ಸತ್ವ ಇದ್ದರೆ ಮಾತ್ರ ಯಾವುದೇ ಧರ್ಮ  ಉನ್ನತ ಸ್ಥಾನ ಅಲಂಕರಿಸಿ ಜನತೆ ಆವರಿಸಲಿದೆ
ಮೈಸೂರು

ಸತ್ವ ಇದ್ದರೆ ಮಾತ್ರ ಯಾವುದೇ ಧರ್ಮ ಉನ್ನತ ಸ್ಥಾನ ಅಲಂಕರಿಸಿ ಜನತೆ ಆವರಿಸಲಿದೆ

April 19, 2021

ಮೈಸೂರು,ಏ.18(ಪಿಎಂ)- ಯಾವುದೇ ಧರ್ಮ ಅದರ ಪ್ರಾಚೀನತೆಯಿಂದ ದೊಡ್ಡ ಸ್ಥಾನ ಅಲಂಕರಿಸುವುದಿಲ್ಲ. ಅದರಲ್ಲಿ ಸತ್ವ ಇದ್ದರೆ ಮಾತ್ರ ಅದು ಉನ್ನತ ಸ್ಥಾನ ಅಲಂಕರಿಸಲು ಸಾಧ್ಯ ಎಂದು ಕುಂದೂರು ಮಠದ ಡಾ.ಶ್ರೀ ಶರತ್‍ಚಂದ್ರ ಸ್ವಾಮೀಜಿ ಅಭಿಪ್ರಾಯಪಟ್ಟರು.

ಮೈಸೂರಿನ ಹೊಸಮಠದ ಶ್ರೀ ನಟ ರಾಜ ಸಭಾಂಗಣದಲ್ಲಿ ಜಾಗತಿಕ ಲಿಂಗಾ ಯತ ಮಹಾಸಭಾ ಮೈಸೂರು ಜಿಲ್ಲಾ ಘಟಕದ ವತಿಯಿಂದ ಭಾನುವಾರ ಹಮ್ಮಿ ಕೊಂಡಿದ್ದ ಲಿಂಗಾಯತ ಸ್ವತಂತ್ರ ಧರ್ಮಕ್ಕೆ ಸಂಬಂಧಿಸಿದಂತೆ ಹೊರತಂದಿರುವ ನಾಲ್ಕು ಕೃತಿಗಳ ಬಿಡುಗಡೆ ಸಮಾರಂಭದಲ್ಲಿ ಬಿಡು ಗಡೆಗೊಂಡ `ವೀರಶೈವ ಧರ್ಮವು 12ನೇ ಶತಮಾನಕ್ಕಿಂತ ಮುಂಚೆ ಅಸ್ತಿತ್ವದಲ್ಲಿತ್ತೆ’ ಕೃತಿ ಕುರಿತು ಅವರು ಮಾತನಾಡಿದರು.
ಪ್ರಾಚೀನತೆಯಿಂದ ಯಾವುದೇ ಧರ್ಮ ಉನ್ನತ ಸ್ಥಾನಕ್ಕೆ ತಲುಪುವುದಿಲ್ಲ. ಅದರಲ್ಲಿ ಸತ್ವ ಇದ್ದರೆ ಮಾತ್ರವೇ ಅದಕ್ಕೆ ಮನ್ನಣೆ ದೊರೆತು ಜನತೆ ಉತ್ತುಂಗದ ಸ್ಥಾನ ನೀಡು ತ್ತಾರೆ. ಹೀಗಾಗಿ ಪ್ರಾಚೀನತೆ ಚಪಲವನ್ನು ನಾವು ಮೊದಲು ಬಿಡಬೇಕು. ಈ ಪ್ರಾಚೀನತೆ ಚಪಲ ಇಟ್ಟುಕೊಂಡಿದ್ದರಿಂದಲೇ ಇಂದು ಸಾಕಷ್ಟು ಸಮಸ್ಯೆಗಳು ಹುಟ್ಟಿಕೊಂಡಿವೆ. ಲಿಂಗಾ ಯತ ಮತ್ತು ವೀರಶೈವ ಎಷ್ಟು ಪ್ರಾಚೀನತೆ ಹೊಂದಿವೆ? ಇವುಗಳನ್ನು ಯಾರು ಸ್ಥಾಪನೆ ಮಾಡಿದರು? ಇದೊಂದು ಸಾಮಾನ್ಯ ಪ್ರಶ್ನೆ ಬಹಳ ವರ್ಷಗಳಿಂದ ವಿದ್ವಾಂಸರ ನಡುವೆ ಚರ್ಚೆಯಲ್ಲಿತ್ತು. ಎರಡ್ಮೂರು ವರ್ಷ ಗಳಿಂದ ಈ ಚರ್ಚೆ ಜನ ಸಾಮಾನ್ಯರ ಅಂಗಳಕ್ಕೆ ಬಂದಿದೆ ಎಂದು ಹೇಳಿದರು.

