ವಸ್ತç ಸಂಘರ್ಷ: `ಸುಪ್ರೀಂ’ ಸೂಚನೆ ಸದ್ಯಕ್ಕೆ ಹೈಕೋರ್ಟ್ ಆದೇಶ ಪಾಲಿಸಿ
ಮೈಸೂರು

ವಸ್ತç ಸಂಘರ್ಷ: `ಸುಪ್ರೀಂ’ ಸೂಚನೆ ಸದ್ಯಕ್ಕೆ ಹೈಕೋರ್ಟ್ ಆದೇಶ ಪಾಲಿಸಿ

February 12, 2022

ಬೆಂಗಳೂರು, ಫೆ.೧೧ (ಕೆ.ಎಂ.ಶಿ)- ಶಾಲಾ-ಕಾಲೇಜುಗಳಿಗೆ ಹಿಜಾಬ್, ಕೇಸರಿ ಶಾಲು ಮತ್ತಿತರ ಧಾರ್ಮಿಕ ಸಂಕೇತಗಳ ಪ್ರವೇಶವಾಗಬಾರದು ಎಂಬ ಹೈಕೋರ್ಟ್ ಆದೇಶವನ್ನು ಇಂದು ಸುಪ್ರೀಂಕೋರ್ಟ್ ಎತ್ತಿ ಹಿಡಿದಿರುವು ದಲ್ಲದೆ ತರಗತಿಗಳನ್ನು ಪುನರ್ ಆರಂಭಿಸುವAತೆ ಸೂಚಿಸಿದೆ.

ಹೈಕೋರ್ಟ್ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಿದ್ದ ದೇವದಾಸ್ ಕಾಮತ್ ಅವರ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಂಡ ಸುಪ್ರೀಂಕೋರ್ಟ್ ಮುಖ್ಯ ನ್ಯಾಯ ಮೂರ್ತಿ ಎನ್.ವಿ.ರಮಣ ನೇತೃತ್ವದ ಪೀಠ ಈ ಆದೇಶ ನೀಡಿದೆ. ಹಿಜಾಬ್, ಕೇಸರಿ ಶಾಲಿನಂತಹ ವಿಷಯ ದೇಶದೆಲ್ಲೆಡೆ ವ್ಯಾಪಿಸಲು ಯಾರೂ ಅವಕಾಶ ನೀಡಕೂಡದು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಇದಕ್ಕೂ ಮುನ್ನ ಗುರುವಾರ ಈ ಸಂಬAಧ ವಿಚಾರಣೆ ನಡೆಸಿದ್ದ ಹೈಕೋರ್ಟ್ನ ಮುಖ್ಯ ನ್ಯಾಯ ಮೂರ್ತಿ ರಿತುರಾಜ್ ಅವಸ್ಥಿ ನೇತೃತ್ವದ ತ್ರಿಸದಸ್ಯ ಪೀಠವು ಹಿಜಾಬ್, ಕೇಸರಿ ಶಾಲು,ಬಾವುಟ ಸೇರಿದಂತೆ ಯಾವ ಧಾರ್ಮಿಕ ಸಂಕೇತಗಳು ಶಾಲಾ-ಕಾಲೇಜು ಗಳನ್ನು ಪ್ರವೇಶಿಸಬಾರದು ಎಂದು ತಾಕೀತು ಮಾಡಿತ್ತು. ನಿನ್ನೆ ನೀಡಿದ್ದ ಮೌಖಿಕ ಆದೇಶವನ್ನು ಇಂದು ಮಧ್ಯಂತರ ಆದೇಶವಾಗಿ ಪರಿವರ್ತಿಸಿದ ನ್ಯಾಯಾ ಲಯ, ಸರ್ಕಾರ ಮತ್ತು ವಿದ್ಯಾರ್ಥಿಗಳಿಗೆ ಪರೋಕ್ಷವಾಗಿ ಚಾಟಿ ಬೀಸಿದೆ. ತಕ್ಷಣವೇ ಶಾಲೆಗಳನ್ನು ಆರಂಭಿಸಿ ವಿದ್ಯಾರ್ಥಿಗಳ ಪರೀಕ್ಷಾ ಸಮಯದಲ್ಲಿ ದೀರ್ಘಕಾಲ ರಜೆ ಸರಿಯಲ್ಲ. ತರಗತಿಯ ಒಳಗೆ ಹಿಜಾಬ್ ಆಗಲೀ, ಕೇಸರಿ ವಸ್ತç ಧರಿಸಲು ಅವಕಾಶವಿಲ್ಲ. ಶಾಲಾ ಆಡಳಿತ ಮಂಡಳಿ ನಿಗದಿ ಪಡಿಸಿರುವ ವಸ್ತçಸಂಹಿತೆಯನ್ನು ವಿದ್ಯಾರ್ಥಿಗಳು ಅಳವಡಿಸಿ ಕೊಳ್ಳಲು ನಮ್ಮ ವಿರೋಧವಿಲ್ಲ ಎಂದು ಹೈಕೋರ್ಟ್ ಸ್ಪಷ್ಟವಾಗಿ ತಿಳಿಸಿದೆ. ವಿಚಾರಣೆ ಪೂರ್ಣಗೊಂಡು ತೀರ್ಪು ನೀಡುವವ ರೆಗೂ ರಾಜ್ಯದ ಶಾಂತಿ ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳಬೇಕು ಮತ್ತು ಎಂದಿನAತೆ ತರಗತಿಗಳು ನಡೆಯಲು ಅವಕಾಶ ಮಾಡಿಕೊಡಬೇಕೆಂದು ತಿಳಿಸಿದೆ. ಮಧ್ಯಂತರ ಆದೇಶ ಹೊರಬೀಳುತ್ತಿದ್ದಂತೆ ವಿದ್ಯಾರ್ಥಿಗಳ ಪರ ವಕೀಲರು ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಮೊರೆಹೋಗಿದ್ದರು. ಈ ಅರ್ಜಿಯನ್ನು ತುರ್ತಾಗಿ ಕೈಗೆತ್ತಿಕೊಂಡ ನ್ಯಾಯಾಲಯ ಹೈಕೋರ್ಟ್ ಆದೇಶವನ್ನು ಎತ್ತಿಹಿಡಿದಿದ್ದಲ್ಲದೆ ಮುಂದಿನ ತೀರ್ಪಿನ ವರೆಗೂ ಅದನ್ನು ಪಾಲನೆ ಮಾಡುವಂತೆ ಸೂಚಿಸಿದೆ. ಧರ್ಮ, ನಂಬಿಕೆ ಏನೇ ಇರಲಿ, ಆದರೆ ವಿದ್ಯಾಸಂಸ್ಥೆಗಳಲ್ಲಿ ಹಿಜಾಬ್, ಕೇಸರಿ ಶಾಲು ಸೇರಿದಂತೆ ಯಾವ ಧಾರ್ಮಿಕ ಸಂಕೇತಗಳನ್ನು ಧರಿಸುವಂತಿಲ್ಲ ಎಂದು ಹೈಕೋರ್ಟ್ ಹೇಳಿತ್ತು.
ವಿವಾದದ ಹಿನ್ನೆಲೆಯಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ನೀಡುವಂತಹ ಸನ್ನಿವೇಶ ಉದ್ಭವವಾಗಿರುವುದಕ್ಕೆ ಕಳವಳ ವ್ಯಕ್ತಪಡಿಸಿದ್ದ ಹೈಕೋರ್ಟ್, ಆದಷ್ಟು ಬೇಗ ವಿದ್ಯಾರ್ಥಿಗಳಿಗೆ ಬೋಧನೆಯನ್ನು ಪುನರಾರಂಭಿಸುವAತೆ ಸೂಚಿಸಿತ್ತು.

