ಏಕರೂಪ ನಾಗರಿಕ ಸಂಹಿತೆ ಜಾರಿಗೆ ಇದು ಸಕಾಲ
ಮೈಸೂರು

ಏಕರೂಪ ನಾಗರಿಕ ಸಂಹಿತೆ ಜಾರಿಗೆ ಇದು ಸಕಾಲ

February 12, 2022

ನವದೆಹಲಿ, ಫೆ. ೧೧-ದೇಶದ ಹಲವು ಭಾಗಗಳಲ್ಲಿ ನಡೆಯು ತ್ತಿರುವ ಹಿಜಾಬ್ ಪರ-ವಿರೋಧ ಚರ್ಚೆ ಮತ್ತು ಸಂಬAಧಿತ ಪ್ರತಿಭಟನೆಗಳ ನಡುವೆ, ಬಿಜೆಪಿ ಫೈರ್‌ಬ್ರಾಂಡ್ ನಾಯಕ ಮತ್ತು ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಶುಕ್ರವಾರ ಏಕರೂಪ ನಾಗರಿಕ ಸಂಹಿತೆ ಸಮಯದ ಅಗತ್ಯ ಎಂದು ಹೇಳಿದ್ದಾರೆ.

ದೇಶಕ್ಕೆ ಎಲ್ಲ ಸಮುದಾಯಗಳಿಗೂ ಅನ್ವಯವಾಗುವ ಒಂದೇ ಕಾನೂನು ಅಗತ್ಯವಿದೆ ಎಂದಿದ್ದಾರೆ. ಏಕರೂಪ ನಾಗರಿಕ ಸಂಹಿತೆ ಇಂದಿನ ಅಗತ್ಯವಾಗಿದೆ, ದೇಶ ಒಂದೇ ಆದ್ದರಿಂದ ಎಲ್ಲರಿಗೂ ಒಂದೇ ಕಾನೂನು ಇರಬೇಕು ಎಂದರು. ಯುಸಿಸಿ ಯನ್ನು ಈ “ಸಮಯದ ಅಗತ್ಯ” ಎಂದು ಕರೆದಿರುವ ಗಿರಿರಾಜ್ ಸಿಂಗ್, “ಧರ್ಮ ಮತ್ತು ಪ್ರದೇಶದ ಹೆಸರಿನಲ್ಲಿ ದೇಶವನ್ನು ಒಡೆಯುವ ಪ್ರಯತ್ನ ಗಳನ್ನು ಮಾಡಲಾಗುತ್ತಿದೆ” ಎಂದು ಹೇಳಿದರು. “ಯುಸಿಸಿ ಸಮಯದ ಅಗತ್ಯವಾಗಿದೆ ಎಂಬ ಪರಿಸ್ಥಿತಿ ಯನ್ನು ರಚಿಸಲಾಗುತ್ತಿದೆ” ಎಂದು ಅವರು ಹೇಳಿದರು, “ಒಂದು ರಾಷ್ಟç, ಒಂದು ಕಾನೂನು” ಕರೆ ನೀಡಿದರು.

