ದೇಶದ ಏಕತೆಗೆ ಭಂಗ ತರುವ ಕೆಲಸ ಆಗಬಾರದು
ಮೈಸೂರು

ದೇಶದ ಏಕತೆಗೆ ಭಂಗ ತರುವ ಕೆಲಸ ಆಗಬಾರದು

April 19, 2021

ಮೈಸೂರು, ಏ.18(ಆರ್‍ಕೆಬಿ)- ಇತಿ ಹಾಸ ನೋಡಿದರೆ ಜಗತ್ತಿಗೆ ಮುಂದಾಳತ್ವ ವಹಿಸಿದ್ದ ನಮ್ಮ ದೇಶದಲ್ಲಿ 136 ಕೋಟಿ ಜನರಿದ್ದು, ಜಾತಿ, ಭಾಷೆ ಬೇರೆ ಬೇರೆ ಇದ್ದರೂ ಒಗ್ಗಟ್ಟಿನ ಬಲಾಢ್ಯ ದೇಶವಾಗಿರ ಬೇಕು. ದೇಶದ ಏಕತೆಗೆ ಭಂಗ ತರುವ ಕೆಲಸ ಆಗಬಾರದು ಎಂದು ರಾಜ್ಯ ಹೈಕೋರ್ಟ್ ನ್ಯಾಯಮೂರ್ತಿ ಅಶೋಕ್ ಜಿ.ನಿಜಗಣ್ಣನವರ್ ಅಭಿಪ್ರಾಯಪಟ್ಟರು.

ಮೈಸೂರಿನ ರಾಮಕೃಷ್ಣನಗರದ ನೃಪತುಂಗ ಕನ್ನಡ ಶಾಲಾವರಣದಲ್ಲಿರುವ ರಮಾಗೋವಿಂದ ರಂಗಮಂದಿರದಲ್ಲಿ ಅಲ್ಲಮ ರಿಸರ್ಚ್ ಅಂಡ್ ಕಲ್ಚರಲ್ ಫೌಂಡೇಷನ್ ಸಂಸ್ಥೆಯ ಉದ್ಘಾಟನೆ ಹಾಗೂ ವಿಚಾರ ಸಂಕಿರಣಕ್ಕೆ ಚಾಲನೆ ನೀಡಿ, `ಪ್ರಜಾಪ್ರಭುತ್ವ ಮತ್ತು ನ್ಯಾಯಾಂಗ’ ಕುರಿತು ಅವರು ಮಾತನಾಡಿದರು.

