ಗುಂಡ್ಲುಪೇಟೆ,ಮಾ-22(ಸೋಮ್. ಜಿ)- ಕೊರೊನಾ ತಡೆಗಟ್ಟಲು ಭಾನುವಾರ ಇಡೀ ದಿನ ಮನೆಯಲ್ಲಿಯೇ ಇರುವಂತೆ ಪ್ರಧಾನಿ ನರೇಂದ್ರ ಮೋದಿ ಕರೆ ಕೊಟ್ಟಿದ್ದ ಜನತಾ ಕಫ್ರ್ಯೂಗೆ ಪಟ್ಟಣದ ಹಾಗೂ ತಾಲೂಕಿ ನಾದ್ಯಂತ ಉತ್ತಮ ಬೆಂಬಲ ದೊರಕಿದೆ.
ಜನತಾ ಕಫ್ರ್ಯೂ ಹಿನ್ನೆಲೆಯಲ್ಲಿ ಪಟ್ಟಣ ಹಾಗೂ ಗ್ರಾಮಾಂತರ ಪ್ರದೇಶಗಳ ಜನರೂ ಕೂಡ ತಮ್ಮ ತುರ್ತು ಕೆಲಸಗಳನ್ನು ಹೊರತು ಪಡಿಸಿ ಮನೆಯಲ್ಲಿಯೇ ಉಳಿದು ಬೆಂಬಲಿಸಿದರು. ಶಾಲಾ ಕಾಲೇಜುಗಳಿಗೆ ರಜೆ ಇದ್ದುದರಿಂದ ಮಕ್ಕಳು ಪಾಲಕರ ಜತೆಗೆ ಇದ್ದರು. ಸದಾ ಟ್ರಾಫಿಕ್ ಕಿರಿಕಿರಿ ಯಿದ್ದ ಹೆದ್ದಾರಿಗಳು ಭಣಗುಡುತ್ತಿತ್ತು. ಕೆಲವು ಯುವಕರು ಮಾತ್ರ ಬೈಕುಗಳಲ್ಲಿ ಸುತ್ತಾಡು ತ್ತಿದ್ದರು. ಸಾರಿಗೆ ಬಸ್ಸುಗಳು ರಸ್ತೆಗಿಳಿಯದ ಪರಿಣಾಮ ಇಡೀ ಸಂಚಾರ ವ್ಯವಸ್ಥೆ ಸಂಪೂರ್ಣ ಸ್ಥಗಿತಗೊಂಡಿತ್ತು. ಗ್ರಾಮಾಂ ತರ ಪ್ರದೇಶಗಳಿಂದ ಕಾರ್ಯನಿಮಿತ್ತ ಪಟ್ಟಣಕ್ಕೆ ಬರಲು ಸಾರ್ವಜನಿಕರು ದ್ವಿಚಕ್ರ ವಾಹನ ಇಲ್ಲವೇ ಆಟೋಗಳನ್ನು ಅವಲಂಬಿಸಬೇಕಾಗಿತ್ತು.
ಭಾನುವಾರ ನಿಗದಿಯಾಗಿದ್ದ ಮದುವೆ ಗಳನ್ನು ಕೊರೊನಾ ಹಿನ್ನೆಲೆಯಲ್ಲಿ ತರಾ ತುರಿಯಲ್ಲಿ ಮಾಡಿ ಮುಗಿಸಲಾಯಿತು. ಮದುವೆಗಳನ್ನೂ ಬೆಳಗ್ಗೆ 10 ಗಂಟೆಯ ಒಳಗೆ ಮುಗಿಸುವಂತೆ ತಾಲೂಕು ಆಡಳಿತ ಸೂಚನೆ ನೀಡಿದ್ದರಿಂದ ಶನಿವಾರ ರಾತ್ರಿಯೇ ಬಹುತೇಕ ಆಹ್ವಾನಿತರ ಸಮ್ಮುಖದಲ್ಲಿ ಮದುವೆ ಕಾರ್ಯ ನಡೆಸಲಾಗಿತ್ತು. ಬೆಳಗ್ಗೆ ಬೆರಳೆಣಿಕೆಯಷ್ಟು ಆಹ್ವಾನಿತರ ಸಮ್ಮುಖ ದಲ್ಲಿ ಮಾಂಗಲ್ಯಧಾರಣೆ ಶಾಸ್ತ್ರ ಮುಗಿಸಿ ಕಲ್ಯಾಣಮಂಟಪದಿಂದ ಮನೆಗೆ ತೆರಳಿದರು.
ಕೇರಳದ ಗಡಿಯಾದ ಮೂಲೆಹೊಳೆ ಹಾಗೂ ತಮಿಳುನಾಡಿನ ಗಡಿಯಾದ ಕೆಕ್ಕನಹಳ್ಳ ಚೆಕ್‍ಪೆÇೀಸ್ಟುಗಳಲ್ಲಿ ಬಿಗಿ ಬಂದೋಬಸ್ತ್ ಆಯೋಜಿಸಲಾಗಿತ್ತು. ಮೂರು ರಾಜ್ಯಗಳ ಆರೋಗ್ಯಾಧಿಕಾರಿ ಗಳು ತಮ್ಮ ಚೆಕ್ ಪೆÇೀಸ್ಟುಗಳಲ್ಲಿ ಬೀಡುಬಿಟ್ಟು ಕಟ್ಟುನಿಟ್ಟಿನ ತಪಾಸಣೆ ಕೈಗೊಂಡಿದ್ದರು. ಮೂಲೆಹೊಳೆ ಗೇಟ್ ಬಳಿ ಆರೋಗ್ಯ ಇಲಾಖೆಯ ಸಿಬ್ಬಂದಿ ಡಾ.ರವಿ ನೇತೃತ್ವದಲ್ಲಿ ಶಂಕಿತರ ತಪಾಸಣೆ ಮಾಡಿದರು.
ಅಮಾವಾಸ್ಯೆ ಪೂಜೆ ರದ್ದು: ಕೊರೊನಾ ಹಿನ್ನೆಲೆಯಲ್ಲಿ ಮಾ.24ರ ಮಂಗಳವಾರ ಪಡಗೂರು ಅಡವಿ ಮಠದಲ್ಲಿ ಅಮಾವಾಸ್ಯೆ ಆರಾಧನೆ ಹಾಗೂ ಪ್ರಸಾದ ವಿನಿಯೋಗ ವನ್ನು ರದ್ದುಗೊಳಿಸಲಾಗಿದೆ. ಜಿಲ್ಲಾಡಳಿತ ಕೊರೊನಾ ತಡೆಗಟ್ಟಲು ಹೊರಡಿಸಿರುವ ಆದೇಶ ಪಾಲಿಸುವ ಸಲುವಾಗಿ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಮಠಾಧ್ಯಕ್ಷರಾದ ಶ್ರೀ ಶಿವಲಿಂಗೇಂದ್ರಸ್ವಾಮೀಜಿ ತಿಳಿಸಿದ್ದಾರೆ.