ಮೈಸೂರು,ಆ.25(ಎಂಕೆ)- ಮದುವೆ ನಿಶ್ಚಿತಾರ್ಥ ದಿನವೇ ವಧುವಿನ 4.15 ಲಕ್ಷ ರೂ. ಮೌಲ್ಯದ 85 ಗ್ರಾಂ ಚಿನ್ನಾ ಭರಣಗಳನ್ನು ಎಗರಿಸಿದ್ದ ಯುವತಿ ಯನ್ನು ಮೇಟಗಳ್ಳಿ ಪೊಲೀಸರು ಬಂಧಿಸಿ ದ್ದಾರೆ. ಆರೋಪಿಯಿಂದ ಎರಡು ನೆಕ್ಲೇಸ್ ಮತ್ತು 1 ಜೊತೆ ಓಲೆ (ಒಟ್ಟು 85 ಗ್ರಾಂ) ವಶಪಡಿಸಿಕೊಂಡಿದ್ದಾರೆ.
ಕುಂಬಾರಕೊಪ್ಪಲಿನ ಸುಭಾಷ್ ನಗರದ ಅಶ್ರಿತಾ(21) ಬಂಧಿತ ಯುವತಿ. ಈಕೆ ಆ.23ರಂದು ಇಲ್ಲಿನ ನಿವಾಸಿ ರಮೇಶ್ ಎಂಬುವರ ಮನೆ ಯಲ್ಲಿ ನಡೆದ ನಿಶ್ಚಿತಾರ್ಥ ಕಾರ್ಯ ಕ್ರಮದಲ್ಲಿ ಭಾಗವಹಿಸಿದ್ದಳು. ಕಾರ್ಯ ಕ್ರಮ ಮುಗಿದ ಬಳಿಕ ವಧು ತಾನು ಧರಿಸಿದ್ದ ಚಿನ್ನಾಭರಣಗಳನ್ನು ಮನೆ ಯಲ್ಲಿಯೇ ಬಿಚ್ಚಿ ಅಲ್ಮೇರಾದಲ್ಲಿ ಇಟ್ಟಿ ದ್ದಾರೆ. ಕೆಲ ಸಮಯದ ಬಳಿಕ ನೋಡಿ ದರೆ ಆಭರಣಗಳು ಕಾಣೆಯಾಗಿರು ವುದು ಗೊತ್ತಾಗಿದೆ. ಈ ಕುರಿತು ಮೇಟ ಗಳ್ಳಿ ಪೊಲೀಸ್ ಠಾಣೆಯಲ್ಲಿ ರಮೇಶ್ ದೂರು ನೀಡಿದ್ದರು. ಮೇಟಗಳ್ಳಿ ಠಾಣೆ ಪೊಲೀಸರು ಅಶ್ರಿತಾಳನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಚಿನ್ನಾ ಭರಣ ಕದ್ದು ಮನೆಯಲ್ಲಿಟ್ಟಿರುವುದಾಗಿ ಹೇಳಿ ತಪ್ಪೊಪ್ಪಿಕೊಂಡಿದ್ದಾಳೆ.