ಹಣ ಪಡೆದು ಮತ ನೀಡುವ ಕಾಲ ಹೋಯಿತು
ಮೈಸೂರು

ಹಣ ಪಡೆದು ಮತ ನೀಡುವ ಕಾಲ ಹೋಯಿತು

April 18, 2021

ಮೈಸೂರು,ಏ.17(ಪಿಎಂ)-ಹಣ ಪಡೆದು ಮತ ನೀಡುವ ಕಾಲ ಹೋಗಿದ್ದು, ಕಾಂಗ್ರೆಸ್‍ನವರು ಹೀಗೆ ವಿನಾಕಾರಣ ಆರೋಪ ಮಾಡಬಾರದು ಎಂದು ವಸತಿ ಸಚಿವ ವಿ.ಸೋಮಣ್ಣ ಕಿಡಿಕಾರಿದರು.

ಮೈಸೂರಿನ ಚಾಮುಂಡಿಬೆಟ್ಟದಲ್ಲಿ ಶನಿವಾರ ತಾಯಿ ಚಾಮುಂಡೇಶ್ವರಿ ದರ್ಶನ ಪಡೆದು ಬಳಿಕ ಬೆಳಗಾವಿ ಲೋಕ ಸಭಾ ಕ್ಷೇತ್ರ, ರಾಯಚೂರಿನ ಮಸ್ಕಿ ಹಾಗೂ ಬೀದರ್‍ನ ಬಸವಕಲ್ಯಾಣ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಸಂಬಂಧ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಅವರು, ಕಾಂಗ್ರೆಸ್‍ನವರು ವಿನಾಕಾರಣ ಬಿಜೆಪಿ ವಿರುದ್ಧ ಹಣ ಹಂಚುವ ಆರೋಪ ಮಾಡುತ್ತಿದ್ದಾರೆ. ಹಣ ಪಡೆದು ಮತ ನೀಡುವ ಕಾಲ ಈಗ ಹೋಗಿದೆ ಎಂದು ಹೇಳಿದರು.

ಚುನಾವಣಾ ಪ್ರಚಾರದಲ್ಲಿ ಕಾಂಗ್ರೆಸ್‍ನವರು ನನಗೇ ಸಿಕ್ಕಿ ದ್ದರು. ಅವರು ಹಣ ಹಂಚಿಕೆ ಸಂಬಂಧ ನನಗೇ ಹೇಳ ಬಹುದಿತ್ತು ಎಂದು ಕಿಡಿಕಾರಿದ ಅವರು, ಮೂರು ಕ್ಷೇತ್ರ ಗಳಲ್ಲೂ ನಮ್ಮ ಪಕ್ಷದ ಅಭ್ಯರ್ಥಿಗಳೇ ಗೆಲುವು ಸಾಧಿಸುತ್ತಾರೆ. ಅದರಲ್ಲೂ ಬೆಳಗಾವಿ ಲೋಕಸಭಾ ಕ್ಷೇತ್ರ ಬಿಜೆಪಿಯ ಭದ್ರ ಕೋಟೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನಾನು ನಿನ್ನೆ ಬೆಳಗ್ಗೆ ಚುನಾವಣಾ ಪ್ರಚಾರಕ್ಕೆ ಹೋಗುವ ಮುನ್ನ ರ್ಯಾಪಿಡ್ ಟೆಸ್ಟ್ ಮಾಡಿಸಿದ್ದೆ. ವರದಿ ನೆಗೆಟಿವ್ ಬಂದಿತು. ಅಲ್ಲಿಂದ ಬಂದ ಮೇಲೂ ಆರ್‍ಟಿ-ಪಿಸಿಆರ್ ಟೆಸ್ಟ್ ಮಾಡಿ ಸಿದ್ದು, ಅದು ಕೂಡ ನೆಗೆಟಿವ್ ಬಂದಿತು. ನನ್ನಿಂದ ಯಾರಿಗೂ ತೊಂದರೆ ಆಗಬಾರದು. ನನ್ನ ಜೊತೆ ಬಂದವರು ಟೆಸ್ಟ್ ಮಾಡಿ ಸಿದ್ದು, ಅವರ ವರದಿಯೂ ನೆಗೆಟಿವ್ ಬಂದಿದೆ ಎಂದು ತಿಳಿಸಿದರು.

ಬೆಂಗಳೂರಿನಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿವೆ. ಕೊರೊನಾ ನಿಯಂತ್ರಣಕ್ಕೆ ಕೆಲವು ಕಟ್ಟುನಿಟ್ಟಿನ ಕ್ರಮ ತೆಗೆದು ಕೊಳ್ಳುವುದು ಅನಿವಾರ್ಯ. ಬೆಂಗಳೂರಿನಲ್ಲಿ ಶವ ಸಂಸ್ಕಾರದ ವಿಚಾರವಾಗಿ ಒಂದೆರಡು ನ್ಯೂನತೆಗಳಿತ್ತು. ಅದನ್ನು ನಿನ್ನೆ ಸಭೆ ನಡೆಸಿ, ಸರಿಪಡಿಸಲಾಗಿದೆ. ಕೊರೊನಾ ದಿನೇ ದಿನೆ ದ್ವಿಗುಣ ಆಗುತ್ತಿದೆ. ಹೀಗಾಗಿ ಪರೀಕ್ಷೆ ಪ್ರಮಾಣವನ್ನೂ ಹೆಚ್ಚಿಸಲಾಗಿದೆ. ಎಲ್ಲಾ ಮುನ್ನೆಚ್ಚರಿಕೆ ತೆಗೆದುಕೊಳ್ಳುತ್ತಿದ್ದೇವೆ. ಜನ ಗಾಬರಿ ಯಾಗುವ ಬದಲಿಗೆ ಮುನ್ನೆಚ್ಚರಿಕೆ ವಹಿಸಬೇಕು. ಮೈಸೂರಲ್ಲೂ ಕೂಡ ಜಾಸ್ತಿ ಆಗುತ್ತಿದೆ. ಜನ ಅನವಶ್ಯಕ ಓಡಾಟ ನಿಲ್ಲಿಸಬೇಕು. ಸಭೆ-ಸಮಾರಂಭ ಕಡಿಮೆ ಮಾಡಬೇಕು ಎಂದು ಕೋರಿದರು.

Translate »