ಇಂದು, ನಾಳೆ ವಿದ್ಯುತ್ ವ್ಯತ್ಯಯ
ಮೈಸೂರು

ಇಂದು, ನಾಳೆ ವಿದ್ಯುತ್ ವ್ಯತ್ಯಯ

August 26, 2020

ಮೈಸೂರು, ಆ.25- ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ ವತಿಯಿಂದ ಆ.26ರಂದು ಮಧ್ಯಾಹ್ನ 12 ಗಂಟೆಯಿಂದ 2 ಗಂಟೆಯವರೆಗೆ ತುರ್ತು ನಿರ್ವಹಣೆ ಸಂಬಂಧ 66 ಕೆ.ವಿ ವಿದ್ಯುತ್ ವಿತರಣಾ ಕೇಂದ್ರವು ಸ್ಥಗಿತಗೊಳ್ಳಲಿದೆ. ಈ ಹಿನ್ನೆಲೆ ಪಿರಿಯಾಪಟ್ಟಣ ಪುರಸಭೆ, ಮುತ್ತೂರು, ಚಿಟ್ಟೇನಹಳ್ಳಿ, ಚೌತಿ, ಮಾಲಂಗಿ, ಕಂಪಲಾಪುರ, ಕೀರನಹಳ್ಳಿ, ಪಂಚವಳ್ಳಿ, ಹುಣಸವಾಡಿ, ಪುನಾಡಹಳ್ಳಿ, ನವಿಲೂರು ಗ್ರಾಮ ಪಂಚಾಯಿತಿಗಳಿಗೆ ಬರುವ ಎಲ್ಲಾ ಗ್ರಾಮಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

ಆ.27ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಸಿದ್ದಿಖ್‍ನಗರ, ಶ್ರೀ ಶಿವರಾತ್ರಿಶ್ವರನಗರ, ಕೊಲಂಬಿಯಾ ಏಷಿಯಾ ಹಾಸ್ಪಿಟಲ್, ಹನುಮಂತನಗರ, ಹುಡ್ಕೊ ‘ಸಿ’ ಲೇಔಟ್, ಕೆ.ಎಸ್.ಆರ್.ಟಿ.ಸಿ. ಲೇಔಟ್, ಇಂಡಸ್ಟ್ರೀಯಲ್ ‘ಬಿ’ ಲೇಔಟ್, ಹೈವೇ ಸರ್ಕಲ್, ಸ್ಟಾರ್ ಆಫ್ ಮೈಸೂರು ಸುತ್ತ-ಮುತ್ತಲಿನ ಪ್ರದೇಶಗಳು, ಫರಹಾ ಕಾಂಪೌಂಡ್ ಮತ್ತು ಕಾವೇರಿ ನಗರ, ಬೆಲವತ್ತ, ಸಾದನಹಳ್ಳಿ, ಸಿದ್ದಲಿಂಗಪುರ, ಕೆ.ಆರ್.ಮಿಲ್, ನಾಗನಹಳ್ಳಿ, ಲಕ್ಷ್ಮೀಪುರ, ಕಳಸ್ತವಾಡಿ, ಬೆಂಗಳೂರು-ಮೈಸೂರು ರಸ್ತೆ, ಸುಭಾಷ್‍ನಗರ, ಕೆಸರೆ1 ಮತ್ತು 2ನೇ ಹಂತ, ಹಾಗೂ ಸುತ್ತ-ಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಸೆಸ್ಕ್ ಪ್ರಕಟಣೆ ತಿಳಿಸಿದೆ.

Translate »