ಗುಂಡ್ಲುಪೇಟೆ, ನ.3(ಸೋಮ್.ಜಿ)- ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಶಾಸಕ ಸಿ.ಎಸ್.ನಿರಂಜನಕುಮಾರ್ ದಿಢೀರ್ ಭೇಟಿ ನೀಡಿ ಪರಿಶೀಲಿಸಿದರು.
ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯರಿಲ್ಲದೆ ರೋಗಿಗಳಿಗೆ ತೊಂದರೆಯಾಗಿರುವುದು, ರೋಗಿಗಳು ಹಾಗೂ ಸಾರ್ವಜನಿಕರಿಗೆ ಕುಡಿಯುವ ನೀರಿಲ್ಲದಿರುವುದು, ಜನರಿಕ್ ಮಳಿಗೆಯಲ್ಲಿ ಬಡರೋಗಿಗಳಿಗೆ ಅಗತ್ಯ ವಾದ ಔಷಧಿಗಳು ದೊರೆಯದಿರುವುದು, ರಾತ್ರಿ ಪಾಳಿಯಲ್ಲಿ ವೈದ್ಯರಿಲ್ಲದೆ ರೋಗಿ ಗಳಿಗೆ ತೊಂದರೆಯಾಗುತ್ತಿರುವುದರ ಬಗ್ಗೆ ಸಾರ್ವಜನಿಕರಿಂದ ಬಂದ ದೂರುಗಳ ಹಿನ್ನೆಲೆಯಲ್ಲಿ ಶಾಸಕರು ದಿಢೀರ್ ಭೇಟಿ ನೀಡಿ ಪರಿಶೀಲಿಸಿದರು. ಜನರಿಕ್ ಮಳಿಗೆ ಮುಚ್ಚಿರುವ ಬಗ್ಗೆ ಆಕ್ರೋಶ ಗೊಂಡ ಶಾಸಕರು, ಮಳಿಗೆಯ ಔಷಧಿ ಮಾರಾಟ ಸಿಬ್ಬಂದಿ ಯನ್ನು ತರಾಟೆಗೆ ತೆಗೆದುಕೊಂಡರು. ಬಡ ರೋಗಿಗಳಿಗೆ ಅಗತ್ಯವಾದ ಔಷಧಿಗಳಿಲ್ಲದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ ಕೂಡಲೇ ಸರಿಪಡಿ ಸಿಕೊಳ್ಳಬೇಕು ಎಂದು ಎಚ್ಚರಿಕೆ ನೀಡಿದರು.
ಈ ವೇಳೆ ರಾತ್ರಿ ಆಸ್ಪತ್ರೆಗೆ ಬರುವ ರೋಗಿ ಗಳನ್ನು ಮೈಸೂರಿಗೆ ಹೋಗುವಂತೆ ಹೇಳು ತ್ತಿದ್ದಾರೆ ಇದರಿಂದ ಬಡರೋಗಿಗಳಿಗೆ ಸಮಸ್ಯೆಯಾಗುತ್ತಿದೆ ಎಂದು ಸ್ಥಳದಲ್ಲಿದ್ದ ಸಾರ್ವಜನಿಕರು ದೂರಿದರು. ಈ ಸಂಬಂಧ ದೂರವಾಣಿ ಮೂಲಕ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರವಿ ಅವರನ್ನು ಸಂಪರ್ಕಿಸಿ, ಮುಂದಿನ ವಾರ ಸಭೆ ನಡೆಸಿ ಆಸ್ಪತ್ರೆಯ ಕುಂದು ಕೊರತೆಗಳ ಬಗ್ಗೆ ಸಮಗ್ರ ಮಾಹಿತಿ ನೀಡ ಬೇಕು ಎಂದು ತಿಳಿಸಿದರು. ಈ ವೇಳೆ ಡಾ. ಸಂಧ್ಯಾ, ತಾಪಂ ಸದಸ್ಯ ಪ್ರಭಾಕರ್, ಪುರಸಭೆ ಸದಸ್ಯ ಪಿ.ಗಿರೀಶ್, ಬಿಜೆಪಿ ಮಂಡಲಾಧ್ಯಕ್ಷ ಜಗದೀಶ್, ಪ್ರಧಾನ ಕಾರ್ಯದರ್ಶಿ ನಂದೀಶ್, ಮುಖಂಡರಾದ ಗುರು, ಮಹೇಶ್, ಎಸ್.ಸಿ.ಮಂಜುನಾಥ್, ನಾಗೇಂದ್ರ, ನವೀದ್‍ಖಾನ್ ಇದ್ದರು.