ಶುಕ್ರವಾರವೇ ಬೊಮ್ಮಾಯಿ ಸಂಪುಟ ಪುರ‍್ರಚನೆ?
ಮೈಸೂರು

ಶುಕ್ರವಾರವೇ ಬೊಮ್ಮಾಯಿ ಸಂಪುಟ ಪುರ‍್ರಚನೆ?

May 17, 2022

ಬೆಂಗಳೂರು: ಬಹು ನಿರೀಕ್ಷಿತ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ನೇತೃ ತ್ವದ ಸಂಪುಟ ಪುರ‍್ರಚನೆ ಶುಕ್ರವಾರ (ಮೇ ೨೦) ನಡೆಯಲಿದೆ ಎಂದು ನಂಬಲರ್ಹ ಮೂಲಗಳು ತಿಳಿಸಿವೆ.

ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಚುನಾವಣೆ ಸಂಬAಧ ನಾಳೆ ಹೈಕೋರ್ಟ್ನಲ್ಲಿ ರಿಟ್ ಅರ್ಜಿ ವಿಚಾರಣೆಗೆ ಬರಲಿದ್ದು, ಒಂದು ವೇಳೆ ಕೋರ್ಟ್ ಚುನಾವಣೆಗೆ ಹಸಿರು ನಿಶಾನೆ ತೋರಿದರೆ ಶೀಘ್ರವೇ ಅಧಿಸೂಚನೆ ಹೊರ ಡಿಸಬೇಕಾಗುತ್ತದೆ.

ಅಲ್ಲದೇ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದಾವೋಸ್ ಪ್ರವಾಸಕ್ಕೆ ತೆರಳು ತ್ತಿರುವ ಹಿನ್ನೆಲೆಯಲ್ಲಿ ಸಂಪುಟ ಪುರ‍್ರಚನೆಗೆ ಮುಂದೆ ಸಮಯಾವಕಾಶ ದೊರಕದೆ, ಮತ್ತೆ ನೆನೆಗುದಿಗೆ ಬೀಳುವ ಸಾಧ್ಯತೆಯೂ ಇದೆ. ಅಲ್ಲದೇ, ಈಗ ಯಾವುದೇ ಚುನಾವಣೆಗೆ ಹೋಗಬೇಕಿದ್ದರೂ ಸಮರ್ಥ ತಂಡವನ್ನು ಅಣ ಗೊಳಿಸಬೇಕಾದ ಅನಿವಾರ್ಯತೆ ಇದ್ದು, ಯುವ ತಂಡವನ್ನು ಸಜ್ಜುಗೊಳಿಸುವ ಉದ್ದೇಶವೂ ಇದೆ. ಹಾಗಾಗಿ ಬಿ.ವೈ. ವಿಜಯೇಂದ್ರ ಸೇರಿದಂತೆ ಯುವ ಶಾಸಕರನ್ನು ಸಂಪುಟಕ್ಕೆ ಸೇರ್ಪಡೆಗೊಳಿಸಿ, ಸ್ಥಳೀಯ ಸಂಸ್ಥೆ ಚುನಾವಣೆ ಮೂಲಕ ವಿಧಾನಸಭೆ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುವ ತವಕದಲ್ಲಿದ್ದಾರೆ. ಹಾಗಾಗಿ ಶುಕ್ರವಾರವೇ ಸಂಪುಟ ಪುರ‍್ರಚನೆಗೆ ಪ್ರಶಸ್ತವಾಗಿದ್ದು, ಅಂದೇ ವರಿಷ್ಠರ ಸೂಚನೆಯಂತೆ ಸಿಎಂ ಬೊಮ್ಮಾಯಿ ಸಂಪುಟಕ್ಕೆ ಸರ್ಜರಿ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

 

Translate »