ಏಕರೂಪ ನಾಗರಿಕ ಸಂಹಿತೆಯು ವಿಭಿನ್ನ ನಂಬಿಕೆಗಳ ಜನರಿಗೆ ವಿಭಿನ್ನ ವೈಯಕ್ತಿಕ ಕಾನೂನುಗಳನ್ನು ಅನುಮತಿಸುವ ಬದಲು ಮದುವೆ, ವಿಚ್ಛೇದನ, ಉತ್ತರಾಧಿಕಾರ ಮತ್ತು ದತ್ತು ಮತ್ತು ಇತರ ವೈಯಕ್ತಿಕ ವಿಷಯಗಳನ್ನು ನಿಯಂತ್ರಿಸುವ ಕಾನೂನುಗಳ ಸಾಮಾನ್ಯ ಗುಂಪಾಗಿದೆ. ಸಮಾನತೆಯನ್ನು ಖಚಿತಪಡಿಸುವುದು ಗುರಿಯಾಗಿದೆ.
ಬಿಜೆಪಿ ಸರ್ಕಾರ ಸಂಸತ್ತಿನಲ್ಲಿ ಕಾನೂನನ್ನು ತರಲು ಒತ್ತಾಯಿಸುತ್ತಿದೆ. ೨೦೧೯ ರ ಲೋಕಸಭಾ ಚುನಾವಣೆಯ ಕೇಸರಿ ಪಕ್ಷದ ಪ್ರಣಾಳಿಕೆಯಲ್ಲಿಯೂ ಏಕರೂಪ ನಾಗರಿಕ ಸಂಹಿತೆ ಕಾಣ ಸಿಕೊಂಡಿದೆ. ಏಕರೂಪ ನಾಗರಿಕ ನೀತಿಸಂಹಿತೆ ಎಂದರೇನು?: ಜನರು ಒಳಪಡುವ ಧರ್ಮ, ಜಾತಿ ಮತ್ತು ಜನಾಂಗ/ಬುಡಕಟ್ಟುಗಳ ಹೊರತಾಗಿ ಎಲ್ಲಾ ಜನರಿಗೆ ಅನ್ವಯಿಸುವ ಒಂದೇ ವರ್ಗದ ಜಾತ್ಯತೀತ ಪೌರ ಕಾನೂನುಗಳ ಮೂಲಕ ಆಡಳಿತ ನಡೆಸುತ್ತದೆ. ಈ ಕಾನೂನು ತಮ್ಮ ಧರ್ಮ ಅಥವಾ ಜಾತಿ ಅಥವಾ ಜನಾಂಗ/ಬುಡಕಟ್ಟುಗಳ ಮೇಲೆ ಆಧಾರಿತವಾಗಿ ಪ್ರತ್ಯೇಕ ವೈಯಕ್ತಿಕ ಕಾನೂನುಗಳ ಅಡಿಯಲ್ಲಿ ಆಡಳಿತಕ್ಕೊಳಪಡುವ ನಾಗರಿಕರ ಹಕ್ಕನ್ನು ರದ್ದುಗೊಳಿಸುತ್ತದೆ. ಅಂತಹ ಸಂಹಿತೆಗಳು ಬಹುತೇಕ ಆಧುನಿಕ ರಾಷ್ಟçಗಳಲ್ಲಿ ಈಗಾಗಲೇ ಜಾರಿಯಲ್ಲಿವೆ. ನಾಗರಿಕ ನೀತಿಸಂಹಿತೆಯ ವ್ಯಾಪ್ತಿಯಲ್ಲಿ ಒಳಪಡುವ ಸಾಮಾನ್ಯ ಕ್ಷೇತ್ರಗಳೆಂದರೆ ಆಸ್ತಿಪಾಸ್ತಿಗಳ ಸ್ವಾಧೀನಪಡಿಸಿಕೊಳ್ಳುವಿಕೆ ಮತ್ತು ಆಡಳಿತ, ಮದುವೆ, ವಿಚ್ಛೇದನ ಮತ್ತು ದತ್ತು ಸ್ವೀಕಾರಗಳಾಗಿವೆ.

“೧೧೮ನೇ ವಿಧಿಯಲ್ಲಿನ ಭಾರತೀಯ ಉತ್ತರಾಧಿಕಾರ ಕಾಯ್ದೆಯು ಅಸಂವಿಧಾನಾತ್ಮಕ ಎಂದು ಘೋಷಿಸಿದ ನ್ಯಾಯಪೀಠ- ೪೪ನೇ ವಿಧಿಯನ್ವಯ ಸಮಾನ ನಾಗರಿಕ ಸಂಹಿತೆಯನ್ನು ಜಾರಿಗೊಳಿಸುವುದು ಸರ್ಕಾರದ ಕರ್ತವ್ಯ” ಎಂದು ನ್ಯಾಯಮೂರ್ತಿ ವಿ.ಎಸ್ ಖಾರೆ ನೇತೃತ್ವದ ತ್ರಿಸದಸ್ಯ ನ್ಯಾಯಪೀಠವು ೨೦೦೩ರಲ್ಲಿ ಅಭಿಪ್ರಾಯಪಟ್ಟಿದ್ದನ್ನು ಇಲ್ಲಿ ಸ್ಮರಿಸಬಹುದು. ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೊಳಿಸುವ ಕುರಿತು ಭಾರತೀಯ ಜನತಾ ಪಕ್ಷ ದಶಕಗಳಿಂದ ಆಸಕ್ತಿ ತೋರುತ್ತಾ ಬಂದಿದೆ. ಆದರೆ, ಕಾಂಗ್ರೆಸ್ ಸೇರಿದಂತೆ ಪ್ರಮುಖ ಪ್ರತಿ ಪಕ್ಷಗಳು ಏಕರೂಪ ನಾಗರಿಕ ಸಂಹಿತೆಯ ವಿರೋಧಿ ನಿಲುವು ತಳೆದಿವೆ.

