ಗಾಂಧಿ ಹತ್ಯೆಯಲ್ಲಿ ಆರ್‍ಎಸ್‍ಎಸ್, ಸಾವರ್ಕರ್ ಕೈವಾಡವಿದೆ ಎಂದು ಹೇಳುವುದು ಸರಿಯಲ್ಲ
ಮೈಸೂರು

ಗಾಂಧಿ ಹತ್ಯೆಯಲ್ಲಿ ಆರ್‍ಎಸ್‍ಎಸ್, ಸಾವರ್ಕರ್ ಕೈವಾಡವಿದೆ ಎಂದು ಹೇಳುವುದು ಸರಿಯಲ್ಲ

October 21, 2019

ಬಾಗಲಕೋಟೆ, ಅ.20- ಮಹಾತ್ಮ ಗಾಂಧಿ ಹತ್ಯೆ ಯಲ್ಲಿ ಆರ್‍ಎಸ್‍ಎಸ್ ಹಾಗೂ ಸಾವ ರ್ಕರ್ ಅವರ ಕೈವಾಡ ಇತ್ತು ಎಂದು ಹೇಳುವುದು ಸರಿಯಲ್ಲ. ಸಾವರ್ಕರ್ ಅಪ್ರತಿಮ ದೇಶಭಕ್ತ. ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ರಾಜಕಾರಣದ ದೃಷ್ಟಿಯಿಂದ ಹೀಗೆ ವಿವಾದಿತ ಹೇಳಿಕೆ ನೀಡುತ್ತಿದ್ದಾರೆ ಎಂದು ಪೇಜಾವರ ಶ್ರೀ ಆರೋಪಿಸಿದ್ದಾರೆ. ಇತ್ತೀಚೆಗೆ ಮಹಾರಾಷ್ಟ್ರ ವಿಧಾನಸಭಾ ಚುನಾವಣಾ ಪ್ರಚಾರದ ವೇಳೆ ಮಾತ ನಾಡಿದ್ದ ಬಿಜೆಪಿ ನಾಯಕರು ಸಾವರ್ಕರ್ ಅವರಿಗೆ ‘ಭಾರತ ರತ್ನ’ ಪ್ರಶಸ್ತಿ ನೀಡುವುದಾಗಿ ಆಶ್ವಾಸನೆ ನೀಡಿ ದ್ದರು. ಆದರೆ, ಬಿಜೆಪಿ ನಾಯಕರ ಈ ಕುರಿತ ಹೇಳಿಕೆಗೆ ತಿರುಗೇಟು ನೀಡಿದ್ದ ಸಿದ್ದರಾಮಯ್ಯ ಗಾಂಧಿ ಯನ್ನು ಕೊಂದವರಿಗೆ ಬಿಜೆಪಿ ಭಾರತ ರತ್ನ ನೀಡು ವುದಾದರೆ, ಕುಡಿದು ಕಾರು ಚಲಾಯಿಸಿ ಇಬ್ಬರ ಸಾವಿಗೆ ಕಾರಣರಾದವರಿಗೆ ಕನಿಷ್ಠ ರಾಜ್ಯೋತ್ಸವ ಪ್ರಶಸ್ತಿಯನ್ನಾದರೂ ನೀಡಿ ಎಂದಿದ್ದರು.

ಮಾಜಿ ಸಿಎಂ ಸಿದ್ದರಾಮಯ್ಯ ಅವರ ಈ ಹೇಳಿಕೆ ಯನ್ನು ಇಂದು ಬಾಗಲಕೋಟೆಯಲ್ಲಿ ತೀವ್ರವಾಗಿ ಖಂಡಿಸಿರುವ ಪೇಜಾವರ ಶ್ರೀಗಳು ಗಾಂಧಿ ಹತ್ಯೆಯಲ್ಲಿ ಆರ್‍ಎಸ್‍ಎಸ್ ಹಾಗೂ ಸಾವರ್ಕರ್ ಕೈವಾಡ ಇದೆ ಎಂದು ಹೇಳುವುದು ಸರಿಯಲ್ಲ. ಸಾವರ್ಕರ್ ಅಪ್ರತಿಮ ದೇಶ ಭಕ್ತ. ಸಾವರ್ಕರ್ ವಿವಾದಿತ ವ್ಯಕ್ತಿ ಯಾಗಿದ್ದರೆ, ಗಾಂಧಿ ಹತ್ಯೆಯಲ್ಲಿ ಅವರ ಪಾತ್ರ ಇದ್ದಿದ್ದರೆ ಕೋರ್ಟ್ ಅವರಿಗೆ ಶಿಕ್ಷೆ ನೀಡಬೇಕಿತ್ತು. ಆದರೆ, ಕೋರ್ಟ್ ಅವರನ್ನು ನಿರಪರಾಧಿ ಎಂದು ತೀರ್ಪು ನೀಡಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಇದೇ ಸಂದರ್ಭದಲ್ಲಿ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ವಿರುದ್ಧ ಕಿಡಿಕಾರಿರುವ ಅವರು, ಸಾವರ್ಕರ್ ಅವರಿಂದ ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಬಲ ಬಂದಿತ್ತು. ಆದರೆ, ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಇಂತವರಿಗೆ ಗೌರವ ನೀಡುವ ಬದಲು ಟಿಪ್ಪು ಸುಲ್ತಾನ್‍ಗೆ ಗೌರವ ಕೊಡುತ್ತಾರೆ. ನಿಷ್ಪಕ್ಷಪಾತ ವಾಗಿ ಹೇಳ್ತೀನಿ ಸಾವರ್ಕರ್ ಅವರಿಗೆ ಅಗೌರವ ತೋರಿಸುವುದು ಸರಿಯಲ್ಲ ಎಂದು ಹೇಳುವ ಮೂಲಕ ಸಾವರ್ಕರ್ ಅವರಿಗೆ ಭಾರತ ರತ್ನ ನೀಡುವ ಕೇಂದ್ರದ ನಿಲುವನ್ನು ಬೆಂಬಲಿಸಿದ್ದಾರೆ.

Translate »