ಸಭಾಪತಿ ಸ್ಥಾನಕ್ಕೆ ಹೊರಟ್ಟಿ ರಾಜೀನಾಮೆಇಂದು ಬಿಜೆಪಿ ಸೇರ್ಪಡೆ
ಮೈಸೂರು

ಸಭಾಪತಿ ಸ್ಥಾನಕ್ಕೆ ಹೊರಟ್ಟಿ ರಾಜೀನಾಮೆಇಂದು ಬಿಜೆಪಿ ಸೇರ್ಪಡೆ

May 17, 2022

ಬೆಂಗಳೂರು: ವಿಧಾನಪರಿಷತ್ ಸಭಾ ಪತಿ ಸ್ಥಾನಕ್ಕೆ ಮತ್ತು ಪರಿ ಷತ್ ಸದಸ್ಯತ್ವಕ್ಕೆ ಬಸವ ರಾಜ ಹೊರಟ್ಟಿ ರಾಜೀ ನಾಮೆ ನೀಡಿದ್ದು, ನಾಳೆ ಬಿಜೆಪಿ ಸೇರುವುದಾಗಿ ಘೋಷಿಸಿದ್ದಾರೆ. ವಿಧಾನಸೌಧದ ಸಭಾ ಪತಿ ಕಚೇರಿಯಲ್ಲಿ ಗೋಷ್ಠಿ ನಡೆಸಿದ ಬಸವ ರಾಜ ಹೊರಟ್ಟಿ, ಸಭಾಪತಿ ಸ್ಥಾನಕ್ಕೆ ಹಾಗೂ ಪರಿಷತ್ ಸದಸ್ಯತ್ವಕ್ಕೆರಾಜೀನಾಮೆ ನೀಡುವುದಾಗಿ ಘೋಷಿಸಿದರಲ್ಲದೆ, ಮಂಗಳವಾರ ಬಿಜೆಪಿ ಸೇರ್ಪಡೆ ಯಾಗುವುದಾಗಿಯೂ ತಿಳಿಸಿದರು. ಪರಿಷತ್ ಸಚಿವಾಲಯದ ಆಡಳಿತದಲ್ಲಿ ಪ್ರಾಮಾಣ ಕ ಪಾರದರ್ಶಕತೆಗೆ ಆದ್ಯತೆ ನೀಡಿದ್ದೇನೆ. ಕಲುಷಿತವಾದ ರಾಜಕಾರಣದಲ್ಲಿ ನಮ್ಮಂತವರಿಗೆ ನೋವು ಆಗಿದೆ. ಆದರೆ ಮನಸ್ಸು ಇಲ್ಲದೆ ಇದ್ದರೂ ರಾಜಕೀಯದಲ್ಲಿ ಇರಬೇಕಾಗುತ್ತದೆ ಎಂದರು. ಬಿಜೆಪಿ ಸೇರ್ಪಡೆ ಸಂಬAಧಿಸಿದAತೆ ಯಾವುದೇ ಷರತ್ತು ಹಾಕಿಲ್ಲ.ಅಮಿತ್ ಶಾ ಭೇಟಿ ವೇಳೆ ಯಾವುದೇ ಚರ್ಚೆ ಆಗಿಲ್ಲ ಎಂದರು. ಬಿಜೆಪಿ ರಾಜಕೀಯ ನಿಲುವಿನ ಬಗ್ಗೆ ಆಕ್ಷೇಪ ಇಲ್ಲ. ನನಗೆ ಎಲ್ಲ ಪಕ್ಷದವರು ಸಹಕಾರ ಕೊಟ್ಟಿದ್ದಾರೆ ಎಂದರು.

Translate »