ಧರ್ಮದ ಹೆಸರಿನಲ್ಲಿ ಯಾರೂ ಜನಜೀವನಕ್ಕೆ ಭಂಗ ಉಂಟುಮಾಡಬಾರದು. ಇದನ್ನು ನಾಗರಿಕ ಸಮಾಜ ಸಹಿಸಲು ಸಾಧ್ಯವಿಲ್ಲ. ಪ್ರತಿಭಟನೆಯ ಹೆಸರಿನಲ್ಲಿ ಜನಜೀವನಕ್ಕೆ ಭಂಗ ಉಂಟುಮಾಡಿರುವುದು ನೋವಿನ ವಿಷಯ. ಹೀಗಾಗಿ ಸರ್ಕಾರ ಕೂಡಲೇ ಕ್ರಮ ಕೈಗೊಂಡು ಶಾಲಾ-ಕಾಲೇಜುಗಳ ಪುನರಾರಂಭಕ್ಕೆ ದಾರಿ ಮಾಡಿಕೊಡಬೇಕು.
ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಧರಿಸಬೇಕಾದ ಸಮವಸ್ತçದ ಬಗ್ಗೆ ಅಭಿವೃದ್ಧಿ ಸಮಿತಿಗಳು ಕೈಗೊಂಡ ತೀರ್ಮಾನವನ್ನು ಪಾಲಿಸಬೇಕು ಎಂದು ಹೈಕೋರ್ಟ್ ಸ್ಪಷ್ಟವಾಗಿ ಹೇಳಿತ್ತು. ಮುಖ್ಯ ನ್ಯಾಯಮೂರ್ತಿ ರಿತುರಾಜ್, ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಮತ್ತು ನ್ಯಾಯಮೂರ್ತಿ ಜೆ.ಎಂ.ಖಾಜಿ ಅವರಿದ್ದ ಹೈಕೋರ್ಟ್ ಪೀಠ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ದೇವದಾಸ್ ಕಾಮತ್ ಅವರು ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು. ಆದರೆ ಮುಖ್ಯ ನ್ಯಾಯಮೂರ್ತಿ ಒಳಗೊಂಡ ಸುಪ್ರೀಂಕೋರ್ಟ್ ಪೀಠ ಸೂಕ್ತ ಸಮಯದಲ್ಲಿ ನಾವು ಮಧ್ಯ ಪ್ರವೇಶಿಸುತ್ತೇವೆ. ಅಲ್ಲಿಯವರೆಗೆ ಹೈಕೋರ್ಟ್ ನೀಡಿದ ಮೌಖಿಕ,ಮಧ್ಯಂತರ ಆದೇಶವನ್ನು ಪಾಲಿಸುವಂತೆ ಹೇಳಿದೆ.

Translate »