ಶಾಸಕರಿಂದ ಅಕ್ರಮ-ಸಕ್ರಮ ಮನೆ ಹಕ್ಕು ಪತ್ರ ವಿತರಣೆ
ಚಾಮರಾಜನಗರ

ಶಾಸಕರಿಂದ ಅಕ್ರಮ-ಸಕ್ರಮ ಮನೆ ಹಕ್ಕು ಪತ್ರ ವಿತರಣೆ

November 4, 2020

ಚಾಮರಾಜನಗರ, ನ.3- ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ಅಕ್ರಮ- ಸಕ್ರಮ ಯೋಜನೆಯಡಿ ಮನೆ ನಿರ್ಮಿಸಿ ಕೊಳ್ಳಲು ತಾಲೂಕಿನ ಸಿದ್ದಯ್ಯನಪುರ ಗ್ರಾಮದ 5 ಮಂದಿ ಫಲಾನುಭವಿಗಳಿಗೆ ಶಾಸಕ ಸಿ.ಪುಟ್ಟರಂಗಶೆಟ್ಟಿ ಹಕ್ಕುಪತ್ರ ವಿತರಿಸಿದರು.

ಬಳಿಕ ಮಾತನಾಡಿದ ಅವರು, ಮನೆ ಹಕ್ಕು ಪತ್ರ ಪಡೆದಿರುವ ಫಲಾನುಭವಿಗಳು, ಉತ್ತಮ ಮನೆ ಹೊಂದುವ ಮೂಲಕ ಸರ್ಕಾರ ನೀಡುವ ಸೌಲಭ್ಯಗಳನ್ನು ಸಮ ರ್ಪಕವಾಗಿ ಬಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಇದೇ ವೇಳೆ ನಡೆದ ಬಗರ್‍ಹುಕುಂ ಸಾಗುವಳಿ ಸಕ್ರಮ ಸಮಿತಿ ಸಭೆಯಲ್ಲಿ ಶಾಸಕರು ಹಿಂದಿನಿಂದಲೂ ಹಣಪಾವತಿ ಮಾಡುತ್ತಿರುವ ಫಲಾನುಭವಿಗಳ ಸಾಗುವಳಿ ಚೀಟಿ ಅರ್ಜಿಗಳ ಕಡತಗಳನ್ನು ಪರಿಶೀಲಿಸಿ ದರು. ಹಣಕಟ್ಟದೇ ಇರುವ ಫಲಾನು ಭವಿಗಳಿಗೆ ಆದಷ್ಟು ಬೇಗ ಹಣಪಾವತಿ ಸುವಂತೆ ತಿಳುವಳಿಕೆ ನೀಡಬೇಕು ಎಂದು ತಹಶೀಲ್ದಾರ್ ಅವರಿಗೆ ಸೂಚಿಸಿದರು.

ಸಮಿತಿಯ ಸದಸ್ಯರಾದ ವಿ.ಕೆ.ರಾಜ ಶೇಖರಮೂರ್ತಿ, ವೀರಭದ್ರಸ್ವಾಮಿ, ಮಹೇಶ್ವರಿ ಸುಬ್ಬೇಗೌಡ, ತಹಶೀಲ್ದಾರ್ ಚಿದಾನಂದ ಗುರುಸ್ವಾಮಿ ಸೇರಿದಂತೆ ತಾಲೂಕಿನ ವಿವಿಧ ಹೋಬಳಿಗಳ ರಾಜಸ್ವ ನಿರೀಕ್ಷಕರು ಹಾಜರಿದ್ದರು.