ಲೈAಗಿಕ ಕಿರುಕುಳ: ಶಾಲೆ ಆರಂಭದ ದಿನವೇ ಶಿಕ್ಷಕನ ಅಮಾನತು
ಮಂಡ್ಯ

ಲೈAಗಿಕ ಕಿರುಕುಳ: ಶಾಲೆ ಆರಂಭದ ದಿನವೇ ಶಿಕ್ಷಕನ ಅಮಾನತು

May 17, 2022

ಕೆ.ಆರ್.ಪೇಟೆ, ಮೇ ೧೬(ಶ್ರೀನಿವಾಸ್)- ವಿದ್ಯಾರ್ಥಿನಿಗೆ ಲೈಂಗಿಕ ಕಿರು ಕುಳ ನೀಡಿದ ಆರೋಪದ ಮೇರೆಗೆ ಶಾಲೆ ಪ್ರಾರಂಭ ವಾದ ದಿನವೇ ಶಿಕ್ಷಕ ನೋರ್ವ ಅಮಾನತು ಆದ ಘಟನೆ ಕೆ.ಆರ್. ಪೇಟೆ ತಾಲೂಕು ಗಂಗನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಈ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಚಂದ್ರಶೇಖರ್ ಎಂಬಾತನೇ ಅಮಾ ನತಿಗೆ ಒಳಗಾದವನಾಗಿದ್ದು, ಈತ ಕಳೆದ ಮಾ.೩೧ರಂದು ಶಾಲೆಯ ವಿದ್ಯಾ ರ್ಥಿನಿಯೋರ್ವಳನ್ನು ಶೌಚಾಲಯಕ್ಕೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದನೆಂದು ಆರೋಪಿಸಲಾಗಿದೆ. ಇಂದು ಶಾಲೆ ಆರಂಭವಾಗಿದ್ದು, ಶಿಕ್ಷಕ ಶಾಲೆಗೆ ಬಂದಿರುವುದನ್ನು ತಿಳಿದ ವಿದ್ಯಾರ್ಥಿನಿ
ತಾನು ಶಾಲೆಗೆ ಹೋಗುವುದಿಲ್ಲವೆಂದು ಹಠ ಹಿಡಿದಿದ್ದಾಳೆ. ಈ ವೇಳೆ ಪೋಷಕರಿಗೆ ಲೈಂಗಿಕ ಕಿರುಕುಳದ ವಿಚಾರ ಗೊತ್ತಾಗಿದೆ ಎನ್ನಲಾಗಿದ್ದು, ವಿಷಯ ತಿಳಿಯುತ್ತಿದ್ದಂತೆಯೇ ನೂರಾರು ಗ್ರಾಮಸ್ಥರು ಶಾಲೆಯ ಮುಂದೆ ಜಮಾಯಿಸಿ, ಪ್ರತಿಭಟಿಸಲಾರಂಭಿಸಿದರು.

ತಕ್ಷಣವೇ ಶಾಲೆಗೆ ದೌಡಾಯಿಸಿದ ಕಿಕ್ಕೇರಿ ಠಾಣೆ ಪೊಲೀಸರು ಶಿಕ್ಷಕನನ್ನು ವಶಕ್ಕೆ ಪಡೆದಿದ್ದಾರೆ. ಲೈಂಗಿಕ ಕಿರುಕುಳ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜು ಅವರು ಸೋಮವಾರ ಸಂಜೆ ವೇಳೆಗೆ ಶಿಕ್ಷಕ ಚಂದ್ರಶೇಖರ್‌ನನ್ನು ಅಮಾನತು ಪಡಿಸಿ ಆದೇಶಿಸಿದ್ದಾರೆ. ಈ ಸಂಬAಧ ಯಾವುದೇ ದೂರು ದಾಖಲಾಗಿಲ್ಲ ಎಂದು ಕಿಕ್ಕೇರಿ ಪೊಲೀಸ್ ಇನ್ಸ್ಪೆಕ್ಟರ್ ಜಗದೀಶ್ ‘ಮೈಸೂರು ಮಿತ್ರ’ನಿಗೆ ತಿಳಿಸಿದ್ದಾರೆ.

Translate »