ನಾವು ಕೆಲವೊಂದು ವಿಷಯಗಳಲ್ಲಿ ಹಿಂದುಳಿದಿದ್ದೇವೆ. ಅರಾಜಕತೆ ತಾಂಡವ ವಾಡುತ್ತಿದೆ. ಕೆಲವೆಡೆ ಬಡ ಮಕ್ಕಳು ಶಾಲೆಗಳಿಂದ ವಂಚಿತರಾಗುತ್ತಿದ್ದಾರೆ. ಮೂಲಭೂತ ಸೌಲಭ್ಯಗಳ ಬಗ್ಗೆ ಹಲವು ಬಾರಿ ನ್ಯಾಯಾಂಗವು ನೀಡಿದ ಒಳ್ಳೆಯ ತೀರ್ಪುಗಳು ಸರ್ಕಾರವನ್ನು ಎಚ್ಚರಿಸಿವೆ. ಹಾಗಿದ್ದರೂ ಸಂವಿಧಾನವನ್ನು ನಾವು ಸರಿಯಾಗಿ ಬಳಸಿಕೊಳ್ಳುತ್ತಿಲ್ಲ. ಆಡಳಿತ, ವಿಪಕ್ಷಗಳು ಯಾರೇ ಇರಲಿ ಸದುದ್ದೇಶ ಇಟ್ಟುಕೊಂಡು ಕೆಲಸ ಮಾಡಿದರೆ ದೇಶ ದಲ್ಲಿ ಏಕತೆ ಉಳಿಸಿಕೊಳ್ಳಬಹುದು. ನಮ್ಮಲ್ಲಿ ಸಂಪನ್ಮೂಲ ಮತ್ತು ಅವಕಾಶಗಳ ಕೊರತೆ ಇಲ್ಲ. ಆದರೆ ಅಭಿಮಾನ ರೂಢಿಸಿಕೊಂಡು, ಸರಿಯಾಗಿ ಶ್ರಮದಿಂದ ಕೆಲಸ ಮಾಡಿದರೆ ಮಾತ್ರ ಪ್ರಜಾಪ್ರಭುತ್ವಕ್ಕೆ ಬಲ ಬರುತ್ತದೆ. ಸಮಾಜದ ಚಿಂತನೆಗೆ ಸಮಯ ಮೀಸ ಲಿಟ್ಟರೆ ಶೇ.80ರಷ್ಟು ವ್ಯಾಜ್ಯಗಳೇ ಇರು ವುದಿಲ್ಲ. ಸಂಯಮದಿಂದ ಜೀವನ ನಡೆಸಿ ದರೆ ಸಮಸ್ಯೆಗಳು ಕಡಿಮೆಯಾಗುತ್ತವೆ. ಈ ನಿಟ್ಟಿನಲ್ಲಿ ಸರ್ಕಾರ ಮತ್ತು ಆಡಳಿತದಲ್ಲಿನ ಏರುಪೇರುಗಳನ್ನು ಸರಿಪಡಿಸುವ ಜವಾಬ್ದಾರಿ ಪ್ರಜಾಪ್ರಭುತ್ವದ ಮುಖ್ಯಸ್ಥರಾದ ಜನರ ಮೇಲಿದೆ ಎಂದು ಅಭಿಪ್ರಾಯಪಟ್ಟರು.
ಪ್ರಜಾಪ್ರಭುತ್ವದ ಯಾವುದೇ ಒಂದು ಅಂಗ ಸರಿಯಾಗಿ ಕೆಲಸ ಮಾಡದಿದ್ದರೂ ಪ್ರಜಾಪ್ರಭುತ್ವಕ್ಕೆ ಧಕ್ಕೆಯಾಗುತ್ತದೆ. ಹಾಗಾಗಿ ದೇಶದ ಆಡಳಿತ ಸಂವಿಧಾನದ ಪ್ರಕಾ ರವೇ ನಡೆಯಬೇಕಾಗಿದೆ. ಪ್ರಜೆಗಳ ಹಕ್ಕು ಉಳಿಸಲು ನ್ಯಾಯಾಂಗ ಸಹಕಾರಿ ಯಾಗಿದೆ. ನಾಗರಿಕರು ತೃಪ್ತಿಕರವಾಗಿ ಇರುವಂತಾಗಬೇಕಿದೆ. ನಾಗರಿಕರಿಗೆ ಅವರ ಹಕ್ಕುಗಳ ಬಗ್ಗೆ ಅರಿವು ಉಂಟು ಮಾಡು ವಂತಾಗಬೇಕು. ಕೇವಲ ಬಟ್ಟೆ ಇತರೆÀ ನೀಡಿದರೆ ಬಡವರ ಸೇವೆ ಎನಿ ಸದು. ಅಂಥವರ ಮುಂದಿನ ಬದುಕಿನ ದಾರಿದೀಪವಾಗಬೇಕು. ಆ ನಿಟ್ಟಿನಲ್ಲಿ ಸರ್ಕಾರೇತರ ಸಂಸ್ಥೆಗಳು (ಎನ್‍ಜಿಒ), ಸಂಘ ಸಂಸ್ಥೆಗಳು ಸಕ್ರಿಯವಾಗಬೇಕಾಗಿದೆ ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಮಾಜಿ ಶಾಸಕ ವೈ.ಎಸ್.ವಿ.ದತ್ತ, ರಾಜ್ಯ ಕೈಗಾರಿಕಾ ಮತ್ತು ಮೂಲ ಸೌಲಭ್ಯ ಅಭಿವೃದ್ಧಿ ನಿಗಮದ ಕಾರ್ಯ ನಿರ್ವಾಹಕ ನಿರ್ದೇಶಕ ಡಿ.ಪಿ. ಪ್ರಕಾಶ್, ಪತ್ರಕರ್ತ ಡಾ.ಜಗದೀಶ್ ಕೊಪ್ಪ, ಅಲ್ಲಮ ರಿಸರ್ಚ್ ಅಂಡ್ ಕಲ್ಚರಲ್ ಫೌಂಡೇಷನ್ ಅಧ್ಯಕ್ಷ ಚಿನ್ನಸ್ವಾಮಿ ವಡ್ಡಗೆರೆ, ಸಂಚಾಲಕ ಎಸ್.ಪಿ.ಮಧು ಇನ್ನಿತರರು ಉಪಸ್ಥಿತರಿದ್ದರು.

Translate »