೂರು ವರದಿ: ತಾಲೂಕಿನ ಬನ್ನಿ ಕುಪ್ಪೆ ಗ್ರಾಪಂ ಆವರಣದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚಾರಣೆ ಅಂಗವಾಗಿ ನಡೆದ ಗ್ರಾಮಸಭೆ ಉದ್ಘಾಟಿಸಿ ಹುಣಸೂರು ಸಹಾಯಕ ಲೆಕ್ಕಾಧಿಕಾರಿ ಗೀತಾ ಮಾತ ನಾಡಿದರು. ಮಹಿಳೆಯರು ಶಿಕ್ಷಣ ಪಡೆ ಯುವ ಮೂಲಕ ಮುಖ್ಯವಾಹಿನಿಗೆ ಬರ ಬೇಕು ಎಂದು ಕರೆ ನೀಡಿದರು. ಮಹಿಳಾ ಒಕ್ಕೂಟದ ಮಾಜಿ ಅಧ್ಯಕ್ಷೆ ಸುಶೀಲಾ ಮಾತ ನಾಡಿದರು. ಪಿಡಿಓ ಎಂ.ಕೆ.ಗಣೇಶ ಮೂರ್ತಿ, ಕಾರ್ಯದರ್ಶಿ ಚಂದ್ರು, ಮಹಿಳಾ ಒಕ್ಕೂಟದ ಪದಾಧಿಕಾರಿಗಳಿದ್ದರು.