ಬೆಂಗಳೂರು: ಇಂದು ಎಲ್ಲಾ ಹಿರಿಯ ಅಧಿಕಾರಿಗಳು, ಎಸ್ಪಿಗಳ ಜೊತೆ ಚರ್ಚೆ ನಡೆಸಿದ್ದೇವೆ. 15 ದಿನದಿಂದ ರಾಜ್ಯ ಸರ್ಕಾರ ಕೊರೊನಾ ಮುಂಜಾಗ್ರತಾ ಕ್ರಮ ಕೈಗೊಂಡಿದೆ. ಅವುಗಳ ಜಾರಿ ಬಗ್ಗೆ ಚರ್ಚೆ ಆಗಿದೆ. ಮುಂದಿನ ಎರಡು ವಾರ ಪ್ರಮುಖವಾದದ್ದು ಎಂದು ಪ್ರಧಾನಿಗಳು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಪೆÇಲೀಸ್ ಇಲಾಖೆ ಸಜ್ಜಾಗುವ ಬಗ್ಗೆ ಚರ್ಚೆ ಆಗಿದೆ. ನಮ್ಮ ಸಿಬ್ಬಂದಿ ದೊಡ್ಡ ಪ್ರಮಾಣದಲ್ಲಿ ಸಹಕಾರ ಕೊಡುತ್ತಿದ್ದಾರೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.
ಹಿರಿಯ ಪೆÇಲೀಸ್ ಅಧಿಕಾರಿಗಳ ಜೊತೆಗಿನ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಸವರಾಜ್ ಬೊಮ್ಮಾಯಿ, ಕ್ವಾರಂಟೇನ್‍ಗೆ ನಮ್ಮ ಸಿಬ್ಬಂದಿಗಳೇ ಹೆಚ್ಚು ಕರ್ತವ್ಯ ನಿರ್ವ ಹಿಸುತ್ತಿದ್ದಾರೆ. ಸಿಬ್ಬಂದಿ ರಕ್ಷಣೆ ಕೂಡ ನಮ್ಮ ಕರ್ತವ್ಯ. ಹೀಗಾಗಿ ಪೆÇಲೀಸರು ಹಾಗೂ ವೈದ್ಯರ ರಕ್ಷಣೆ ಮಾಡುವಂತೆ ಪ್ರಧಾನಿಗಳು ಹೇಳಿದ್ದಾರೆ. ಪೆÇಲೀಸರು ಸುರಕ್ಷಿತವಾಗಿ ಕೆಲಸ ಮಾಡುವ ಬಗ್ಗೆ ಸೂಚನೆ ಕೊಡಲಾಗಿದೆ ಎಂದರು.
ಗಡಿ ಪ್ರದೇಶಗಳಲ್ಲಿ ಎಚ್ಚರಿಕೆ ಕ್ರಮ ತೆಗೆದುಕೊಳ್ಳುವ ಬಗ್ಗೆ ಚರ್ಚೆ ಮಾಡ ಲಾಗಿದೆ. ಮಹಾರಾಷ್ಟ್ರ, ತೆಲಂಗಾಣ, ಕೇರಳ ಗಡಿಯ ಚೆಕ್‍ಪೆÇೀಸ್ಟ್‍ನಲ್ಲಿ ಕಟ್ಟು ನಿಟ್ಟಾಗಿ ಸ್ಕ್ರೀನಿಂಗ್ ಮಾಡಬೇಕು. ಅಲ್ಲಿ ಬಹಳ ನಿಗಾ ವಹಿಸುವಂತೆ ಸೂಚನೆ ಕೊಟ್ಟಿದ್ದೇವೆ. ಗಡಿ ಭಾಗಗಳಲ್ಲಿ ವಾಹನ ತಪಾಸಣೆ ಕಡ್ಡಾಯ ಮಾಡಲಾಗಿದೆ. ಪ್ರವಾಸೋದ್ಯಮ ಸ್ಥಳಗಳಿಗೆ ಪ್ರವಾಸಿಗರು ಬರದಂತೆ ನೋಡಿಕೊಳ್ಳಲು ಸೂಚನೆ ನೀಡಲಾಗಿದೆ. ಗೃಹ ಇಲಾಖೆ ಆರೋಗ್ಯ ಇಲಾಖೆ ಜೊತೆ ಸಂಪೂರ್ಣವಾಗಿ ಬೆಂಬಲವಾಗಿ ನಿಂತಿದೆ. ನಾವು ಈ ವೈರಸ್ ವಿರುದ್ಧ ಹೋರಾಟ ಮಾಡಲು ಸಜ್ಜಾಗಿದ್ದೇವೆ ಎಂದರು. ಜನತಾ ಕರ್ಫ್ಯೂಗೆ ಕರೆ ವಿಚಾರವಾಗಿ ಮಾತನಾಡಿದ ಬೊಮ್ಮಾಯಿ, ಇದು ಸ್ವಯಂಪ್ರೇರಣೆಯಿಂದ ಮಾಡುವಂತಹದ್ದು. ಹೀಗಾಗಿ ಜನರು ಸ್ವಯಂಪ್ರೇರಣೆಯಿಂದ ಅನುಸರಿಸ ಬೇಕು. ಗೃಹ ಬಂಧನದಲ್ಲಿ ಇರುವವರ ಮನೆ ಮುಂದೆ ಪೆÇಲೀಸ್ ಬೆಳಿಗ್ಗೆ-ಸಂಜೆ ಗಸ್ತು ತಿರುಗಿ ಪರಿಶೀಲನೆ ನಡೆಸು ತ್ತಾರೆ. ಸಂಜೆ 5ಕ್ಕೆ ಪೆÇಲೀಸರು, ಆರೋಗ್ಯ ಸಚಿವರು ಒಟ್ಡಾಗಿ ಚಪ್ಪಾಳೆ ತಟ್ಟುತ್ತಾರೆ. ಈ ಮೂಲಕ ಜನರ ರಕ್ಷಣೆಗೆ ನಾವಿದ್ದೇವೆ ಎಂಬ ಸಂದೇಶ ಕೊಡಲಿದ್ದಾರೆ. ಇದು ಯಾವುದೇ ಒತ್ತಾಯಪೂರ್ವಕವಾಗಿ ಮಾಡು ವಂತಹದ್ದು ಅಲ್ಲ ಎಂದರು. ಕೆಲವು ಕಡೆ ಜಾತ್ರೆಗಳು ನಡೆಯುತ್ತಿದ್ದು, ಸರ್ಕಾರದ ಆದೇಶ ಉಲ್ಲಂಘನೆ ಮಾಡಲಾಗುತ್ತಿದೆ. ಈ ಬಗ್ಗೆಯೂ ಕೂಡ ಕಠಿಣ ಕ್ರಮಕೈಗೊಳ್ಳಲು ಸೂಚನೆ ನೀಡಿದ್ದೇವೆ. ಬೆಂಗ ಳೂರಲ್ಲಿ ಬಾರ್ ಆಂಡ್ ರೆಸ್ಟೋರೆಂಟ್, ಕ್ಲಬ್‍ಗಳು, ಮಾಲ್ ಗಳನ್ನು ಓಪನ್ ಮಾಡಿದರೆ ಕಠಿಣ ಕ್ರಮ ಜರುಗಿಸುತ್ತೇವೆ. ರಾಜ್ಯದ ಎಲ್ಲ ಕಡೆಗಳಲ್ಲೂ ಕಠಿಣ ಕ್ರಮ ಜರುಗಿಸುತ್ತೇವೆ ಎಂದು ಗೃಹ ಸಚಿವರು ಎಚ್ಚರಿಕೆ ನೀಡಿದರು.