ವೈಜ್ಞಾನಿಕ ವಿಧಾನದಲ್ಲಿ ಪ್ರಕರಣದ ತನಿಖೆ
ಮೈಸೂರು

ವೈಜ್ಞಾನಿಕ ವಿಧಾನದಲ್ಲಿ ಪ್ರಕರಣದ ತನಿಖೆ

August 27, 2021

ಮೈಸೂರು, ಆ.೨೬(ಎಂಟಿವೈ)-ಚಾಮುಂಡಿಬೆಟ್ಟದ ತಪ್ಪಲಿನಲ್ಲಿ ನಡೆದ ಸಾಮೂ ಹಿಕ ಅತ್ಯಾಚಾರ ಪ್ರಕರಣದ ತನಿಖೆಯನ್ನು ವೈಜ್ಞಾನಿಕ ವಿಧಾನದಲ್ಲಿ ನಡೆಸಲು ಪೊಲೀಸರು ಮುಂದಾಗಿದ್ದಾರೆ. ಅತ್ಯಾಚಾರ ನಡೆದ ಸ್ಥಳದಲ್ಲಿ ಆರೋಪಿಗಳ ಕೂದಲು ಸೇರಿದಂತೆ ದೊರೆತಿರುವ ಇತರೆ ವಸ್ತುಗಳನ್ನು ಸಂಗ್ರಹಿಸಿರುವ ಪೊಲೀಸರು ಅದನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿ ವೈಜ್ಞಾನಿಕ ಸಾಕ್ಷö್ಯಗಳನ್ನು ಕಲೆ ಹಾಕಲು ಮುಂದಾಗಿದ್ದಾರೆ. ಈ ನಿಟ್ಟಿನಲ್ಲಿ ಸ್ಥಳೀಯ ಪೊಲೀಸರ ನೆರವಿನೊಂದಿಗೆ ವಿಧಿವಿಜ್ಞಾನ ವಿಭಾಗದ ಪೊಲೀಸರು ಘಟನೆ ನಡೆದ ಸ್ಥಳದಲ್ಲಿ ಸಾಕ್ಷö್ಯಗಳಿಗಾಗಿ ಕೂಲಂಕುಶವಾಗಿ ಪರಿಶೀಲನೆ ನಡೆಸುತ್ತಿದ್ದಾರೆ. ಅತ್ಯಾಚಾರ ನಡೆದ ಸ್ಥಳ, ಯುವಕನ ಮೇಲೆ ಹಲ್ಲೆ ನಡೆದ ಸ್ಥಳ ಹಾಗೂ ವಿದ್ಯಾರ್ಥಿನಿಯನ್ನು ಅತ್ಯಾಚಾರಿಗಳು ಎಳೆದಾಡಿದ ಸ್ಥಳಗಳಲ್ಲಿನ ಕುರುಹುಗಳನ್ನು ವೈಜ್ಞಾನಿಕ ರೀತಿ ಸಂಗ್ರಹಿಸುವ ಕಾರ್ಯ ದಲ್ಲಿ ತೊಡಗಿದ್ದಾರೆ. ಈ ಸ್ಥಳದಲ್ಲಿ ಕುರುಹುಗಳು ನಾಶವಾಗವಾಗಬಾರದೆಂಬ ದೃಷ್ಟಿಯಿಂದ ಕುರಿಗಾಹಿಗಳು ಹಾಗೂ ದನಗಾಹಿಗಳುಸೇರಿದಂತೆ ಸಾರ್ವಜನಿಕರು ಸ್ಥಳಕ್ಕೆ ತೆರಳದಂತೆ ಪೊಲೀಸರ ತಂಡ ಎಚ್ಚರ ವಹಿಸಿದೆ. ಘಟನಾ ಸ್ಥಳದಲ್ಲಿ ಮದ್ಯದ ಖಾಲಿ ಬಾಟಲಿಗಳು ಹಾಗೂ ಪೌಚ್‌ಗಳು ಪತ್ತೆಯಾಗಿದ್ದು, ಅದರ ಮೇಲಿರುವ ಬಾರ್ ಕೋಡ್‌ಗಳ ಆಧಾರದ ಮೇರೆಗೆ ಅವುಗಳು ಯಾವ ಮದ್ಯದ ಅಂಗಡಿಯಲ್ಲಿ ಮಾರಾಟವಾಗಿದೆ ಎಂಬುದನ್ನು ಪತ್ತೆ ಮಾಡಲು ಪೊಲೀಸರು ಅಬಕಾರಿ ಇಲಾಖೆಯ ನೆರವನ್ನೂ ಪಡೆದಿದ್ದಾರೆ. ಸದರಿ ಮದ್ಯ ಮಾರಾಟವಾದ ಅಂಗಡಿಯಲ್ಲಿರುವ ಸಿಸಿ ಕ್ಯಾಮರಾಗಳಲ್ಲಿ ಸೆರೆಯಾಗಿರುವ ದೃಶ್ಯಗಳನ್ನು ಸಂಗ್ರಹ ಮಾಡುವ ನಿಟ್ಟಿನಲ್ಲಿ ಪೊಲೀಸರ ಒಂದು ತಂಡ ಕಾರ್ಯೋನ್ಮುಖವಾಗಿದೆ.

ತಂತ್ರಜ್ಞಾನದ ಮೊರೆ: ವೈಜ್ಞಾನಿಕ ತನಿಖೆಯ ಜೊತೆಗೆ ತಂತ್ರಜ್ಞಾನದ ನೆರವಿನಿಂದಲೂ ತನಿಖೆ ಸಾಗಿದೆ. ಅತ್ಯಾಚಾರ ನಡೆದ ಸ್ಥಳಕ್ಕೆ ಸಮೀಪವಿರುವ ಮೊಬೈಲ್ ಟವರ್‌ನಿಂದ ಚಾಲು ಆಗಿರುವ ಮೊಬೈಲ್ ಸಂಖ್ಯೆಗಳನ್ನು ಸೈಬರ್ ಕ್ರೈಂ ವಿಭಾಗದ ಪೊಲೀಸರು ಸಂಗ್ರಹಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಹಾಗೇ ಕಾರ್ಯ ನಿರ್ವಹಿಸಿರುವ ಮೊಬೈಲ್‌ಗಳು ಎಷ್ಟು ಕಾಲ ಒಂದೇ ಸ್ಥಳದಲ್ಲಿ ಚಾಲು ಆಗಿದ್ದವು. ಆ ಮೊಬೈಲ್‌ಗಳ ಚಲನೆ ಬಗ್ಗೆಯೂ ಮಾಹಿತಿ ಸಂಗ್ರಹ ಕಾರ್ಯ ನಡೆಯುತ್ತಿದೆ.

ಅನುಮಾನಾಸ್ಪದವಾದ ಮೊಬೈಲ್‌ಗಳ ವಾರಸುದಾರರನ್ನು ಪತ್ತೆ ಹಚ್ಚಿ ಅಂತಹವರನ್ನು ಕರೆದು ವಿಚಾರಣೆಗೊಳಪಡಿಸಲಾಗುತ್ತಿದೆ. ಸದರಿ ಟವರ್‌ನಲ್ಲಿ ಕಾರ್ಯ ನಿರ್ವಹಿಸಿದ ಮೊಬೈಲ್‌ಗಳು ಘಟನೆ ನಂತರ ಸ್ವಿಚ್‌ಆಫ್ ಆಗಿರುವ ಬಗ್ಗೆಯೂ ವಿಶೇಷವಾಗಿ ಪೊಲೀಸರು ಗಮನ ಹರಿಸಿದ್ದಾರೆ ಎಂದು ವಿಶ್ವಾಸಾರ್ಹ ಮೂಲಗಳು ತಿಳಿಸಿವೆ. ಒಟ್ಟಾರೆ ಈ ಪ್ರಕರಣಕ್ಕೆ ಸಂಬAಧಿಸಿದAತೆ ಎಲ್ಲಾ ಆಯಾಮಗಳಲ್ಲೂ ಪೊಲೀಸರ ವಿವಿಧ ತಂಡಗಳು ತನಿಖೆಯಲ್ಲಿ ತೊಡಗಿವೆ.

ಬಂದಿರುವುದAತೂ ಖಚಿತಪಟ್ಟಿದೆ. ಚಿನ್ನಾಭರಣ ಅಂಗಡಿಯಲ್ಲಿ ದೊರೆತ ಬೆರಳಚ್ಚು ಆಧಾರದ ಮೇರೆಗೆ ಮುಂಬೈ ಮೂಲದ ಓರ್ವ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆದರೆ ಇದನ್ನು ಪೊಲೀಸರು ಅಲ್ಲಗಳೆದಿದ್ದಾರೆ.

Translate »