ಕರ್ನಾಟಕದ ಹಿಜಾಬ್ ಕೇಸ್: ಸರ್ಕಾರಿ ಕಾಲೇಜುಗಳಲ್ಲಿ ಹಿಜಾಬ್ ನಿಷೇಧ ಮಾಡಿರುವ ವಿಚಾರವನ್ನು ನಿರ್ಧರಿಸುವವರೆಗೆ ಹಿಜಾಬ್, ಕೇಸರಿ ಶಾಲು (ಭಾಗ್ವಾ) ಅಥವಾ ಬರ‍್ಯಾವುದೇ ಧಾರ್ಮಿಕ ಬಾವುಟಗಳನ್ನು ಇಟ್ಟುಕೊಂಡು ಕಾಲೇಜಿಗೆ ತೆರಳದಂತೆ ವಿದ್ಯಾರ್ಥಿಗಳಿಗೆ ಆದೇಶಿಸಿ ಕರ್ನಾಟಕ ಹೈಕೋರ್ಟ್ ಗುರುವಾರ ಮಧ್ಯಂತರ ಆದೇಶ ಮಾಡಿದೆ. ವಿದ್ಯಾರ್ಥಿಗಳಿಗೆ ಸಮವಸ್ತç ಸಂಹಿತೆ ವಿಧಿಸಿ ಕಾಲೇಜು ಅಭಿವೃದ್ಧಿ ಸಮಿತಿಗಳು ಆದೇಶ ಮಾಡಲ್ಪಟ್ಟಿರುವ ಕಾಲೇಜುಗಳಿಗೆ ಆದೇಶ ಅನ್ವಯಿಸುತ್ತದೆ ಎಂದು ಪೀಠವು ಆದೇಶದಲ್ಲಿ ಸ್ಪಷ್ಟಪಡಿಸಿದೆ. ಹೀಗಾಗಿ, ಸಮವಸ್ತç ಸಂಹಿತೆ ವಿಧಿಸದ ಕಾಲೇಜುಗಳಿಗೆ ನ್ಯಾಯಾಲಯದ ಆದೇಶ ಅನ್ವಯಿಸುವುದಿಲ್ಲ ಎಂದು ಹೇಳಲಾಗಿದೆ. “ನಮ್ಮದು ಹಲವು ಸಂಸ್ಕöÈತಿಗಳನ್ನು ಒಳಗೊಂಡ ಬಹು ಸಂಸ್ಕöÈತಿಯ ನಾಡು ಎಂದು ವಿವರಿಸುವ ಅಗತ್ಯವಿಲ್ಲ. ಜಾತ್ಯತೀತವಾದ ನಮ್ಮ ರಾಷ್ಟçವು ಯಾವುದೇ ಒಂದು ನಿರ್ದಿಷ್ಟ ಧರ್ಮದ ಜೊತೆ ಗುರುತಿಸಿಕೊಳ್ಳುವುದಿಲ್ಲ. ಪ್ರತಿಯೊಬ್ಬ ಪ್ರಜೆಯು ತಮ್ಮ ಇಚ್ಛೆಯ ನಂಬಿಕೆ ಪಾಲಿಸುವ ಹಕ್ಕು ಹೊಂದಿದ್ದಾರೆ ಎಂಬುದು ಸತ್ಯ. ಅದಾಗ್ಯೂ, ಅದು ಪರಿಪೂರ್ಣವಾಗಿಲ್ಲ. ನಿರ್ದಿಷ್ಟ ನಿರ್ಬಂಧಗಳಿಗೆ ಒಳಪಟ್ಟಿರುತ್ತದೆ ಎಂದು ಸಂವಿಧಾನದಲ್ಲಿ ಹೇಳಲಾಗಿದೆ” ಎಂದು ಪೀಠವು ವಿವರಿಸಿದೆ.

Translate »