ಗೊಂದಲ ಎಲ್ಲಾ ಧರ್ಮಗಳಲ್ಲೂ ಇರು ತ್ತದೆ. ಆದರೆ ಅವುಗಳನ್ನು ನಿವಾರಿಸಿಕೊಂಡು ಮುನ್ನಡೆಯಬೇಕು. ಹಿಂದೂ ಧರ್ಮ ಜಗ ತ್ತಿನ ಅತ್ಯಂತ ಪ್ರಾಚೀನ ಧರ್ಮ ಎಂಬು ದರಲ್ಲಿ ಯಾವುದೇ ಅನುಮಾನ ಇಲ್ಲ. ಆದರೆ ಇದನ್ನು ಭಾರತ ದೇಶದಲ್ಲಿ ಮಾತ್ರವೇ ಅನು ಸರಿಸಲಾಗುತ್ತಿದೆ. ಅದೇ ಹಿಂದೂ ಧರ್ಮ ಉದಯಿಸಿದ ಸ್ಥಳದಲ್ಲೇ ಹುಟ್ಟಿದ ಬೌದ್ಧ ಧರ್ಮ ಎರಡೂವರೆ ಸಾವಿರ ವರ್ಷಗಳ ಹಿಂದೆ ಉದಯಿಸಿ, ಇಡೀ ಏಷ್ಯಾವನ್ನೇ ಆವರಿಸಿದೆ. ಆ ಬಳಿಕ ಉದಯಿಸಿದ ಕ್ರೈಸ್ತ ಧರ್ಮ ಇಂದು ಇಡೀ ವಿಶ್ವ ಆವರಿಸಿದೆ. ಹೀಗಾಗಿ ಪ್ರಾಚೀನತೆ ಯಿಂದ ಯಾವುದೇ ಧರ್ಮ ಉನ್ನತ ಸ್ಥಾನಕ್ಕೆ ತಲುಪುವುದಿಲ್ಲ ಎಂದು ತಿಳಿಸಿದರು.

ಕೃತಿ ವಿಚಾರಕ್ಕೆ ಬಂದರೆ, 70 ಪುಟಗಳ ಪುಸ್ತಕದಲ್ಲಿ 10 ಅಧ್ಯಾಯಗಳಿದ್ದು, ಕೃತಿ ಕರ್ತೃ ನಿವೃತ್ತ ಐಎಎಸ್ ಅಧಿಕಾರಿ ಡಾ.ಎಸ್.ಎಂ. ಜಾಮದಾರ ಅವರು ಎರಡು ಭಾಗಗಳಲ್ಲಿ ವಿಚಾರ ಮಂಡಿಸಿದ್ದಾರೆ. ಮೊದಲ ಭಾಗದಲ್ಲಿ ಅವರು ವೀರಶೈವ ಧರ್ಮ 12ನೇ ಶತ ಮಾನಕ್ಕೆ ಮುನ್ನ ಅಸ್ತಿತ್ವದಲ್ಲಿತ್ತು ಎಂದು ಪ್ರತಿ ಪಾದಿಸಿದ 6 ವಿದ್ವಾಂಸರ ಸಿದ್ಧಾಂತಗಳನ್ನು ಪ್ರಸ್ತಾಪಿಸಿದ್ದಾರೆ. ವೀರಶೈವ ಧರ್ಮ ಪಂಚಾ ಚಾರ್ಯರಿಂದ ಸ್ಥಾಪನೆಯಾಯಿತು ಎಂಬ ವಾದ ಹಾಗೂ ಬಸವಾದಿ ಶಿವ ಶರಣರಿಂದ ಸ್ಥಾಪನೆಯಾಯಿತು ಎಂಬ ಮತ್ತೊಂದು ವಾದದ ಬಗ್ಗೆ ವಿದ್ವಾಂಸರ ಅಭಿಪ್ರಾಯಗಳನ್ನು ಲೇಖ ಕರು ವಿವರಿಸಿದ್ದಾರೆ ಎಂದು ತಿಳಿಸಿದರು.

`ಲಿಂಗಾಯತರು ಹಿಂದೂಗಳೇ?’ ಕುರಿತು ಅಧ್ಯಾಪಕ ದೇವರಾಜು ಚಿಕ್ಕಳ್ಳಿ, `ಲಿಂಗಾ ಯತ ಹೋರಾಟ’ ಹಾಗೂ `ವೀರಶೈವ ಸಂಸ್ಕøತ ಗ್ರಂಥಗಳು’ ಕುರಿತು ಲೇಖಕ ಎಲ್.ಶಿವಲಿಂಗಪ್ಪ ಮಾತನಾಡಿದರು. ಹೊಸಮಠದ ಶ್ರೀಚಿದಾನಂದ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಬೆಂಗಳೂರು ಬೇಲಿಮಠದ ಶ್ರೀಶಿವರುದ್ರ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ನೀಲಕಂಠ ಮಠದ ಸಿದ್ದಮಲ್ಲ ಸ್ವಾಮೀಜಿ ಉಪಸ್ಥಿತರಿದ್ದರು.
ಮಹಾಸಭಾದ ಮೈಸೂರು ಜಿಲ್ಲಾ ಘಟಕದ ಅಧ್ಯಕ್ಷ ಮಹದೇವಪ್ಪ ಮತ್ತಿತ ರರು ಕಾರ್ಯಕ್ರಮದಲ್ಲಿ ಹಾಜರಿದ್ದರು.

Translate »