ಒಕ್ಕಲಿಗರ ಯುವ ವೇದಿಕೆ ವತಿಯಿಂದ  ಹೇಮಂತ್‍ಕುಮಾರ್‍ಗೌಡರಿಗೆ ಅಭಿನಂದನೆ
ಮೈಸೂರು

ಒಕ್ಕಲಿಗರ ಯುವ ವೇದಿಕೆ ವತಿಯಿಂದ ಹೇಮಂತ್‍ಕುಮಾರ್‍ಗೌಡರಿಗೆ ಅಭಿನಂದನೆ

April 18, 2021

ಮೈಸೂರು, ಏ.17(ಆರ್‍ಕೆ)- ಮೈಸೂ ರಿನ ದಿ ಇನ್‍ಸ್ಟಿಟ್ಯೂಷನ್ ಆಫ್ ಇಂಜಿನಿ ಯರ್ಸ್ ಸಭಾಂಗಣದಲ್ಲಿ ಇಂದು ಏರ್ಪ ಡಿಸಿದ್ದ ಸಮಾರಂಭದಲ್ಲಿ ಜಿಲ್ಲಾ ಒಕ್ಕಲಿಗರ ಯುವ ವೇದಿಕೆಯಿಂದ ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಎ. ಹೇಮಂತಕುಮಾರ್‍ಗೌಡ ಅವರನ್ನು ಆತ್ಮೀಯವಾಗಿ ಅಭಿನಂದಿಸಲಾಯಿತು.

ಆದಿಚುಂಚನಗಿರಿ ಮಹಾಸಂಸ್ಥಾನ ಮೈಸೂರು ಶಾಖಾ ಮಠದ ಮುಖ್ಯಸ್ಥ ರಾದ ಶ್ರೀ ಸೋಮೇಶ್ವರನಾಥ ಸ್ವಾಮೀಜಿ ಅವರು ಸಾನಿಧ್ಯ ವಹಿಸಿದ್ದ ಸಮಾರಂಭ ದಲ್ಲಿ ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಟಿ.ರವಿಕುಮಾರ್, ಹೇಮಂತಕುಮಾರ್ ಅವರನ್ನು ಆತ್ಮೀಯ ವಾಗಿ ಅಭಿನಂದಿಸಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಖ್ಯಾತ ಸಾಹಿತಿ ಸಿ.ಪಿ.ಕೃಷ್ಣಕುಮಾರ್, ಸಮಾಜಮುಖಿ ಸೇವೆ, ಸಾಧನೆ ಹಾಗೂ ಹೋರಾಟದ ಮೂಲಕ ಬೆಳೆದುಬಂದ ಹೇಮಂತಕುಮಾರ್‍ಗೌಡರು, ಹಲವು ಸೋಲು-ಗೆಲುವು ಕಂಡಿದ್ದಾರೆ.

ಬೇರೆಯವರಿಗಾಗಿ ಬದುಕುವವರು, ಸಮಾಜ, ಜನರನ್ನು ಪ್ರೀತಿಸುವವರು ಶ್ರೇಷ್ಠರೆನಿಸುತ್ತಾರೆ. ಮಾನವೀಯತೆಯನ್ನು ಮೈಗೂಡಿಸಿಕೊಂಡು ಬದುಕಿದಾಗ ಒಂದಲ್ಲಾ ಒಂದು ದಿನ ಒಳ್ಳೆಯದಾಗುತ್ತದೆ ಎಂಬು ದಕ್ಕೆ ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿ ಕಾರದ ಅಧ್ಯಕ್ಷ ಹೇಮಂತಕುಮಾರ್‍ಗೌಡ ನಿದರ್ಶನ ಎಂದರು.

ವಿದ್ಯಾರ್ಥಿ ದಿಸೆಯಲ್ಲೇ ನಾಯಕತ್ವ ಗುಣ ಬೆಳೆಸಿಕೊಂಡು ಎಬಿವಿಪಿ ಮೂಲಕ ವಿದ್ಯಾರ್ಥಿಗಳ ಪರ ಹೋರಾಟ ನಡೆಸಿ, ಗಿಡ ನೆಡುವ ಮೂಲಕ ನಿಸರ್ಗ ಪ್ರೇಮ ಮೆರೆದ ಹೇಮಂತ್‍ಕುಮಾರ್‍ಗೌಡರು ರಕ್ತದಾನವೂ ಸೇರಿದಂತೆ ಹಲವು ವಿಧ ದಲ್ಲಿ ಸಮಾಜ ಸೇವೆಗೆ ಸಂದ ಗೌರವ ಇದಾಗಿದೆ ಎಂದು ಸಿಪಿಕೆ ನುಡಿದರು.

ಜಿಲ್ಲಾ ಒಕ್ಕಲಿಗರ ಯುವ ವೇದಿಕೆ ಅಧ್ಯಕ್ಷ ರಾಜಕುಮಾರ್ ಅಧ್ಯಕ್ಷತೆ ವಹಿಸಿದ್ದ ಸಮಾ ರಂಭದಲ್ಲಿ ಪ್ರಧಾನ ಕಾರ್ಯದರ್ಶಿ ಮಾಜಿ ಕಾರ್ಪೋರೇಟರ್ ಪಿ.ಪ್ರಶಾಂತಗೌಡ ಪ್ರಾಸ್ತಾವಿಕ ನುಡಿಗಳನ್ನಾಡಿದರು. ವೇದಿಕೆ ಪದಾಧಿಕಾರಿಗಳಾದ ಎ.ರವಿ, ಶ್ರೀನಿವಾಸ, ಹಿನಕಲ್ ನಾಗೇಂದ್ರ, ವಾಸು, ವೇದರಾಜ್, ಸ್ನೇಹ, ಮಂಜು, ಸತೀಶ, ಮಹೇಶ ಹಾಗೂ ಇತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Translate »